ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಫ್‌ಎಫ್‌ಐನಲ್ಲಿ ಇಸ್ತಾನ್‌ ಸಬೂ, ಮಾರ್ಟಿನ್‌ಗೆ ಸತ್ಯಜಿತ್ ರೇ ಪ್ರಶಸ್ತಿ ಪ್ರದಾನ

Last Updated 22 ಅಕ್ಟೋಬರ್ 2021, 16:30 IST
ಅಕ್ಷರ ಗಾತ್ರ

ನವದೆಹಲಿ: ಹಂಗೇರಿಯಾದ ಚಲನಚಿತ್ರ ನಿರ್ದೇಶಕ ಇಸ್ತಾನ್‌ ಸಬೂ ಮತ್ತು ಅಮೆರಿಕದ ಚಿತ್ರ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸೆ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನವೆಂಬರ್ 20ರಿಂದ ಆರಂಭವಾಗುವ ಭಾರತದ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ನೀಡಿ ಗೌರವಿಸಲಾಗುತ್ತಿದೆ.

ಸತ್ಯಜಿತ್ ರೇ ಜೀವಮಾನದ ಸಾಧನೆಯ ಪ್ರಶಸ್ತಿ ವಿಜೇತರಾದ ಇಸ್ತಾನ್‌ ಸಬೂ ಅವರು ಹಂಗೇರಿಯನ್ ಚಲನಚಿತ್ರ ನಿರ್ದೇಶಕರಲ್ಲಿ ಪ್ರಮುಖರು. ಅತ್ಯಂತ ವಿಮರ್ಶಾತ್ಮಕ ಚಿತ್ರಗಳಿಗಾಗಿ ಮೆಚ್ಚುಗೆ ಪಡೆದವರು. ವಿದೇಶಿ ಭಾಷಾ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದ ಮೊಟ್ಟಮೊದಲ ಹಂಗೇರಿಯನ್‌ ಚಿತ್ರ ನಿರ್ದೇಶಕ ಕೂಡ ಹೌದು. ಮೆಫಿಸ್ಟೊ (1981) ಫಾದರ್ (1966)ನಂತಹ ಮೇರು ಚಿತ್ರಗಳಿಂದ ಇವರು ಪ್ರಸಿದ್ಧರಾಗಿದ್ದಾರೆ. ಹಾಲಿವುಡ್ ಚಿತ್ರರಂಗದ ದಿಗ್ಗಜ ಸ್ಕಾರ್ಸೆಸೆ ಅವರು ಇತ್ತೀಚಿನ ತಮ್ಮ ‘ದಿ ಐರಿಶ್ ಮ್ಯಾನ್’, ‘ದಿ ವೂಲ್ಫ್ ಆಫ್ ದಿ ವಾಲ್ ಸ್ಟ್ರೀಟ್’, ‘ಶಟರ್ ಐಲ್ಯಾಂಡ್’ ಸೇರಿದಂತೆ ಹಲವು ಅತ್ಯುತ್ತಮ ಚಲನಚಿತ್ರಗಳಿಂದ ಜನಪ್ರಿಯರಾಗಿದ್ದಾರೆ.

ಹತ್ತು ದಿನಗಳ ಕಾಲ ನಡೆಯಲಿರುವ ಚಲನಚಿತ್ರ ಉತ್ಸವದಲ್ಲಿ ಸ್ಪೇನ್‌ನ ಹೆಸರಾಂತ ನಿರ್ದೇಶಕ ಕಾರ್ಲೋಸ್ ಸೌರಾ ಅವರ ‘ದಿ ಕಿಂಗ್ ಆಫ್ ಆಲ್ ದಿ ವರ್ಲ್ಡ್’ (ಎಲ್ ರೇ ಡಿ ಟೊಡೊ ಎಲ್ ಮುಂಡೋ) ಚಿತ್ರ ಆರಂಭಿಕ ಚಿತ್ರವಾಗಿ ಪ್ರದರ್ಶನವಾಗಲಿದೆ. ವೆನಿಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಜೇನ್ ಕ್ಯಾಂಪಿಯನ್ ನಿರ್ದೇಶನದ 'ದಿ ಪವರ್ ಆಫ್ ದಿ ಡಾಗ್' ಚಿತ್ರ ಅಂತರರಾಷ್ಟ್ರೀಯ ಪ್ರದರ್ಶನ ಕಾಣಲಿದೆ.

ಫೆಸ್ಟಿವಲ್ ಕೆಲಿಡೋಸ್ಕೋಪ್ ಮತ್ತು ವಿಶ್ವ ಪನೋರಮಾ ವಿಭಾಗಗಳಲ್ಲಿ ಸುಮಾರು 30 ಚಲನಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT