ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಅತ್ಯಂತ ಸಂತೋಷಭರಿತ ಈ ರಾಷ್ಟ್ರದಲ್ಲಿ ಕೆಲಸ ಮಾಡಲು ಜನರೇ ಇಲ್ವಂತೆ!

ಫಿನ್‌ಲ್ಯಾಂಡ್ ತೀವ್ರವಾದ ಉದ್ಯೋಗಿಗಳ ಕೊರತೆಯನ್ನು ಅನುಭವಿಸುತ್ತಿದೆ
Last Updated 22 ಜೂನ್ 2021, 11:05 IST
ಅಕ್ಷರ ಗಾತ್ರ

ಹೆಲ್ಸಿಂಕಿ (ಫಿನ್‌ಲ್ಯಾಂಡ್‌): ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಹೊಂದಿದ್ದರೂ, ಜಗತ್ತಿನಲ್ಲಿ ಹೆಚ್ಚು ಸಂತೋಷಭರಿತ ರಾಷ್ಟ್ರ ಎಂದು ಖ್ಯಾತಿವೆತ್ತ ಯೂರೋಪ್ ದೇಶವಾದ ಫಿನ್‌ಲ್ಯಾಂಡ್ ಹೊಸ ಸಮಸ್ಯೆಗೆ ತುತ್ತಾಗಿದೆ.

ಆ ದೇಶದಲ್ಲಿ ಇದೀಗ ಜನಸಂಖ್ಯೆ ಕೊರತೆಯಿಂದ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.ಫಿನ್‌ಲ್ಯಾಂಡ್ ತೀವ್ರವಾದ ಉದ್ಯೋಗಿಗಳ ಕೊರತೆಯನ್ನು ಅನುಭವಿಸುತ್ತಿದೆ. ಉದ್ಯೋಗಗಳನ್ನು ಮಾಡುವವರೂ ಸಹ ಇಲ್ಲವಾಗಿರುವುದರಿಂದ ಫಿನ್‌ಲ್ಯಾಂಡ್‌ ವಲಸಿಗರ ಕಡೆಗೆ ನೋಡುತ್ತಿದೆ.

‘ಅನೇಕ ಪಾಶ್ಚಿಮಾತ್ಯ ದೇಶಗಳಂತೆ ಫಿನ್‌ಲ್ಯಾಂಡ್ ಕೂಡ ದುರ್ಬಲ ಜನಸಂಖ್ಯೆ ಸಮಸ್ಯೆ ಎದುರಿಸುತ್ತಿದ್ದು, ನಮ್ಮ ದೇಶಕ್ಕೆ ಬರಲು ದೊಡ್ಡ ಮಟ್ಟದ ಜನಸಂಖ್ಯೆ ಬೇಕು ಎಂಬುದನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ‘ ಎಂದುಏಜೆನ್ಸಿ ಟ್ಯಾಲೆಂಟೆಡ್ ಸೊಲ್ಯೂಷನ್ಸ್‌ನಸಕು ತಿಹವೆರೈನ್ ಹೇಳುತ್ತಾರೆ.

ಫಿನ್‌ಲ್ಯಾಂಡ್‌ನಲ್ಲಿ ದುಡಿಯುವ 100 ಜನರಲ್ಲಿ 65 ಜನ 65 ವಯಸ್ಸು ಮೀರಿದವರಾಗಿದ್ದಾರೆ. ಜಪಾನ್ ನಂತರ ಎರಡನೇ ಸ್ಥಾನ ಇದು. ಇಲ್ಲಿ ವೃದ್ದಾಪ್ಯ ಅವಲಂಬನೆ ಅನುಪಾತ 2023 ರಲ್ಲಿ ಶೇ 49.5 ಕ್ಕೆ ಏರಿಕೆಯಾಗಬಹುದು ಎನ್ನಲಾಗಿದೆ.

‘ಫಿನ್‌ಲ್ಯಾಂಡ್‌ನಲ್ಲಿ ಸದ್ಯ 60 ಲಕ್ಷ ಜನಸಂಖ್ಯೆ ಇದ್ದು, ವರ್ಷಕ್ಕೆ 25 ಸಾವಿರದಿಂದ 30 ಸಾವಿರದವರೆಗೆ ವಲಸಿಗರನ್ನು ಕರೆಸಿಕೊಳ್ಳುವುದು ಅವಶ್ಯಕತೆ ಇದೆ‘ ಎಂದು ಆ ದೇಶದ ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ಫಿನ್‌ಲ್ಯಾಂಡ್ ಲಿಂಗ ಸಮಾನತೆ, ಉನ್ನತ ಜೀವನ ಮಟ್ಟ, ಅತ್ಯಂತ ಕಡಿಮೆ ಅಪರಾಧ, ಕಡಿಮೆ ಮಾಲಿನ್ಯ, ಕಡಿಮೆ ಭ್ರಷ್ಟಾಚಾರದಲ್ಲಿ ಉನ್ನತ ಅಂಕಗಳನ್ನು ಗಳಿಸಿದರೂ, ಯುರೋಪಿಯನ್ ಇತರ ದೇಶಗಳಂತೆ ವಲಸೆ ವಿರೋಧಿ ಮನೋಭಾವದಿಂದ ಇಂದು ಉದ್ಯೋಗಿಗಳ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇನ್ನೊಂದು ವಿಶೇಷ ಎಂದರೆ ಅಲ್ಲಿ ವಲಸೆ ವಿರೋಧಿ ಮನೋಭಾವನೆ ಹೊಂದಿರುವ ಬಲಪಂಥೀಯ ಪ್ರಿನ್ಸ್‌ ಪಕ್ಷವು ಚುನಾವಣೆಗಳಲ್ಲಿ ಸಾಕಷ್ಟು ಜನಮನ್ನಣೆಯನ್ನು ಗಳಿಸುತ್ತಿದೆ.

ಸದ್ಯ ಅ್ಲಲಿನ ಸರ್ಕಾರದ ನೇಮಕಾತಿ ಯೋಜನೆಗಳ ಮೂಲಕ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಆಕರ್ಷಣೆ ಮಾಡುವ ಗುರಿ ಹೊಂದಲಾಗಿದೆ.ಹೀಗೆ ಸ್ಪೇನ್‌ನ ಆರೋಗ್ಯ ಕಾರ್ಯಕರ್ತರು, ಸ್ಲೋವಾಕಿಯಾದ ಲೋಹದ ಕೆಲಸಗಾರರು ಮತ್ತು ರಷ್ಯಾ, ಭಾರತ ಮತ್ತು ಆಗ್ನೇಯ ಏಷ್ಯಾದ ಐಟಿ ಮತ್ತು ಕಡಲ ತಜ್ಞರು ಫಿನ್‌ಲ್ಯಾಂಡ್‌ಗೆ ಆಗಮಿಸಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಫಿನ್‌ಲ್ಯಾಂಡ್‌ನ ಉದ್ಯೋಗಿಗಳ ಸಮಸ್ಯೆಗೆ ಆ ದೇಶದಲ್ಲಿನಅತಿಯಾದ ಬೆಲೆಗಳು, ಶೀತ ಹವಾಮಾನ ಮತ್ತು ಸಂಕೀರ್ಣ ಭಾಷೆ ಕೂಡ ಕಾರಣ ಎಂದು ತಿಳಿದು ಬರುತ್ತದೆ. ಇದರಿಂದ ಅನೇಕ ವಲಸಿಗರು ದೇಶ ತೊರೆಯುತ್ತಾರೆ.ದೇಶವನ್ನು ತೊರೆದವರಲ್ಲಿ ಹೆಚ್ಚಿನವರು ಉನ್ನತ ವಿದ್ಯಾವಂತರು ಎಂದು ಅಧಿಕೃತ ಅಂಕಿ ಅಂಶಗಳು ತೋರಿಸುತ್ತವೆ.

ಕಂಪನಿಗಳಿಗೆ ಸ್ಥಳೀಯ ಫಿನ್ನಿಷ್ ಕಾರ್ಮಿಕರನ್ನು ಮಾತ್ರ ನೇಮಿಸಿಕೊಳ್ಳಬೇಕೆಂಬ ಸರ್ಕಾರದ ಒತ್ತಾಯವನ್ನು ಸಡಿಲಗೊಳಿಸಲು ಅನೇಕ ಔದ್ಯೋಗಿಕ ಸಂಸ್ಥೆಗಳು ಆಗ್ರಹಿಸುತ್ತಿವೆ. ಆದರೆ, ಕಂಪನಿಗಳು ಫಿನ್ನಿಸ್ ಮಾತೃಭಾಷೆ ಬಳಕೆ ಬಗ್ಗೆ ಅಚಲವಾಗಿವೆ.ಫಿನ್ನಿಷ್ ಅನ್ನು ನಿರರ್ಗಳವಾಗಿ ಬಳಸುತ್ತವೆ.

ಈಗಾಗಲೇ ನಾಲ್ಕು ವರ್ಷಗಳ ಅವಧಿ ಮುಗಿಸಿರುವ ಹೆಲ್ಸಿಂಕಿ ಮೇಯರ್ ಜಾನ್ ವಾಪಾವೂರಿ, ಹೆಲ್ಸಿಂಕಿ ನಗರದ ಪ್ರೊಫೈಲ್‌ ಹೆಚ್ಚಿಸುವುದಕ್ಕೆ ಸಹಾಯ ಮಾಡಲು ಅಂತರರಾಷ್ಟ್ರೀಯ ಪಿಆರ್ ಸಂಸ್ಥೆಗಳತ್ತ ಮುಖ ಮಾಡಿದ್ದಾರೆ.

‘ಭವಿಷ್ಯದಲ್ಲಿ ಏಷ್ಯಾದಿಂದ ಅನೇಕ ಪ್ರತಿಭೆಗಳನ್ನು ಫಿನ್‌ಲ್ಯಾಂಡ್‌ಗೆ ಆಕರ್ಷಿಸುವ ಫಿನ್‌ಲ್ಯಾಂಡ್‌ನ ಸಾಮರ್ಥ್ಯದ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ ಮತ್ತು ಕೊರೊನಾವೈರಸ್‌ ನಂತರದ ದಿನಗಳಲ್ಲಿ ಜನರ ಆದ್ಯತೆಗಳು ಬದಲಾಗುತ್ತವೆ ಎಂಬುದನ್ನು ನಾನು ನಂಬುತ್ತೇನೆ‘ ಎಂದು ಮೇಯರ್ ಜಾನ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT