ನವದೆಹಲಿ: ರಷ್ಯಾ ಮತ್ತು ಚೀನಾ ನಡುವಿನ ಸಂಬಂಧವು ರಷ್ಯಾ ಜೊತೆಗಿನ ಭಾರತದ ಸಂಬಂಧಕ್ಕೆ ಧಕ್ಕೆ ತರಲಿದೆ ಎಂಬುದನ್ನು ಭಾರತದಲ್ಲಿನ ರಷ್ಯಾ ರಾಯಭಾರಿ ಡೇನಿಸ್ ಅಲಿಪಾವ್ ಅವರು ಗುರುವಾರ ತಳ್ಳಿಹಾಕಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಬೆನ್ನಲ್ಲೇ ಕೆಲ ಮಾಧ್ಯಮಗಳು ಈ ಭೇಟಿಯು ಭಾರತಕ್ಕೆ ಮಾರಕ ಎಂದು ವಿಶ್ಲೇಷಿಸಿದ್ದವು.
ಈ ವಿಶ್ಲೇಷಣೆಗಳನ್ನು ತಳ್ಳಿಹಾಕಿರುವ ಡೇನಿಸ್, ‘ವಿಶ್ಲೇಷಕರ ವಿಶ್ಲೇಷಣೆಯಂತೆ ರಷ್ಯಾ– ಭಾರತ ಸಂಬಂಧಕ್ಕೆ ಯಾವ ಸಮಸ್ಯೆಯೂ ಆಗುವುದಿಲ್ಲ. ಇದು ಕೇವಲ ಅವರ ನಂಬಿಕೆಯಷ್ಟೇ’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.