ಬಂಡಿಹಳ್ಳಿಯ ಯೋಗ ಸಾಧಕರು

7

ಬಂಡಿಹಳ್ಳಿಯ ಯೋಗ ಸಾಧಕರು

Published:
Updated:
ವೃಶ್ಚಿಕಾಸನದಲ್ಲಿ ನಂದಿನಿ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ‘ಯೋಗ’ ಎಂದರೆ ಸಾಕು ಥಟ್ಟನೇ ನೆನಪಾಗುವುದು ಬಂಡಿಹಳ್ಳಿ ಸಾಧಕರ ಹೆಸರು. ಇದೊಂದು 150 ಮನೆಗಳ ಪುಟ್ಟ ಗ್ರಾಮ. ಇಲ್ಲಿ 50ಕ್ಕೂ ಹೆಚ್ಚು ಯೋಗ ಸಾಧಕರಿದ್ದಾರೆ. ಅವರಲ್ಲಿ ಬಾಲಕಿಯರು ಹೆಚ್ಚಿದ್ದಾರೆ.

ಎಲ್ಲರೂ ಬಡತನವನ್ನೇ ಹಾಸಿ ಹೊದ್ದುಕೊಂಡವರು, ಇಟ್ಟಿಗಿ ಭಟ್ಟಿಯಲ್ಲಿ ಕೂಲಿ ಕೆಲಸ ಅವರ ಕುಟುಂಬದ ದೈನಿಂದಿನ ಕಾಯಕ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಗ್ರಾಮದ ಬಳಿ ಇರುವ ಗುಡ್ಡದಮೇಲೆ ಯೋಗ ಸಾಧನೆ.

ಕೂಲಿಯೇ ಜೀವನಾಧಾರ:

ಗ್ರಾಮದ ನಂದಿನಿ ಮತ್ತು ಅಮೃತಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಮೊದಲ ವರ್ಷದ ವಿದ್ಯಾರ್ಥಿನಿಯರು. ಇಬ್ಬರಿಗೂ ಕಡುಬಡತನ. ಕೂಲಿಯೇ ಅವರಿಗೆ ಜೀವನಾಧಾರ. ನಂದಿನಿಗೆ ತಂದೆ ಇಲ್ಲ, ರಜೆಯ ದಿನಗಳಲ್ಲಿ ತಾಯಿ ಜತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಆ ಹಣದಿಂದ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುತ್ತಿದ್ದಾರೆ. ನಂದಿನಿ, ತಂದೆಯ ಜೊತೆಗೆ ತಾವೂ ಕೂಲಿ ಹೋಗುತ್ತಾರೆ.

ಕಷ್ಟಕರವಾದ ವೃಕ್ಷಾಸನ, ಉತಿತ್ಥ ಪಾರ್ಶ್ವಕೋನಾಸನ, ವೀರಭದ್ರಾಸನ, ಪಶ್ಚಿಮೋತ್ತಾಸನ, ಉಷ್ಟ್ರಾಸನ, ಭುಜಂಗಾಸನ, ಗೋಮುಖಾಸನ, ಮತ್ಸ್ಯಾಸನ, ಊರ್ಧ್ವ ಧನುರಾಸನ, ಧನುರಾಸನ, ವಾಮದೇವ ವೃಶ್ಚಿಕಾಸನ, ಗಂಡುಭೇರುಂಡಾಸನವನ್ನು ಅವರಿಗೆ ಲೀಲಾಜಾಲ.

‘ಐದು ವರ್ಷಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಪಾಲ್ಗೊಳ್ಳುವ ಇಬ್ಬರಿಗೂ ಅವಕಾಶವಿತ್ತು. ಆದರೆ ಹಣಕಾಸಿನ ತೊಂದರೆಯಿಂದ ಹೋಗಲಾಗಲಿಲ್ಲ ಎನ್ನುವುದೇ ನೋವಿನ ಸಂಗತಿ’ ಎಂದು ತರಬೇತುದಾರರಾದ ಮಹಾಂತೇಶ್ ಪಾಟೀಲ್ ವಿಷಾದಿಸಿದರು.

ಗ್ರಾಮದ ಬಸವ ಪ್ರಭು, ಬಸವ ಗುರು, ಶಿವಕುಮಾರ, ಲಕ್ಷ್ಮೀ, ಚೈತ್ರಾ, ಕುಮಾರ ಸೇರಿದಂತೆ ಅನೇಕರು ವಿವಿಧ ರಾಜ್ಯಗಳಲ್ಲಿ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್‌ಷಿಪ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !