ಬುಧವಾರ, ಮೇ 19, 2021
22 °C

ವ್ಯಾಪಾರಿ ಮುಖದ ಮೇಲೆ ಕೆಮ್ಮಿದ ಮಹಿಳೆಗೆ 30 ದಿನ ಜೈಲು

ನ್ಯೂಯಾರ್ಕ್ ಟೈಮ್ಸ್‌ Updated:

ಅಕ್ಷರ ಗಾತ್ರ : | |

Prajavani

ಫ್ಲಾರಿಡಾ: ಕಳೆದ ವರ್ಷ ಕೊರೊನಾ ಉತ್ತುಂಗದಲ್ಲಿದ್ದ ಸಂದರ್ಭ ವ್ಯಾಪಾರಿಯೊಬ್ಬರ ಮುಖದ ಮೇಲೆ ಉದ್ದೇಶಪೂರ್ವಕವಾಗಿ ಕೆಮ್ಮಿದ ಮಹಿಳೆಗೆ ಅಮೆರಿಕದ ಫ್ಲಾರಿಡಾದಲ್ಲಿ 30 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

53 ವರ್ಷದ ಡೆಬ್ರಾ ಹಂಟರ್, ಶಿಕ್ಷೆಗೊಳಗಾದ ಮಹಿಳೆಯಾಗಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ, ಫ್ಲಾರಿಡಾದ ಜಾಕ್ಸನ್‌ವಿಲ್ಲೆಯಲ್ಲಿರುವ ಅಂಗಡಿಯಲ್ಲಿ ಉದ್ಯೋಗಿಗಳೊಂದಿಗೆ ಹಂಟರ್ ಜಗಳ ಮಾಡುತ್ತಿದ್ದ ವಿಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದ ಹೆದರ್ ಸ್ಪ್ರಾಗ್ ಎಂಬ ವ್ಯಾಪಾರಿ ಬಳಿಗೆ ಹೋದ 53 ವರ್ಷದ ಡೆಬ್ರಾ ಹಂಟರ್ ಎಂಬ ಮಹಿಳೆ ಉದ್ದೇಶಪೂರ್ವಕವಾಗಿ ಅವರ ಮೇಲೆ ಕೆಮ್ಮುವ ಮೂಲಕ ಕೊರೊನಾ ಕಾಲದಲ್ಲಿ ದುಷ್ಕೃತ್ಯ ಎಸಗಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು.

ಹಂಟರ್ ಅವರು ತಮ್ಮ ವಸ್ತುವೊಂದನ್ನು ಹಿಂದಿರುಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅಂಗಡಿಯವರ ಜೊತೆ ವಾದಕ್ಕೆ ಇಳಿದಿದ್ದರು. ಈ ವಿಡಿಯೊವನ್ನು ಚಿತ್ರೀಕರಿಸಿದ್ದಕ್ಕಾಗಿ ನನ್ನ ಮೇಲೆ ಈ ವರ್ತನೆ ತೋರಿದ್ದಾರೆ ಎಂದು ವ್ಯಾಪಾರಿ ಮಹಿಳೆ ಸ್ಪ್ರಾಗ್ ನ್ಯಾಯಾಲಯದಲ್ಲಿ ಹೇಳಿದ್ಧಾರೆ.

10 ತಿಂಗಳ ಹಿಂದೆ ಮೆದುಳಿನ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ, ಈಗಲೂ ಚಿಕಿತ್ಸೆ ಮುಂದುವರೆದಿದೆ. ದುರ್ಬಲವಾಗಿರುವ ನನ್ನ ಮೇಲೆ ದಾಳಿ ನಡೆದಿದೆ ಎಂದು ಸ್ಪ್ರಾಗ್ ಹೇಳಿದ್ದಾರೆ.

ವಿಡಿಯೋ ಮಾಡುತ್ತಿದ್ದನ್ನು ಗಮನಿಸಿದ ಹಂಟರ್, "ನಾನು ನಿಮಗೆ ಹತ್ತಿರಕ್ಕೆ ನಿಮ್ಮ ಮುಖದ ಮೇಲೆ ಕೆಮ್ಮುತ್ತೇನೆ. ಆಗ ಹೇಗಿರುತ್ತೆ ನೋಡು" ಎಂದು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಬಳಿಕ, ಸಮೀಪ ಬಂದು ವಿಡಿಯೊ ರೆಕಾರ್ಡ್ ಮಾಡಿದ ಮೊಬೈಲ್ ಕೊಡುವಂತೆ ಕೇಳಿದ್ದಾಳೆ. ಅದಕ್ಕೆ ಸ್ಪ್ರಾಗ್ ನಿರಾಕರಿಸಿದಾಗ, ಮುಖದ ಬಳಿ ಬಂದು ಕೆಮ್ಮಿದ್ದಾಳೆ. ಆದರೆ, ನಾನು ಆ ಸಂದರ್ಭ ಮಾಸ್ಕ್ ಧರಿಸಿದ್ದೆ ಅವಳ ಉಗುಳು ನನ್ನ ಮುಖದ ಮೇಲೆ ಬಿದ್ದಿತ್ತು ಎಂದಿದ್ಧಾರೆ.

"ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿರುವ ಸಂದರ್ಭ ನನ್ನ ಬಳಿ ಬಂದು ಮುಖದ ಮೇಲೆ ಕೆಮ್ಮುವ ಪ್ರತಿವಾದಿಯ ಕ್ರಿಯೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನನ್ನ ವೀಕ್ ಪಾಯಿಂಟ್ ಮೇಲೆ ಆಕ್ರಮಣ ಮಾಡುವ ಕೃತ್ಯವಾಗಿದೆ’ಎಂದು ಸ್ಪ್ರಾಗ್ ಡುವಾಲ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶ ಜೇಮ್ಸ್ ಎ ಮುಂದೆ ನಡೆದ ಆನ್‌ಲೈನ್ ವಿಚಾರಣೆಯ ವೇಳೆ ಹೇಳಿದ್ಧಾರೆ. "ನಾನು ಆ ಕ್ಷಣ ದಿಗ್ಭ್ರಮೆಗೊಂಡಿದ್ದೇನೆ ಮತ್ತು ನಂತರದ ದಿನಗಳಲ್ಲಿ ಸೋಂಕು ಹಬ್ಬಿರಬಹುದೇ ಎಂದು ಹೆಚ್ಚು ಭಯಭೀತಳಾಗಿದ್ದೆ.’ ಎಂದು ವಾದಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು