ಕುಸ್ತಿ: ಶಿವಾನಂದಗೆ ಕಂಚಿನ ಪದಕ

7

ಕುಸ್ತಿ: ಶಿವಾನಂದಗೆ ಕಂಚಿನ ಪದಕ

Published:
Updated:
ಶಿವಾನಂದ ಅಂಬಿ

ಪರಮಾನಂದವಾಡಿ: ಉತ್ತರಪ್ರದೇಶದ ಮೀರಟ್‌ನಲ್ಲಿ ಈಚೆಗೆ ನಡೆದ ಬಾಲಕ ಮತ್ತು ಬಾಲಕಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಗ್ರಾಮದ ‍ಕುಸ್ತಿಪಟು ಶಿವಾನಂದ ಸುರೇಶ ಅಂಬಿ ಫ್ರೀಸ್ಟೈಲ್‌ ಗ್ರೀಕೊ ರೋಮನ್‌ ಸ್ಟೈಲ್ ವಿಭಾಗದಲ್ಲಿ  ಕಂಚಿನ ಪದಕ ಗೆದ್ದಿದ್ದಾರೆ.

ಭಾರತೀಯ ಕುಸ್ತಿ ಒಕ್ಕೂಟ ಹಾಗೂ ಉತ್ತರ ಪ್ರದೇಶ ಕುಸ್ತಿ ಸಂಸ್ಥೆ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅಲ್ಲಿ ಪಾಲ್ಗೊಂಡಿದ್ದ ರಾಮದುರ್ಗ ತಾಲ್ಲೂಕು ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಯಾದ ಶಿವಾನಂದ, ಗಮನಾರ್ಹ ಸಾಧನೆ ಮಾಡಿದ್ದಾರೆ.

ಗ್ರಾಮಕ್ಕೆ ಬಂದ ಅವರನ್ನು ಗ್ರಾಮದ ಮುಖಂಡರು, ಸಂಘ–ಸಂಸ್ಥೆಯವರು ಆತ್ಮೀಯವಾಗಿ ಅಭಿನಂದಿಸಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಸಾತಪ್ಪ ಅಂಬಿ, ಮುಖಂಡರಾದ ಸುರೇಶ ಅಂಬಿ, ಪ್ರಭಾ ಅಂಬಿ, ಮಂಗಲಾ ಅಂಬಿ, ಶೋಭಾ ಅಂಬಿ, ಸುರೇಖಾ ಅಂಬಿ, ಮಹಾದೇವಿ ಅಂಬಿ, ರತ್ನವ್ವ ಅಂಬಿ, ಸುನಿತಾ ಅಂಬಿ, ಸಚಿನ್‌ ಅಂಬಿ, ಸ್ನೇಹಾ ಅಂಬಿ, ಸಂದೀಪ ಅಂಬಿ, ಮುತ್ತುರಾಜ ಅಂಬಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !