ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಗೆ ಹೊಸವರ್ಷದ ಶುಭಾಶಯ ಸಂದೇಶ ಕಳಿಸಲು ಹೋಗಿ ಲಂಡನ್ ಆಸ್ಪತ್ರೆ ಎಡವಟ್ಟು

Last Updated 29 ಡಿಸೆಂಬರ್ 2022, 15:47 IST
ಅಕ್ಷರ ಗಾತ್ರ

ಲಂಡನ್: ತನ್ನ ಆಸ್ಪತ್ರೆಗೆ ತಪಾಸಣೆಗೆಂದು ಬಂದವರಿಗೆ ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ನ ಶುಭಾಶಯಗಳನ್ನು ಹೇಳುವ ಭರದಲ್ಲಿ ಲಂಡನ್ ಆಸ್ಪತ್ರೆಯೊಂದು ಎಡವಟ್ಟು ಮಾಡಿದೆ.

ಹೌದು, ದಕ್ಷಿಣಲಂಡನ್‌ ಯಾರ್ಕ್‌ಶೈರ್‌ನ ಆಸ್ಕರ್ನ್ ಮೆಡಿಕಲ್‌ ಪ್ರಾಕ್ಟಿಸ್‌ ಆಸ್ಪತ್ರೆ ತನ್ನಲ್ಲಿ ತಪಾಸಣೆ ಮಾಡಿಸಿಕೊಂಡು ಹೋದವರಿಗೆ ‘ನಿಮಗೆ ತೀವ್ರತರವಾದ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಧನ್ಯವಾದಗಳು.‘ ಎಂದು ಬಲ್ಕ್ ಸಂದೇಶಗಳನ್ನು ಕಳುಹಿಸಿದೆ.

ಇದರಿಂದ ತಪಾಸಣೆ ಮಾಡಿಸಿಕೊಂಡವರು ಕಕ್ಕಾಬಿಕ್ಕಿಯಾಗಿದ್ದಾರೆ. ಕೆಲವರಂತು ಸಂದೇಶ ನೋಡಿ ಕಣ್ಣೀರು ಹಾಕಿದ್ದಾರೆ.

ಆದರೆ, ಆ ಸಂದೇಶ ಕಳುಹಿಸಿದ ಅರ್ಧ ಗಂಟೆ ನಂತರ ಮತ್ತೊಂದು ಸಂದೇಶ ಕಳುಹಿಸಿ, ‘ಹಿಂದಿನ ಸಂದೇಶ ತಪ್ಪಾಗಿ ರವಾನೆಯಾಗಿದೆ. ಅದನ್ನು ದಯವಿಟ್ಟು ಮರೆತು ಬಿಡಿ. ನಿಮಗೆ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಶುಭಾಶಯಗಳು’ ಎಂದು ಸಂದೇಶ ಕಳುಹಿಸಿದೆ.

ಸರಿಯಾಗಿ ಎಷ್ಟು ಜನರಿಗೆ ಆ ತಪ್ಪು ಸಂದೇಶ ಹೋಗಿದೆ ಎಂಬುದು ಪತ್ತೆಯಾಗಿಲ್ಲ. ಮತ್ತೆ ಆಸ್ಪತ್ರೆ ಕೂಡ ಅದನ್ನು ಬಹಿರಂಗಪಡಿಸಿಲ್ಲ.

ಕ್ರಿಶ್ ರಿಡ್ ಎನ್ನುವ ವ್ಯಕ್ತಿ ಶ್ವಾಸಕೋಶದ ಕ್ಯಾನ್ಸರ್ ತಪಾಸಣೆ ಮಾಡಿಸಿದ್ದರು. ಅವರಿಗೂ ಕೂಡ ತಪ್ಪಾದ ಸಂದೇಶ ಹೋಗಿದ್ದರಿಂದ ಕಣ್ಣೀರಿಟ್ಟಿದ್ದರು. ಕೆಲವರು ಸಂದೇಶ ನೋಡಿ ಆಸ್ಪತ್ರೆಗೆ ದೌಡಾಯಿಸಿದ್ದರುಎಂದು ವರದಿ ಹೇಳಿದೆ. ಆದರೆ, ಘಟನೆ ಬಗ್ಗೆ ಆಸ್ಪತ್ರೆಯ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT