ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನ್ಯಾದ ಅಧ್ಯಕ್ಷರಾಗಿ ವಿಲಿಯಂ ರುಟೊ ಪ್ರಮಾಣ ವಚನ

Last Updated 13 ಸೆಪ್ಟೆಂಬರ್ 2022, 12:46 IST
ಅಕ್ಷರ ಗಾತ್ರ

ನೈರೊಬಿ: ಕೆನ್ಯಾದ ನೂತನ ಅಧ್ಯಕ್ಷರಾಗಿ ವಿಲಿಯಂ ರುಟೊ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಆಗಸ್ಟ್ 9ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಲಿಯಂ ಅವರು, ವಿರೋಧಪಕ್ಷದ ನಾಯಕ ರೈಲಾ ಒಡಿಂಗಾ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಈ ಗೆಲುವನ್ನು ಪ್ರಶ್ನಿಸಿ ಎದುರಾಗಳಿಗಳು ಅಲ್ಲಿನ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಅರ್ಜಿಯನ್ನು ಕಳೆದ ವಾರ ತಿರಸ್ಕರಿಸಿತ್ತು.

ಪರಸ್ಪರರ ನಡುವಿನ ವೈಮನಸ್ಸಿನಿಂದಾಗಿ ಕೆನ್ಯಾದ ನಿರ್ಗಮಿತ ಅಧ್ಯಕ್ಷ ಉಹುರು ಹಾಗೂ ವಿಲಿಯಂ ಇಬ್ಬರೂ ಹಲವು ತಿಂಗಳುಗಳಿಂದ ಮಾತುಬಿಟ್ಟಿದ್ದರು. ಮಂಗಳವಾರ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಇಬ್ಬರೂ ಹಸ್ತಲಾಘವ ಮಾಡುತ್ತಿದ್ದಂತೆಯೇ ಅವರ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT