ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು: ನಂದಿಸುವ ಕಾರ್ಯಕ್ಕೆ ಭಾರೀ ಗಾಳಿಯಿಂದ ತೊಡಕು

Last Updated 22 ಆಗಸ್ಟ್ 2021, 6:06 IST
ಅಕ್ಷರ ಗಾತ್ರ

ಪ್ಲೇಸರ್ವಿಲ್ಲೆ (ಅಮೆರಿಕ): ಉತ್ತರ ಕ್ಯಾಲಿಫೋರ್ನಿಯಾದ ಅರಣ್ಯ ಪ್ರದೇಶದಲ್ಲಿ ತಿಂಗಳಿಗೂ ಹೆಚ್ಚು ಕಾಲದಿಂದ ಸತತವಾಗಿ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚು ನಂದಿಸುವ ಕೆಲಸಕ್ಕೆ ಬೀಸುತ್ತಿರುವ ಪ್ರಬಲ ಗಾಳಿಯೇ ತೊಡಕು ಉಂಟುಮಾಡಿದೆ.

‘ಈಗ ಎದ್ದಿರುವ ಇನ್ನೊಂದು ಸುತ್ತಿನ ಭಾರೀ ಗಾಳಿಯು ನಮ್ಮ ಕೆಲಸವನ್ನು ಸವಾಲಾಗಿಸಿದೆ’ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆಯ ವಕ್ತಾರ ಕೀತ್‌ ವೇಡ್‌ ತಿಳಿಸಿದ್ದಾರೆ.

ಉತ್ತರ ಸಿಯೆರಾ ನೆವಾಡಾದಲ್ಲಿನ ಕಾಳ್ಗಿಚ್ಚು ಈಗಾಗಲೇ ಹಲವು ಮನೆಗಳನ್ನು ನಾಶಪಡಿಸಿದೆ. ಕಾಳ್ಗಿಚ್ಚಿನ ವಿಕೋಪ ಹೆಚ್ಚಾಗಿರುವ ಕಾರಣ ಸ್ಯಾಕ್ರಮೆಂಟೊ ಮತ್ತು ನೆವಾಡಾ ನಡುವಿನ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ.

ಶನಿವಾರ ಗಂಟೆಗೆ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ವ್ಯಾಪಕವಾಗುತ್ತಿರುವ ಕಾಳ್ಗಿಚ್ಚು ಶನಿವಾರದ ವೇಳೆಗೆ 310 ಕಿ.ಮೀ ಪ್ರದೇಶವನ್ನು ಕಬಳಿಸಿದೆ. 1,500ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT