ಬುಧವಾರ, ಆಗಸ್ಟ್ 17, 2022
26 °C

ಶ್ವೇತಭವನದ ಸಂವಹನ ನಿರ್ದೇಶಕಿ ಸ್ಥಾನಕ್ಕೆ ಫರ‍್ಹಾ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಡೊನಾಲ್ಡ್ ಟ್ಂಪ್ ಆಡಳಿತದಲ್ಲಿ ಮೂರು ವರ್ಷಗಳಿಂದ ಶ್ವೇತಭವನದ ಸಂವಹನ ವಿಭಾಗದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದ ಅಲ್ಯಾಸ್ಸಾ ಫರ‍್ಹಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ಆಡಳಿತ ಆರಂಭವಾಗಲು ಇನ್ನೂ 50 ದಿನಗಳಿರುವಂತೆಯೇ ಫರ‍್ಹಾ ರಾಜೀನಾಮೆ ನೀಡಿದ್ದಾರೆ. ಗುರುವಾರ ಫರ‍್ಹಾ ಅವರ ರಾಜೀನಾಮೆ ವಿಚಾರವನ್ನು ಶ್ರೇತಭವನ ಪ್ರಕಟಿಸಿದೆ.

‘ಟ್ರಂಪ್ ಆಡಳಿತದಲ್ಲಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಜೀವಮಾನದ ಅತ್ಯಂತ ಗೌರವಯುತ ಸಮಯವಾಗಿದೆ‘ ಎಂದು ಫರ‍್ಹಾ ರಾಜೀನಾಮೆ ಸಲ್ಲಿಸಿದ ನಂತರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶುಕ್ರವಾರ ಶ್ವೇತಭವನದಲ್ಲಿ ಫರ‍್ಹಾ ಅವರ ಸೇವೆಯ ಕೊನೆಯ ದಿನವಾಗಿದೆ.

ಶ್ವೇತಭವನದ ಸಂವಹನ ನಿರ್ದೇಶಕರಾಗುವ ಮೊದಲು, ಫರ‍್ಹಾ ಅವರು ರಕ್ಷಣಾ ಕಾರ್ಯದರ್ಶಿಯ ಪತ್ರಿಕಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು