ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್‌ ಟ್ರಂಪ್‌ ಹತ್ಯೆಗೆ ನಾವು ಎದುರುನೋಡುತ್ತಿದ್ದೇವೆ: ಇರಾನ್‌

Last Updated 25 ಫೆಬ್ರುವರಿ 2023, 5:59 IST
ಅಕ್ಷರ ಗಾತ್ರ

ದುಬೈ: ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು 2020ರಲ್ಲಿ ಬಾಗ್ದಾದ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡಿದ ಅಮೆರಿಕ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವ ಮಾತನ್ನು ಇರಾನ್‌ ಪುನರುಚ್ಚರಿಸಿದೆ. ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೊಲ್ಲಲ್ಲು ಎದುರುನೋಡುತ್ತಿರುವುದಾಗಿ ತಿಳಿಸಿದೆ.

1,650 ಕಿಮೀ (1,025 ಮೈಲುಗಳು) ವ್ಯಾಪ್ತಿಯಲ್ಲಿನ ಗುರಿಯ ಮೇಲೆ ದಾಳಿ ಮಾಡಬಲ್ಲ ದೂರಗಾಮಿ ಕ್ರೂಸ್ ಕ್ಷಿಪಣಿಯನ್ನು ಇರಾನ್‌ ಅಭಿವೃದ್ಧಿಪಡಿಸಿದೆ. ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸುವ ವೇಳೆ, ‘ರೆವಲ್ಯೂಷನರಿ ಗಾರ್ಡ್ಸ್ ಏರೋಸ್ಪೇಸ್ ಫೋರ್ಸ್‌’ನ ಮುಖ್ಯಸ್ಥ ಅಮೀರಲಿ ಹಾಜಿಝಾದೆಹ್ ಪ್ರತಿಕಾರದ ಮಾತುಗಳನ್ನಾಡಿದ್ದಾರೆ. ‘ನಾವು (ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್) ಟ್ರಂಪ್ ಅವರನ್ನು ಕೊಲ್ಲಲು ಎದುರುನೋಡುತ್ತಿದ್ದೇವೆ’ ಎಂದು ಅವರು ಹೇಳಿದರು.

‘1,650 ಕಿಮೀ ವ್ಯಾಪ್ತಿಯ ಗುರಿ ಮೇಲೆ ದಾಳಿ ಮಾಡುವ ಸಾಮರ್ಥ್ಯವುಳ್ಳ ನಮ್ಮ ಕ್ರೂಸ್ ಕ್ಷಿಪಣಿಯನ್ನು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಕ್ಷಿಪಣಿ ಶಸ್ತ್ರಾಗಾರ’ಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ’ ಎಂದು ಹಾಜಿಝಾದೆಹ್ ಅವರು ಮಾಧ್ಯಮಗಳಿಗೆ ಹೇಳಿದರು.

‘ದೇವರ ಇಚ್ಛೆಯಂತೆ ನಾವು ಟ್ರಂಪ್ ಅವರನ್ನು ಕೊಲ್ಲಲು ಎದುರು ನೋಡುತ್ತಿದ್ದೇವೆ. ಜತೆಗೆ, (ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್) ಪಾಂಪೆಯೊ ಮತ್ತು ಮಿಲಿಟರಿ ಕಮಾಂಡರ್‌ಗಳನ್ನು ಕೊಲ್ಲಲೇಬೇಕು’ ಎಂದು ಹಾಜಿಜಾದೆ ಹೇಳಿದರು.

ಸುಲೇಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿರುವ ಇರಾನ್ ನಾಯಕರು ಆಗಾಗ್ಗೆ ಅಮೆರಿಕ ವಿರುದ್ಧ ಕಟುವಾದ ಪದಗಳನ್ನು ಬಳಸಿ ಹರಿಹಾಯುತ್ತಾರೆ.

ಖಾಸಿಂ ಸುಲೇಮಾನಿ ಹತ್ಯೆ ನಂತರ ಇರಾಕ್‌ನಲ್ಲಿನ ಅಮೆರಿಕ ಪಡೆಗಳನ್ನು ಗುರಿಯಾಗಿಸಿ ಇರಾನ್‌ ಹಲವಾರು ಬಾರಿ ಕ್ಷಿಪಣಿ ದಾಳಿ ನಡೆಸಿದೆ. ಆದರೆ, ‘ಬಡ ಸೈನಿಕರನ್ನು ಕೊಲ್ಲುವ ಉದ್ದೇಶವನ್ನು ಹೊಂದಿಲ್ಲ’ ಎಂದು ಹಾಜಿಝಾದೆಹ್ ಹೇಳಿದ್ದಾರೆ.

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಇರಾನ್‌ನ ಡ್ರೋನ್‌ಗಳನ್ನು ರಷ್ಯಾ ಬಳಸಿರುವ ಆರೋಪಗಳಿವೆ. ಈ ಮಧ್ಯೆ, ಇರಾನ್‌ 1,650 ಕಿ.ಮೀ ವ್ಯಾಪ್ತಿಯ ದೂರಗಾಮಿ ಕ್ರೂಸ್‌ ಕ್ಷಿಪಣಿ ಅಭಿವೃದ್ಧಿಪಡಿಸಿರುವ ವಿಚಾರ ಪಾಶ್ಚಾತ್ಯರ ಕಳವಳಕ್ಕೆ ಕಾರಣವಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT