ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ಧರಿಸದ ಇರಾನ್‌ ಕ್ರೀಡಾಪಟುವಿಗೆ ಬಂಧನ ಭೀತಿ: ವರದಿ

Last Updated 18 ಅಕ್ಟೋಬರ್ 2022, 14:26 IST
ಅಕ್ಷರ ಗಾತ್ರ

ಸೋಲ್‌: ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ನಡೆದ ಗೋಡೆ ಏರುವ ಸ್ಪರ್ಧೆಯಲ್ಲಿ ಹಿಜಾಬ್‌ ಧರಿಸದೆ ಪಾಲ್ಗೊಂಡ ಇರಾನ್‌ನ ಅಥ್ಲೀಟ್‌ ಎಲೆನಾಜ್‌ ರೆಕಬಿ ಅವರು ಟೆಹರಾನ್‌ನತ್ತ ಹೊರಟಿದ್ದು, ಇರಾನ್‌ನಲ್ಲಿ ಅವರ ಬಂಧನ ಆಗುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ.

ಆದರೆ ಇರಾನ್‌ ಇಂತಹ ವರದಿಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ರೆಕಬಿ ಕುರಿತು ಸುಳ್ಳು ಸುದ್ದಿಗಳು ಹರಡುಲಾಗುತ್ತಿದೆ ಎಂದು ಹೇಳಿದೆ. ಸೋಲ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿ ಈ ಪ್ರತಿಕ್ರಿಯೆ ನೀಡುವ ವೇಳೆ ಈ ಹಿಂದೆ ಹಿಜಾಬ್‌ ಧರಿಸಿ ರೆಕಬಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡ ಫೊಟೊವನ್ನು ಮಾತ್ರ ಲಗತ್ತಿಸಿದೆ.

ಇಂಟರ್‌ನ್ಯಾಷನಲ್‌ ಫೆಡರೇಷನ್ ಆಫ್‌ ಸ್ಪೋರ್ಟ್‌ ಕ್ಲೈಂಬಿಂಗ್‌ (ಐಎಫ್‌ಎಸ್‌ಸಿ) ಈ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT