ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಂರಕ್ಷಣೆ | ಭಾರತದ ಕ್ರಮಕ್ಕೆ ವಿಶ್ವ ಅಚ್ಚರಿಪಡುತ್ತಿದೆ: ಗಜೇಂದ್ರ ಸಿಂಗ್

Last Updated 1 ಮಾರ್ಚ್ 2023, 13:48 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಗತ್ತಿನ ಇತರ ದೇಶಗಳು ಅದರಲ್ಲೂ ಅಭಿವೃದ್ಧಿ ಹೊಂದಿದ ದೇಶಗಳು ಭಾರತದಿಂದ ಸ್ಫೂರ್ತಿ ಪಡೆದು, ಈ ನಿಟ್ಟಿನಲ್ಲಿ ಭಾರತದ ನೆರವು ಯಾಚಿಸುತ್ತಿವೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಹೇಳಿದ್ದಾರೆ.

‘ಜಲ ಸಂರಕ್ಷಣೆ ಮತ್ತು ಜಲ ಸಂಪನ್ಮೂಲ ನಿರ್ವಹಣೆಗೆ ಭಾರತ ಕೈಗೊಂಡಿರುವ ಕ್ರಮಗಳನ್ನು ಕಂಡು ಇಡೀ ಜಗತ್ತು ಅಚ್ಚರಿಪಡುತ್ತಿದೆ’ ಎಂದು ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿಶ್ವ ಬ್ಯಾಂಕ್ ಮೂರು ವರ್ಷಗಳ ಅಂತರದ ಬಳಿಕ ಏರ್ಪಡಿಸಿರುವ ‘ವರ್ಲ್ಡ್‌ ವಾಟರ್ ವೀಕ್‌’ ಕಾರ್ಯಕ್ರಮದಲ್ಲಿ ಶೆಖಾವತ್‌ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ 400 ಹೆಚ್ಚು ಜಲ ತಜ್ಞರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT