ಮಂಗಳವಾರ, ಏಪ್ರಿಲ್ 20, 2021
26 °C

ಕೋವಿಡ್-19 ಲಸಿಕೆ; ಪ್ರಧಾನಿ ಮೋದಿ ಬದ್ಧತೆಗೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಿನೇವಾ: ಕೊರೊನಾ ವೈರಸ್ ಪಿಡುಗು ನಿಯಂತ್ರಿಸುವ ಸಲುವಾಗಿ ಕೋವಿಡ್-19 ಲಸಿಕೆಗಳನ್ನು ಜಗತ್ತಿನ 60ಕ್ಕೂ ಹೆಚ್ಚು ದೇಶಗಳೊಂದಿಗೆ ಹಂಚಿಕೊಳ್ಳುವ ಮೂಲಕ ಭಾರತ ಪ್ರಧಾನಿ ನರೇಂದ್ರ ಮೋದಿ ಬದ್ಧತೆಯನ್ನು ಶ್ಲಾಘಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ , ಇತರೆ ದೇಶಗಳು ಇದೇ ಮಾದರಿಯನ್ನು ಅನುಸರಿಸಲಿದೆ ಎಂದು ಆಶಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಡಬ್ಲ್ಯುಎಚ್‌ಒ ಮುಖ್ಯಸ್ಥ, ಭಾರತದ ಕೋವಿಡ್-19 ಲಸಿಕೆ ವಿತರಣೆಯು 60ಕ್ಕೂ ಹೆಚ್ಚು ದೇಶಗಳಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.

ವ್ಯಾಕ್ಸಿನೇಷನ್ ಸಮಾನವಾಗಿ ಹಂಚಿಕೊಳ್ಳಲು ನೆರವಾಗಿದ್ದಕ್ಕಾಗಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕೋವಾಕ್ಸ್ ಯೋಜನೆಯೊಂದಿಗಿನ ನಿಮ್ಮ ಬದ್ಧತೆಯು 60ಕ್ಕೂ ಹೆಚ್ಚು ದೇಶಗಳಲ್ಲಿನ ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಮುಂಚೂಣಿಯ ಸೇನಾನಿಗಳಿಗೆ ಕೋವಿಡ್-19 ಲಸಿಕೆ ಹಂಚಲು ನೆರವಾಗುತ್ತಿದೆ. ನಿಮ್ಮ ಮಾದರಿಯನ್ನು ಇತರೆ ದೇಶಗಳು ಅನುಸರಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಗೆಬ್ರಿಯೆಸಸ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 

ಬುಧವಾರದಂದು ಯುನಿಸೆಫ್ ಸಹಯೋಗದೊಂದಿಗೆ ಭಾರತವು ಆಫ್ರಿಕಾ ಖಂಡದ ಘಾನಾ ದೇಶಕ್ಕೆ ಕೋವಾಕ್ಯ್ ಸೌಲಭ್ಯದಡಿಯಲ್ಲಿ ಆರು ಲಕ್ಷ ಕೋವಿಡ್-19 ಲಸಿಕೆ ಡೋಸ್‌ಗಳನ್ನು ರವಾನಿಸಿದೆ.

ಜಗತ್ತಿನ ಬಡ ರಾಷ್ಟ್ರಗಳಿಗೂ ಕೋವಿಡ್-19 ಲಸಿಕೆಗಳನ್ನು ಸಮಾನವಾಗಿ ಹಂಚಿಕೊಳ್ಳುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದಲ್ಲಿ ಕೋವಾಕ್ಸ್ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಮೈತ್ರಿಕೂಟದಲ್ಲಿ 92 ರಾಷ್ಟ್ರಗಳು ಸಹಿ ಹಾಕಿದೆ.

ವಿಶ್ವದ ಅತಿ ದೊಡ್ಡ ಔಷಧಿ ತಯಾರಿಕಾ ದೇಶವಾಗಿರುವ ಭಾರತವು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ ನೆರೆಯ ರಾಷ್ಟ್ರಗಳಿಗೆ ಉಡುಗೊರೆಯಾಗಿ ಕೋವಿಡ್-19 ಲಸಿಕೆಗಳನ್ನು ವಿತರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು