ಮಲ್ಲಿಗೆ ನಾಡಿನ ಯೋಗ ಸಾಧಕ

7

ಮಲ್ಲಿಗೆ ನಾಡಿನ ಯೋಗ ಸಾಧಕ

Published:
Updated:
ಶಲಭಾಸನದಲ್ಲಿ ಕೆ. ಮಲ್ಲಿಕಾರ್ಜುನ

ಹೂವಿನಹಡಗಲಿ: ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದ ಕೆ.ಮಲ್ಲಿಕಾರ್ಜುನ ಒಂದೂವರೆ ದಶಕದಿಂದ ಯೋಗ ಕ್ಷೇತ್ರದ ಬೆಳವಣಿಗೆಗೆ ದುಡಿಯುತ್ತಿದ್ದಾರೆ. ಉಚಿತ ತರಬೇತಿ ನೀಡುತ್ತಿರುವ 33ರ ಹರೆಯದ ಅವರು ‘ಯೋಗ ಸಮಾಜ’ ಕಟ್ಟುವ ಸಂಕಲ್ಪ ಹೊಂದಿದ್ದಾರೆ.

ಗ್ರಾಮದ ಕೃಷಿ ಕುಟುಂಬದ ಕುಂಚೂರು ಪರಮೇಶ್ವರಪ್ಪ–ಚನ್ನಬಸಮ್ಮ ದಂಪತಿಯ ಪುತ್ರರಾದ ಅವರು 8ನೇ ತರಗತಿಯಲ್ಲಿದ್ದಾಗಲೇ ದೈಹಿಕ ಶಿಕ್ಷಣ ಶಿಕ್ಷಕ ವಿ.ಜಿ.ಸೋಮಪ್ಪ ಅವರಿಂದ ಪ್ರಭಾವಿತರಾಗಿ ಯೋಗಾಸನಗಳನ್ನು ಕಲಿತರು. ಮೊದಲ ಪ್ರಯತ್ನದಲ್ಲೇ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ್ದರು.

ಉಚಿತ ಯೋಗ ಪಾಠ: ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಹಡಗಲಿ ಸೇರಿದಂತೆ ರಾಜ್ಯದ ವಿವಿಧೆಡೆ ಈವರೆಗೆ 120 ಯೋಗ ಶಿಬಿರಗಳಲ್ಲಿ ಉಚಿತ ತರಬೇತಿ ನೀಡಿದ್ದಾರೆ. ಪಟ್ಟಣದ ಮಲ್ಲಿಗೆ ಯೋಗ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಶಾಂತಿವನ ಟ್ರಸ್ಟ್‌ ವಿವಿಧ ಕಡೆ ಆಯೋಜಿಸುವ ಯೋಗ ಶಿಬಿರಗಳಲ್ಲಿ ಇವರು ಉಚಿತವಾಗಿ ಯೋಗ ಕಲಿಸಿ ಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !