ಯಲಗೂರೇಶನಿಗೆ ಸತ್ಯಾತ್ಮ ಶ್ರೀಗಳಿಂದ ವಿಶೇಷ ಪೂಜೆ

ಬುಧವಾರ, ಮೇ 22, 2019
29 °C

ಯಲಗೂರೇಶನಿಗೆ ಸತ್ಯಾತ್ಮ ಶ್ರೀಗಳಿಂದ ವಿಶೇಷ ಪೂಜೆ

Published:
Updated:
Prajavani

ನಿಡಗುಂದಿ: ತಾಲ್ಲೂಕಿನ ಯಲಗೂರ ಕ್ಷೇತ್ರದ ಹನುಮಪ್ಪ ದೇವರಿಗೆ ಉತ್ತರಾದಿಮಠದ ಸತ್ಯಾತ್ಮತೀರ್ಥ ಶ್ರೀಗಳು ಗುರುವಾರ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿದರು.

ಮೂಲರಾಮ ದೇವರು ಮತ್ತು ದಿಗ್ವಿಜಯ ಮೂಲರಾಮದೇವರ ಸಂಸ್ಥಾನ ಪೂಜೆಯನ್ನು ಶ್ರೀಗಳು ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ, ಪ್ರಸಾದ, ತಪ್ತ ಮುದ್ರಾ ಧಾರಣೆ ಮಂತ್ರಾಕ್ಷತೆಯನ್ನು ಭಕ್ತರಿಗೆ ವಿತರಿಸಿದರು.

ಬುಧವಾರ ಸಂಜೆ ರಾಮದೇವರ ಪೂಜೆ, ತೊಟ್ಟಿಲೋತ್ಸವ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಾನಾ ಕಡೆಯಿಂದ ಬಂದಿದ್ದ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು.

₹ 6.5 ಕೋಟಿ ವೆಚ್ಚದ ಯಾತ್ರಿನಿವಾಸಕ್ಕೆ ಭೂಮಿ ಪೂಜೆ: ಇಲ್ಲಿಯ ತೆಂಗಿನ ತೋಟದಲ್ಲಿ ಯಲಗೂರೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ₹ 6.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯಾತ್ರಿ ನಿವಾಸ ಹಾಗೂ ಉಗ್ರಾಣ ಕೋಣೆ, ಮೂಲಸೌಕರ್ಯ ನಿರ್ಮಾಣಕ್ಕೆ ಸತ್ಯಾತ್ಮತೀರ್ಥ ಶ್ರೀಗಳು ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ‘ಪ್ರಸಕ್ತ ದಿನಗಳಲ್ಲಿ ಒತ್ತಡದ ಬದುಕು, ಚಿಂತೆಗಳಿಂದಾಗಿ ಮಾನಸಿಕ ನೆಮ್ಮದಿ ಇಲ್ಲದಾಗಿದೆ. ನೆಮ್ಮದಿ ಪಡೆಯಲು ದೇವರ ಧ್ಯಾನ ಮಾಡಬೇಕು, ಮಾನವ ಜನ್ಮ ಸಾರ್ಥಕವಾಗಲು ಭಗವಂತನ ಸ್ಮರಣೆ ಮಾಡಬೇಕು’ ಎಂದು ಆಶೀರ್ವಚನ ನೀಡಿದರು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಅನಂತ ಓಂಕಾರ, ಗುಂಡಣ್ಣ ಕುಲಕರ್ಣಿ, ಭಾಸ್ಕರ ಮನಗೂಳಿ, ನಾರಾಯಣ ಒಡೆಯರ, ಸಂತೋಷ ಪೂಜಾರ, ವಿಠ್ಠಲಾಚಾರ್ಯ ಗದ್ದನಕೇರಿ, ಅರ್ಚಕ ಯಲಗೂರದಪ್ಪ ಪೂಜಾರಿ, ಸಂಜೀವ ಪೂಜಾರಿ, ರಾಜು ಪಲ್ಲಕ್ಕಿ, ರಾಮಪ್ಪ ಹಿರೇಮನಿ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !