ಮಕ್ಕಳಿಗೆ ಪಾಠದೊಂದಿಗೆ ಯೋಗ ಶಿಕ್ಷಣ

ಬುಧವಾರ, ಜೂನ್ 26, 2019
24 °C
ಜೂನ್‌ 2ರಂದು ಅಂತರಾಷ್ಟ್ರೀಯ ಯೋಗ ದಿನ, ಶಾಲಾ ಕಾಲೇಜುಗಳಲ್ಲೂ ಆಚರಣೆ

ಮಕ್ಕಳಿಗೆ ಪಾಠದೊಂದಿಗೆ ಯೋಗ ಶಿಕ್ಷಣ

Published:
Updated:
Prajavani

ಸಂತೇಮರಹಳ್ಳಿ: ಶಾಲೆಗಳಲ್ಲಿ ಇತ್ತೀಚೆಗೆ ಮಕ್ಕಳ ಜ್ಞಾನ ವಿಕಾಸಕ್ಕೆ ಮಾತ್ರ ಆದ್ಯತೆ ನೀಡದೇ, ಯೋಗ ಕಲಿಕೆಗೂ ಈಗ ಮಹತ್ವ ನೀಡಲಾಗಿದೆ. ಯೋಗವನ್ನು ಮಾನಸಿಕ ಮತ್ತು ದೈಹಿಕ ವಿಕಾಸದ ಸಾಧನವಾಗಿ ಗುರುತಿಸಲಾಗದೆ. ಆದ್ದರಿಂದ, ಈಗ ಶಾಲಾ ಕಾಲೇಜುಗಳಲ್ಲೂ ಇದಕ್ಕೆ ಒತ್ತು ನೀಡಲಾಗುತ್ತಿದೆ.

ಸಂತೇಮರಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗದಿನ (ಜೂನ್-21) ಅಂಗವಾಗಿ ಪ್ರತಿದಿನ ಯೋಗಾಭ್ಯಾಸ ನಡೆಯುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಪ್ರತಿದಿನ ಮುಂಜಾನೆ ಯೋಗದ ವಿವಿಧ ಆಸನಗಳ ಅಭ್ಯಾಸಗಳನ್ನು ಮಾಡಿಸಲಾಗುತ್ತಿದೆ.

ಪ್ರಾಣಾಯಾಮ, ಶೀರ್ಷಾಸನ, ಸೂರ್ಯ ನಮಸ್ಕಾರ ಸೇರಿದಂತೆ ಇತರ ಆಸನಗಳನ್ನು ಅಭ್ಯಾಸ ಮಾಡಲಾಗುತ್ತಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಈ ದೆಸೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಯೋಗ ದಿನಕ್ಕೆ 400 ಮಕ್ಕಳನ್ನು ಸಜ್ಜುಗೊಳಿಸುತ್ತಿದ್ದಾರೆ.

ಯೋಗ ಉಪಯೋಗ: ‘ಕಲಿಕೆಗೆ ಪೂರಕವಾಗಿ ಮಾನವನ ದೇಹ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಅಯಾಮದಲ್ಲೂ ಸಕ್ರಿಯ ಚಟುವಟಿಕೆಗೆ ಯೋಗ ಶಿಕ್ಷಣ ಸಹಕಾರಿ. ಆದ್ದರಿಂದ ಈ ಆಧುನಿಕ ಯುಗದಲ್ಲೂ ಶಾಲಾ ಕಾಲೇಜಿನ ಹಂತದಲ್ಲಿ ಮನ್ನಣೆ ಪಡೆದಿದೆ. ಚಿಕ್ಕ ವಯಸ್ಸಿನಲ್ಲಿ ಯೋಗ ಪಾಠ ಕಲಿಯುವುದರಿಂದ ಮಿದಳು, ಕಣ್ಣು ಸೇರಿದಂತೆ ಇತ್ಯಾದಿ ಸೂಕ್ಷ್ಮ ಅಂಗಗಳು ಚುರುಕುಗೊಳ್ಳಲು ಸಹಾಯವಾಗುತ್ತದೆ’ ಎಂದು ಪ್ರಕಾಶ್ ಅವರು ‘ಪ್ರಜಾವಾಣಿ’ಗೆ ಹೇಳಿದರು. 

‘ಇಂದು ದೇಶದೆಲ್ಲೆಡೆ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಣದಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಮನೋನಿಯಂತ್ರಣ, ಇಂದ್ರಿಯ ನಿಗ್ರಹ, ಅಧಿಕ ಕಾರ್ಯೋತ್ಸಾಹ ಮತ್ತು ಧನಾತ್ಮಕ ಚಿಂತನೆ ಮನಸ್ಸಿನಲ್ಲಿ ರೂಪಿಸಲು ಇದರಿಂದ ಸಾಧ್ಯವಾಗುತ್ತದೆ. ಶಿಸ್ತಿನ ಜೀವನ ಮತ್ತು ದೇಹದ ಹಲವಾರು ಅಂಗಗಳು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ತರಗತಿ, ಬೋಧನಾ ಕಲಿಕೆ, ಏಕಾಗ್ರತೆ ಮತ್ತು ಜ್ಞಾನಶಕ್ತಿ ಮಕ್ಕಳಲ್ಲಿ ಹೆಚ್ಚಾಗುತ್ತದೆ’ ಎನ್ನುತ್ತಾರೆ ಅವರು.

‘ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಸಹಕಾರಿ. ಯೋಗಾಭ್ಯಾಸದಿಂದ ನಮ್ಮ ಮನಸ್ಸು ಮತ್ತು ದೇಹ ಎರಡನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು’ ಎನ್ನುವುದು ವಿದ್ಯಾರ್ಥಿನಿಯರಾದ ರೂಪಾ, ವಸಂತಾ ಅವರ ಮಾತು.

‘ಯೋಗದಲ್ಲಿ ಉಸಿರಾಟ ಕ್ರಿಯೆ ಮತ್ತಿತರ ಸಮತೋಲನ ಆಸನಗಳು ಮಿದುಳಿನ ಎರಡು ಕಡೆಗಳಲ್ಲೂ ಸಮತೋಲನ ಕಾಪಾಡುತ್ತದೆ. ಮಿದುಳಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನೂ ಸಮಯೋಚಿತವಾಗಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ’ ಎನ್ನುತಾರೆ 8ನೇ ತರಗತಿ ವಿದ್ಯಾರ್ಥಿ ಮಹದೇವು.

ಯೋಗಾಭ್ಯಾಸ ಉತ್ಸಾಹದಿಂದ ಆಚರಿಸಿ

‘ಈಗ ಯೋಗದಿನದ ವಿಶೇಷವಾಗಿ ಉತ್ಸಾಹದಿಂದ ಆಚರಿಸುವ ಜೊತೆಗೆ ಪ್ರತಿದಿನವೂ ಎಲ್ಲರೂ ಉತ್ಸಾಹದಿಂದ ಯೋಗಾಭ್ಯಾಸದಲ್ಲಿ ನಿರತರಾಗಬೇಕು. ಯೋಗಾಭ್ಯಾಸಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಸದೃಡ ಮೈಕಟ್ಟು ಮತ್ತು ಮಾನಸಿಕ ನೆಮ್ಮದಿಗೆ ಯೋಗ ಹೆಚ್ಚು ಉಪಕಾರಿ. ಅದರಲ್ಲೂ ವಿದ್ಯಾರ್ಥಿಗಳಿಗೆ ಯೋಗ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರಲಿದೆ. ಸ್ಮರಣ ಶಕ್ತಿ, ಬುದ್ದಿ ಮತ್ತೆ ಮತ್ತು ಭಾವನಾತ್ಮಕತೆ ಮೇಲೆ ಯೋಗ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ನಿವಾರಿಸಿ, ಸಮಚಿತ್ತ ಕಾಯ್ದುಕೊಳ್ಳಲು ಯೋಗ ಮದ್ದಾಗಿದೆ’ ಎಂದು ಉಪ ಪ್ರಾಂಶುಪಾಲ ಶಿವಣ್ಣ ‘ಪ್ರಜಾವಾಣಿ’ಗೆ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !