ಬೀಜಿಂಗ್‌: ದುರಸ್ತಿಗಾಗಿ ಬುದ್ಧ ಪ್ರತಿಮೆ ಪರಿಶೀಲನೆ

7

ಬೀಜಿಂಗ್‌: ದುರಸ್ತಿಗಾಗಿ ಬುದ್ಧ ಪ್ರತಿಮೆ ಪರಿಶೀಲನೆ

Published:
Updated:

ಬೀಜಿಂಗ್‌: ಚೀನಾದ ನೈಋತ್ಯ ಸಿಚುಯಾನ್‌ ಪ್ರಾಂತ್ಯದಲ್ಲಿರುವ ವಿಶ್ವದ ಅತಿ ದೊಡ್ಡ ಬುದ್ಧ ಪ್ರತಿಮೆ ನಾಲ್ಕು ತಿಂಗಳ ಕಾಲ ಪರಿಶೀಲನೆಗೆ ಒಳಪಡಲಿದೆ.

ಲೆಸ್‌ಹಾನ್‌ ನಗರದ ಹೊರವಲಯದಲ್ಲಿರುವ 71 ಮೀ. ಎತ್ತರದ  ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕಾರಣ. ದುರಸ್ತಿ ಕಾರ್ಯಕ್ಕಾಗಿ ಪರಿಶೀಲನೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

3ಡಿ ಲೇಸರ್‌ ಸ್ಕ್ಯಾನಿಂಗ್‌, ಇನ್‌ಫ್ರಾರೆಡ್‌ ಥರ್ಮಲ್‌ ಇಮೇಜಿಂಗ್  ಮತ್ತು ಡ್ರೋಣ್‌ ಸಮೀಕ್ಷೆಯ ಮೂಲಕ ಪರಿಶೀಲನೆ ಕಾರ್ಯ ನಡೆಯಲಿದೆ ಎಂದಿವೆ.

ಟ್ಯಾಂಗ್‌ ರಾಜವಂಶದ ಕಾಲದಲ್ಲಿ ಈ ಪ್ರತಿಮೆ ನಿರ್ಮಾಣಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !