ಗುರುವಾರ , ಜುಲೈ 7, 2022
25 °C

ಕೋವ್ಯಾಕ್ಸಿನ್‌ ಕೋವಿಡ್ ಲಸಿಕೆ: ಹೆಚ್ಚುವರಿ ಸ್ಪಷ್ಟನೆ ಕೋರಿದ ಡಬ್ಲ್ಯುಎಚ್‌ಒ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಿನೀವಾ: ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್‌–19 ಲಸಿಕೆ ಕೋವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ತಾಂತ್ರಿಕ ಸಲಹಾ ಸಮಿತಿಯು ‘ಹೆಚ್ಚುವರಿ ಸ್ಪಷ್ಟನೆಗಳನ್ನು’ ಕೋರಿದೆ.

ಲಸಿಕೆಯ ತುರ್ತು ಬಳಕೆಗೆ ಮಾನ್ಯತೆ ನೀಡಲು ಅಂತಿಮ ಪರಿಶೀಲನೆಗಾಗಿ ಈ ಸ್ಪಷ್ಟನೆಗಳು ಅಗತ್ಯ ಎಂದೂ ತಿಳಿಸಿದೆ. ಸಮಿತಿಯು ಈಗ ಅಂತಿಮ ಪರಿಶೀಲನೆಗಾಗಿ ನವೆಂಬರ್‌ 3ರಂದು ಮತ್ತೆ ಸಭೆ ಸೇರಲಿದೆ.

‘ದತ್ತಾಂಶಗಳನ್ನು ಸಮಿತಿಯು ಪರಿಶೀಲನೆಗೆ ಒಳಪಡಿಸಿದೆ. ತೃಪ್ತಿಕರ ಎನಿಸಿದಲ್ಲಿ 24 ತಾಸಿನಲ್ಲಿ ತುರ್ತು ಬಳಕೆಗೆ ಮಾನ್ಯತೆ ಸಿಗಲಿದೆ‘ ಎಂದು ಡಬ್ಲ್ಯುಎಚ್‌ಒ ವಕ್ತಾರರಾದ ಡಾ.ಮಾರ್ಗರೆಟ್‌ ಹ್ಯಾರಿಸ್‌ ಇದಕ್ಕೂ ಮೊದಲು ತಿಳಿಸಿದ್ದರು.

ಲಸಿಕೆಯ ತುರ್ತು ಬಳಕೆಗೆ ಮಾನ್ಯತೆ ನೀಡಲು ಕೋರಿ, ಇದನ್ನು ಅಭಿವೃದ್ಧಿಪಡಿಸಿರುವ ಹೈದರಾಬಾದ್‌ ಮೂಲದ ಭಾರತ್ ಬಯೊಟೆಕ್‌ ಸಂಸ್ಥೆಯು ಈ ವರ್ಷದ ಏಪ್ರಿಲ್‌ 19ರಂದು ದತ್ತಾಂಶಗಳನ್ನು ಒದಗಿಸಿತ್ತು.

ತಾಂತ್ರಿಕ ಸಲಹಾ ಸಮಿತಿ ಉತ್ಪಾದಕ ಸಂಸ್ಥೆಯಿಂದ ಹೆಚ್ಚುವರಿ ಸ್ಪಷ್ಟನೆ ಪಡೆಯಲು ನಿರ್ಧರಿಸಿದೆ. ವಾರಾಂತ್ಯದ ವೇಳೆಗೆ ವಿವರ ಸಿಗಬಹುದು. ನ.3ರಂದು ಮತ್ತೆ ಸಮಿತಿ ಸಭೆ ಸೇರಲಿದೆ‘ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ಮಾನದಂಡಗಳಿಗೆ ಅನುಗುಣವಾಗಿ ಯಾವುದೇ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಪರಿಗಣಿಸಬಹುದೇ ಎಂದು ಡಬ್ಲ್ಯೂಎಚ್‌ಒಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಲಿದ್ದು, ಇದು ಸ್ವಾಯತ್ತ ಸಂಸ್ಥೆಯಾಗಿದೆ.

ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಭಾರತದಲ್ಲಿ ಆಗಲೇ ಅನುಮತಿ ನೀಡಲಾಗಿದೆ.ಕೋವ್ಯಾಕ್ಸಿನ್ ಅಲ್ಲದೆ, ಆಸ್ಟ್ರಾ ಜೆನೆಕಾ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಕೋವಿಶೀಲ್ಡ್‌ ಲಸಿಕೆಯು ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು