ಭಾನುವಾರ, ಜನವರಿ 24, 2021
27 °C

ಕ್ರಿಸ್‌ ಮಸ್ ಆಚರಣೆ ವೇಳೆ ಕೋವಿಡ್ ಆತಂಕ, ಮಾಸ್ಕ್ ಧರಿಸಿ: ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಪನ್ ಹೇಗನ್: 2021ರ ಆರಂಭದಲ್ಲಿ ಕೋವಿಡ್ 19 ಸೋಂಕು ಮತ್ತಷ್ಟು ಹರಡುವ ಆತಂಕವಿರುವುದರಿಂದ ಕ್ರಿಸ್ ಮಸ್ ಆಚರಣೆ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಯೂರೋಪಿನ ಕುಟುಂಬಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ.

ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಕೊಂಚ ಪ್ರಗತಿ ಸಾಧಿಸಿದ್ದರೂ ಸಹ ಯೂರೋಪಿನ ಹಲವೆಡೆ ಕೊರೋನಾ ಸೋಂಕಿನ ಹಬ್ಬುವಿಕೆ ವ್ಯಾಪಕವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

"2021 ಆರಂಭಿಕ ವಾರಗಳು ಮತ್ತು ತಿಂಗಳಲ್ಲಿ ಸೋಂಕು ಹರಡುವ ಸಾಧ್ಯತೆ ತೀರಾ ಹೆಚ್ಚಾಗಿದೆ. ಈ ಸೋಂಕಿನ ಹರಡುವಿಕೆ ತಪ್ಪಿಸಲು ನಾವು ಬದ್ಧವಾಗಿದ್ದರೆ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಾದ ಅಗತ್ಯವಿದೆ ," ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ನಿಮ್ಮ ನಿರ್ಧಾರಗಳ ಕಡೆಗಣನೆ ಮಾಡದೆ ಕ್ರಿಸ್ ಮಸ್ ಸಮಾರಂಭಗಳಲ್ಲಿ ಹೆಚ್ಚು ಹೆಚ್ಚು ಕಾಳಜಿವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಸಾಧ್ಯವಾದರೆ, ಮನೆ ಬಿಟ್ಟು ಹೊರಗಡೆ ಕ್ರಿಸ್ ಮಸ್ ಆಚರಣೆ ಮಾಡಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದೆ.

ಮನೆಯೊಳಗೆ ಹಬ್ಬ ಆಚರಿಸುವುದಾದರೆ, ಕಡಿಮೆ ಜನರಿರಲಿ, ಹೊರಗಿನ ಗಾಳಿ ಬರುವಂತೆ ನೋಡಿಕೊಳ್ಳಿ. ಇದರಿಂದ ಸೋಂಕಿನ ಹರಡುವಿಕೆಯ ರಿಸ್ಕ್ ಕಡಿಮೆಯಾಗುತ್ತದೆ ಎಂದು ಆರೋಗ್ಯ ಸಂಸ್ಥೆ ಮನವಿ ಮಾಡಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು