ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಸ್ಟರ್‌ ಯಾತ್ರಿಕರಿದ್ದ ಬಸ್‌ ಕಮರಿಗೆ ಬಿದ್ದು 35 ಸಾವು

Last Updated 15 ಏಪ್ರಿಲ್ 2022, 12:59 IST
ಅಕ್ಷರ ಗಾತ್ರ

ಹರಾರೆ, ಜಿಂಬಾಬ್ವೆ (ಎಪಿ): ಜಿಂಬಾಬ್ವೆಯ ಪೂರ್ವ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಈಸ್ಟರ್‌ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಶುಕ್ರವಾರ ಬೆಳಿಗ್ಗೆ ಕಮರಿಗೆ ಉರುಳಿ ಬಿದ್ದುದರಿಂದ 35 ಮಂದಿ ಮೃತಪಟ್ಟು, 71 ಮಂದಿ ಗಾಯಗೊಂಡಿದ್ದಾರೆ.

ಜಿಂಬಾಬ್ವೆಯ ಪೂರ್ವ ಭಾಗದ ಮನಿಕಲಾಂಡ್‌ ಪ್ರಾಂತ್ಯದ ಚಿಪಿಂಗೆ ಜಿಲ್ಲೆಯ ಚಿಮನಿಮನಿ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು, ನಿಗದಿತ ಸಾಮರ್ಥ್ಯವನ್ನೂ ಮೀರಿ ಬಸ್‌ನಲ್ಲಿ 106 ಜನರನ್ನು ಕರೆದೊಯ್ಯಲಾಗುತ್ತಿತ್ತು ಸರ್ಕಾರಿ ಸ್ವಾಮ್ಯದ ಝೆಡ್‌ಬಿಸಿ ಸುದ್ದಿವಾಹಿನಿ ವರದಿ ಮಾಡಿದೆ.

ಬಸ್‌ನಲ್ಲಿ ಜಿಯಾನ್‌ ಕ್ರಿಶ್ಚಿಯನ್‌ ಚರ್ಚ್‌ನ ಸದಸ್ಯರನ್ನು ಕರೆದೊಯ್ಯಲಾಗುತ್ತಿತ್ತು. ಕಳಪೆ ರಸ್ತೆ, ಮಿತಿಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರ ಸಾಗಣೆಯಂತಹ ಘಟನೆಗಳಿಂದಾಗಿ ಜಿಂಬಾಬ್ವೆಯಲ್ಲಿ ಮೇಲಿಂದ ಮೇಲೆ ಇಂತಹ ಅಪಘಾತಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT