ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್‌ ಸಿಇಒ ಸೂಸನ್ ರಾಜೀನಾಮೆ

Last Updated 17 ಫೆಬ್ರುವರಿ 2023, 5:11 IST
ಅಕ್ಷರ ಗಾತ್ರ

ವಾಷಿಂಗ್ಟನ್: ಆನ್‌ಲೈನ್‌ ವಿಡಿಯೊ ವೇದಿಕೆ, ‘ಯೂಟ್ಯೂಬ್‌’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಸನ್ ವೊಜಿಸ್‌ಕಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.

‘ಸಂಸ್ಥೆಯ ನೂತನ ಸಿಇಒ ಆಗಿ ಚೀಫ್‌ ಪ್ರಾಡಕ್ಟ್‌ ಆಫೀಸರ್ ನೀಲ್‌ ಮೋಹನ್‌ ಅವರು ಅಧಿಕಾರ ವಹಿಸಿಕೊಳ್ಳುವರು’ ಎಂದು ಸೂಸನ್‌ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ನನ್ನ ಕುಟುಂಬ, ಆರೋಗ್ಯ ಹಾಗೂ ವೈಯಕ್ತಿಕ ಯೋಜನೆಗಳತ್ತ ಗಮನ ಹರಿಸಲಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

54 ವರ್ಷದ ಸೂಸನ್ ಅವರು ಯೂಟ್ಯೂಬ್‌ನ ಸಿಇಒ ಆಗಿ ಕಳೆದ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಅವರು ಗೂಗಲ್‌ನಲ್ಲಿ ಜಾಹೀರಾತು ವಿಭಾಗದ ಉಪಾಧ್ಯಕ್ಷೆಯಾಗಿದ್ದರು.

ಗೂಗಲ್‌ನ ಮಾತೃಸಂಸ್ಥೆ ಅಲ್ಫಾಬೆಟ್‌ನಲ್ಲಿ 25 ವರ್ಷಗಳಷ್ಟು ದೀರ್ಘಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಕೆಲವೇ ಉದ್ಯೋಗಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆ ಸೂಸನ್‌ ಅವರದು. ಇದಕ್ಕೂ ಮೊದಲು ಅವರು ಇಂಟೆಲ್‌ ಕಾರ್ಪೊರೇಷನ್, ಬೇನ್‌ ಅಂಡ್‌ ಕಂಪನಿಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT