ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Post Day 2021; ಡಿಜಿಟಲ್ ಯುಗದಲ್ಲೂ ಹೊಳಪು ಕಳೆದುಕೊಳ್ಳದ 'ಅಂಚೆ'

Last Updated 9 ಅಕ್ಟೋಬರ್ 2021, 8:55 IST
ಅಕ್ಷರ ಗಾತ್ರ

ಇಂದಿನ ಡಿಜಿಟಲ್ ಯುಗದಲ್ಲೂ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳದ ಹಾಗೂ ಸಂಪ್ರದಾಯಿಕಸಂವಹನ ಪ್ರಕಾರವಾದ 'ಅಂಚೆ ಸೇವೆ' ಸ್ಮರಿಸಲು ಪ್ರತಿ ವರ್ಷ ಅಕ್ಟೋಬರ್ 9 ರಂದು ‘ವಿಶ್ವ ಅಂಚೆ ದಿನ'ಆಚರಿಸಲಾಗುತ್ತದೆ.

ನಾಗರಿಕ ಸಂವಹನ ಮಾಧ್ಯಮದಲ್ಲಿಪ್ರಮುಖ ಪಾತ್ರ ವಹಿಸುವುದು ಅಂಚೆ ಸೇವೆ. ಮನುಷ್ಯನಿಗೆ ಅಕ್ಷರ ಜ್ಞಾನ ಬಂದ ನಂತರ ಪತ್ರ ವ್ಯವಹಾರ ಪ್ರಾರಂಭವಾದರೂ ಅದಕ್ಕೆ ವ್ಯವಸ್ಥಿತ ರೂಪ ಕೊಟ್ಟು ‘ಅಂಚೆ ಸೇವೆ‘ ಎಂದು ಕಾಗದ ಪತ್ರಗಳನ್ನು, ಪಾರ್ಸಲ್‌ಗಳನ್ನು ಸ್ವೀಕರಿಸಬಹುದು, ತಲುಪಿಸಬಹುದು ಎಂಬ ವ್ಯವಸ್ಥೆ ಆರಂಭವಾಗಿದ್ದು 18 ನೇ ಶತಮಾನದ ಆರಂಭದಲ್ಲಿ.

ಮೊದಲು ಅಂಚೆ ಸೇವೆ ಅಸ್ಪಷ್ಟವಾಗಿ ಇತ್ತು. ನಂತರ ಅಂಚೆ ಸೇವೆಯನ್ನು ಸಾರ್ವತ್ರಿಕಗೊಳಿಸಲು ‘ಯುನಿವರ್ಸಲ್ ಪೋಸ್ಟಲ್ ಯುನಿಯನ್‘ (ಯುಪಿಯು) ಎಂಬ ಅಂಚೆ‌ ವ್ಯವಸ್ಥೆಯನ್ನು 1874 ರಲ್ಲಿಸ್ವಿಟ್ಜರ್ಲೆಂಡ್‌‌ನಲ್ಲಿ ಜಾರಿಗೆ ತರಲಾಯಿತು.‌

ಕಾಗದ ಪತ್ರಗಳನ್ನು, ಕಡತಗಳನ್ನು, ಉಡುಗೊರೆಕಳಿಸುವುದು, ಸ್ವೀಕರಿಸುವುದು ಯುಪಿಯುದಿಂದ ಸರಾಗವಾಗಿದೆ. ಈ ಡಿಜಿಟಲ್ ಯುಗದಲ್ಲೂ ಅಂಚೆ ಸೇವೆ ತನ್ನದೇಯಾದ ಪ್ರಾಮುಖ್ಯತೆ ಪಡೆದುಕೊಂಡಿದೆ.ಜನರ ವಿಶ್ವಾಸಾರ್ಹತೆ ಕಾಯ್ದುಕೊಂಡು192 ರಾಷ್ಟ್ರಗಳು ಯುಪಿಯು ಆಧಾರಿತ ಅಂಚೆ ಸೇವೆಯನ್ನು ಜನರಿಗೆ ನೀಡುತ್ತಿವೆ.

ವಿಶ್ವ ಅಂಚೆ ದಿನವನ್ನು 1969 ರಲ್ಲಿಮೊದಲ ಬಾರಿಗೆ ಆಚರಿಸಲಾಯಿತು. ಅಂಚೆ ದಿನವನ್ನು ಆಚರಿಸಲು ಶ್ರಮಿಸಿದ್ದು ಭಾರತೀಯರೇ ಎಂಬುದು ವಿಶೇಷ.

1969 ರಲ್ಲಿ ಜಪಾನಿನಲ್ಲಿ ವರ್ಲ್ಡ್ ಯುಪಿಯು ಕಾಂಗ್ರೆಸ್ ನಡೆದಾಗ ಭಾರತದ ಅಂಚೆ ಅಧಿಕಾರಿ ಆನಂದ ಮೋಹನ ನರುಲಾ ಅವರು ಸಭೆಗೆ ವಿಶ್ವ ಅಂಚೆ ದಿನ ಆಚರಿಸುವ ಪ್ರಸ್ತಾವನೆ ಇಟ್ಟಿದ್ದರು. ಅವರ ಮನವಿ ಪರಿಗಣಿಸಿದ ಯುಪಿಯು ಕಾಂಗ್ರೆಸ್, ಅಕ್ಟೋಬರ್ 9 ನ್ನು ವಿಶ್ವ ಅಂಚೆ ದಿನವಾಗಿ ಘೋಷಿಸಿತು. ಆ ಮೂಲಕ ಅಂಚೆಯ ಮಹತ್ವವನ್ನು ಜನರಿಗೆ ತಿಳಿಸಿತು.

ಭಾರತವೂ ಸೇರಿದಂತೆ ವಿಶ್ವದ 192 ರಾಷ್ಟ್ರಗಳು ಯುಪಿಯು ಸದಸ್ಯತ್ವ ಹೊಂದಿವೆ. ಈ ಮೂಲಕ ಡಿಜಿಟಲ್ ಯುಗದಲ್ಲೂ ಅಂಚೆ ವ್ಯವಸ್ಥೆಯನ್ನು ತಮ್ಮದೇಯಾದ ಸೇವೆ ಮೂಲಕ ಜೀವಂತವಾಗಿ ಇಟ್ಟಿವೆ. ಅಂಚೆ ದಿನದ ಪ್ರಯುಕ್ತ ಅನೇಕ ರಾಷ್ಟ್ರಗಳು ಅಂಚೆ ಚೀಟಿ ಬಿಡುಗಡೆ, ಅಂಚೆಯ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ.

ಭಾರತವೂ ಕೂಡ ಅಂಚೆ ವ್ಯವಸ್ಥೆಯನ್ನು ಬಹಳ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದೆ. ಅಂಚೆದಿನದ ಪ್ರಯುಕ್ತ ಅಕ್ಟೋಬರ್ ತಿಂಗಳಲ್ಲಿ (ಅ.9 ರಿಂದ ಅ.15 ರವರೆಗೆ) ಅಂಚೆ ಸಪ್ತಾಹ ಕಾರ್ಯಕ್ರಮವನ್ನು ದೇಶದ ಎಲ್ಲ ಅಂಚೆ ಕಚೇರಿಗಳಲ್ಲಿ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT