ಇಂದು ಅಹೋರಾತ್ರಿ ಯಕ್ಷಗಾನ ಪ್ರದರ್ಶನ ನೋಡಿ ಆನಂದಿಸಿ..

7

ಇಂದು ಅಹೋರಾತ್ರಿ ಯಕ್ಷಗಾನ ಪ್ರದರ್ಶನ ನೋಡಿ ಆನಂದಿಸಿ..

Published:
Updated:
Deccan Herald

ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕ್ಯಾದಗಿಯ ಆದಿತ್ಯ ಟ್ರಸ್ಟ್‌ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದೆ. ಶನಿವಾರ ರಾತ್ರಿ 10ಕ್ಕೆ ಆರಂಭವಾಗಿ ಭಾನುವಾರ ಬೆಳಿಗ್ಗೆ 5.30ರವರೆಗೆ ಅಹೋರಾತ್ರಿ ನಡೆಯುವ ಪ್ರದರ್ಶನ ಇದಾಗಿದೆ.

‘ಸುಧನ್ವಾರ್ಜುನ’, ‘ಕೃಷ್ಣಾರ್ಜುನ’, ‘ಕೃಷ್ಣ ಸಂಧಾನ’, ‘ಧರ್ಮಾಂಗದ’ ಮತ್ತು ‘ಅಭಿಮನ್ಯು’ ಪ್ರಸಂಗಗಳಿಂದ ಆಯ್ದ ಭಾಗಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ 32 ಮಂದಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

‘ಬಿಗ್‌ಬಾಸ್‌’ನಿಂದ ಖ್ಯಾತಿಯಾದ ನಟ ಪ್ರಥಮ ಇದೇ ಮೊದಲ ಬಾರಿಗೆ ಯಕ್ಷಗಾನದಲ್ಲಿ ಬಣ್ಣ ಹಚ್ಚಲಿದ್ದಾರೆ. ‘ಕೃಷ್ಣ ಸಂಧಾನ’ ಪ್ರಸಂಗದಲ್ಲಿ ದಾರುಕನ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. ಅಲ್ಲದೆ ಕೃಷ್ಣಾರ್ಜುನ ‍ಪ್ರಸಂಗದ ಆಯ್ದ ಭಾಗವನ್ನು ಹವ್ಯಕ ಭಾಷೆಯಲ್ಲಿ ಮನೋರಂಜನೆ ದೃಷ್ಟಿಯಿಂದ ‘ಭಾವ x ಭಾವ’ ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗುತ್ತಿದೆ.

‘ಸುಧನ್ವಾರ್ಜುನ’ ಪ್ರಸಂಗದಲ್ಲಿ ಸುಧನ್ವ ಪಾತ್ರದಲ್ಲಿ ಮಂಕಿಯ ಈಶ್ವರ ನಾಯಕ, ಅರ್ಜುನನ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ, ಪ್ರಭಾವತಿ ಪಾತ್ರದಲ್ಲಿ ವಂಡಾರು, ಕೃಷ್ಣನ ಪಾತ್ರದಲ್ಲಿ ಜಪ್ತಿ ನಿರ್ವಹಿಸಲಿದ್ದಾರೆ.

ಹವ್ಯಕ ಭಾಷೆಯಲ್ಲಿ ಈಗಾಗಲೇ ಒಮ್ಮೆ ಪ್ರದರ್ಶನ ಕಂಡು ಜನಪ್ರಿಯವಾಗಿರುವ ‘ಭಾವxಭಾವ’ ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ. ‘ಇದು ವಿಮರ್ಶೆಗಲ್ಲ ಕೇವಲ ಮನೋರಂಜನೆಗಾಗಿ’ ಎನ್ನುತ್ತಾರೆ ಕಾರ್ಯಕ್ರಮದ ವ್ಯವಸ್ಥಾಪಕ ಮಹಾಬಲೇಶ್ವರ ಭಟ್ಟ ಕ್ಯಾದಗಿ. ಇದರಲ್ಲಿ ಸ್ವತಃ ಕ್ಯಾದಗಿ ಅವರು ಕೃಷ್ಣನ ಪಾತ್ರದಲ್ಲಿ, ಅಶೋಕ ಭಟ್ಟ ಸಿದ್ದಾಪುರ ಅರ್ಜುನರಾಗಿ, ನರಸಿಂಹ ಗಾಂವ್ಕರ್‌ ಭೀಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 18 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಾಬಲೇಶ್ವರ ಭಟ್ಟರು, ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.

‘ಕೃಷ್ಣ ಸಂಧಾನ’ ಪ್ರಸಂಗದಲ್ಲಿ ಶಶಿಕಾಂತ ಶೆಟ್ಟಿ (ಕೃಷ್ಣ), ಪ್ರದೀಪ ಸಾಮಗ (ಕೌರವ), ಅರುಣ ಜಾರ್ಕಳ (ದೂತ), ‘ಧರ್ಮಾಂಗದ’ ಪ್ರಸಂಗದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ (ಭರತ), ರಾಜೇಶ ಭಂಡಾರಿ (ಧರ್ಮಾಂಗದ), ‘ಅಭಿಮನ್ಯು’ ಪ್ರಸಂಗದಲ್ಲಿ ತುಂಬ್ರಿ (ದ್ರೋಣ), ಚಂದ್ರಹಾಸ ಗೌಡ (ಅಭಿಮನ್ಯು), ನಾಗರಾಜ ಭಂಡಾರಿ (ಕೌರವ), ಷಣ್ಮುಖ ಗೌಡ (ಸುಭದ್ರೆ) ಅಭಿನಯಿಸಲಿದ್ದಾರೆ. ಅಲ್ಲದೆ ಕಲಾವಿದರಾದ ಪ್ರದೀಪ ಶೆಟ್ಟಿ, ದಿನೇಶ ಕನ್ನಾರು, ಅನಂತ ಮೊದಲಾದವರು ವಿವಿಧ ಪಾತ್ರಗಳಲ್ಲಿ ರಂಗದ ಮೇಲೆ ಬರಲಿದ್ದಾರೆ ಎನ್ನುತ್ತಾರೆ ಮಹಾಬಲೇಶ್ವರ ಭಟ್ಟ ಕ್ಯಾದಗಿ. ಭಾಗವತರು– ಕೇಶವ ಕೊಳಗಿ, ರಾಘವೇಂದ್ರ ಮಯ್ಯ, ಸುರೇಶ ಶೆಟ್ಟಿ, ಮೂಡುಬೆಳ್ಳೆ, ಹೊಸಾಳೆ; ಮದ್ದಳೆ– ಪರಮೇಶ್ವರ ಭಂಡಾರಿ, ನಾಗರಾಜ; ಚಂಡೆ– ಶಿವಾನಂದ ಕೋಟ, ರಾಕೇಶ ಮಲ್ಯ.

ಪ್ರವೇಶ ದರ: ಮೂರು ಬಗೆಯ ಪ್ರವೇಶ ದರಗಳನ್ನು ನಿಗದಿ ಮಾಡಲಾಗಿದೆ. ಗೌರವ ಪ್ರವೇಶ– ₹500, ಪ್ರಥಮ– ₹350, ಬಾಲ್ಕನಿ– ₹250. ಮಾಹಿತಿಗೆ: 87626 47898

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !