ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾನದ ಬದಲಿಗೆ ಜೇನುನೊಣಗಳಿಗೆ ತರಬೇತಿ ಜರ್ಮನಿಯಲ್ಲಿ ಸಂಶೋಧನೆ

Last Updated 7 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ವಿಮಾನ ನಿಲ್ದಾಣಗಳಲ್ಲಿ ಹೆರಾಯಿನ್‌, ಗಾಂಜಾದಂತಹ ಕಾನೂನು ಬಾಹಿರ ಮಾದಕ ವಸ್ತುಗಳನ್ನು ಪತ್ತೆ ಮಾಡಲು ಮುಂದೊಂದು ದಿನ ಜೇನು ನೊಣಗಳನ್ನು ಬಳಕೆ ಮಾಡುವಂತೆ ಆಗಬಹುದೇ?! ಹುಬ್ಬೇರಿಸಬೇಡಿ, ಅದು ಸಾಧ್ಯವಾಗಬಹುದು ಎಂದು ಹೇಳುತ್ತಿದ್ದಾರೆ ಜರ್ಮನಿಯ ಕೆಲವು ಸಂಶೋಧಕರು.

ಹೆರಾಯಿನ್‌ ಹಾಗೂ ಇತರ ಕೆಲವು ಮಾದಕ ವಸ್ತುಗಳನ್ನು ಪತ್ತೆ ಮಾಡಲು ಅಗತ್ಯವಿರುವ ತರಬೇತಿಯನ್ನು ಈ ಸಂಶೋಧಕರು ಜೇನು ನೊಣಗಳಿಗೆ ನೀಡಿದ್ದಾರೆ. ಜೇನು ನೊಣಗಳು ಬಹಳ ತ್ವರಿತವಾಗಿ ಹೊಸದನ್ನು ಕಲಿತುಕೊಳ್ಳುತ್ತವೆ, ಅವುಗಳ ವಾಸನಾ ಶಕ್ತಿ ಕೂಡ ಅತ್ಯುತ್ತಮ. ಹಾಗಾಗಿ, ಇವು ಶ್ವಾನದಳಗಳಿಗೆ ಪರ್ಯಾಯ ಆಗಬಲ್ಲವು ಎಂದು ಈ ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT