ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ: ವಿಶ್ವ ಆರೋಗ್ಯ ಸಂಸ್ಥೆ ಕರೆ

7
ಯೋಗದಿನ

ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ: ವಿಶ್ವ ಆರೋಗ್ಯ ಸಂಸ್ಥೆ ಕರೆ

Published:
Updated:
ಡಾ.ಪೂನಂ ಖೇತ್ರಪಾಲ್‌ ಸಿಂಗ್‌

ನವದೆಹಲಿ: ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಸಹಕಾರಿಯಾಗಿದೆ. ಇದರ ಸಂಪೂರ್ಣ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.

ಮನುಷ್ಯನ ಪ್ರಾಣಕ್ಕೆ ಎರವಾಗುವ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಸಂಭಾವ್ಯ ಅಪಾಯ ತಗ್ಗಿಸಲು ಯೋಗಾಭ್ಯಾಸ ನೆರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ವಿಭಾಗದ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್‌ ಸಿಂಗ್‌ ತಿಳಿಸಿದರು.

ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ ಹಾಗೂ ಮಧುಮೇಹದಿಂದ ಆಗ್ನೇಯ ಏಷ್ಯಾದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಿದ್ದಾರೆ.

ಪ್ರಾಣಕ್ಕೆ ಎರವಾಗುವ ಇಂಥ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಯೋಗಾಭ್ಯಾಸದಲ್ಲಿ ಪರಿಹಾರವಿದೆ ಎಂದು ಹೇಳಿದರು.

ನಿರಂತರ ಯೋಗಾಭ್ಯಾಸವು ಖಿನ್ನತೆಯನ್ನು ತಡೆಗಟ್ಟುತ್ತದೆ. ಅಲ್ಲದೆ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಮಾಂಸಖಂಡ, ಹೃದಯನಾಳ, ಮೂಳೆಗಳು ಸದೃಢವಾಗುತ್ತವೆ. ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ ಎಂದರು.

ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಂಭವಿಸುತ್ತಿರುವ ಅಕಾಲಿಕ ಮರಣದ ಪ್ರಮಾಣವನ್ನು 2025ರ ಹೊತ್ತಿಗೆ ಕಾಲು ಭಾಗದಷ್ಟು ಕಡಿಮೆಗೊಳಿಸಲು ಪ್ರಾದೇಶಿಕ ವಿಭಾಗದ ಸದಸ್ಯ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಅಲ್ಲದೆ, ಈ ಪ್ರಮಾಣವನ್ನು 2030ರ ಹೊತ್ತಿಗೆ ಮೂರನೇ ಒಂದರಷ್ಟು ಕಡಿಮೆ ಮಾಡುವ ಗುರಿ ಹೊಂದಿವೆ.

ಇದಕ್ಕಾಗಿಯೋಗವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ಕೊಟ್ಟರು.

ಜಾಗತಿಕ ಕ್ರಿಯಾ ಯೋಜನೆ

ವಿಶ್ವ ಆರೋಗ್ಯ ಸಂಸ್ಥೆಯು 2018ರಿಂದ 2030ರ ಅವಧಿಗೆ ಸಾಧಿಸಬೇಕಿರುವ ದೈಹಿಕ ಚಟುವಟಿಕೆಯ ಜಾಗತಿಕ ಕ್ರಿಯಾ ಯೋಜನೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ
* ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆಯನ್ನು ಜೀವನದ ಒಂದು ಅವಿಭಾಜ್ಯ ಅಂಗವಾಗಿಸಲು ಎಲ್ಲ ವಯಸ್ಸಿನವರಿಗೂ ನಿರಂತರ ಯೋಗ ಅಭ್ಯಾಸವು ಅಮೂಲ್ಯ ಸಾಧನವೆಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಿ ಹೇಳಿದೆ
* l5ರಿಂದ 17 ವರ್ಷ ವಯೋಮಾನದವರು ಪ್ರತಿನಿತ್ಯ ಕನಿಷ್ಠ 60 ನಿಮಿಷ ದೈಹಿಕ ಚಟುವಟಿಕೆಯಲ್ಲಿ ನಿರತರಾಗಬೇಕು
* ವಯಸ್ಕರು ವಾರಕ್ಕೊಮ್ಮೆ ಕನಿಷ್ಠ 150 ನಿಮಿಷಗಳ ಕಾಲ ಮಧ್ಯಮ- ತೀವ್ರತೆಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು
* ಯೋಗಾಭ್ಯಾಸವನ್ನು ಜೀವನ ಶೈಲಿಯ ಒಂದು ಭಾಗವಾಗಿಸಲು 20106ರಲ್ಲೇ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ಸಮಿತಿಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ
* ಸಾಂಕ್ರಾಮಿಕವಲ್ಲದ ಕಾಯಿಲೆಗಳ ಸಂಭಾವ್ಯ ಅಪಾಯ ತಗ್ಗಿಸುವ ಗುರಿಸಾಧಿಸುವವರೆಗೂ ಸದಸ್ಯ ರಾಷ್ಟ್ರಗಳು ತಾವು ರೂಪಿಸಿದ ಬಹು-ವಲಯಗಳ ಕ್ರಿಯಾ ಯೋಜನೆಗಳನ್ನು ಸಂಪೂರ್ಣ ಕಾರ್ಯಗತಗೊಳಿಸಬೇಕು

‘ಆರೋಗ್ಯಕರ ಹವ್ಯಾಸ ಮತ್ತು ವಿದ್ಯಾರ್ಥಿಗಳ ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವಲ್ಲಿ ಶಾಲೆಗಳು ಪ್ರಮುಖ ಪಾತ್ರವಹಿಸುತ್ತವೆ.’ 
- ಡಾ.ಪೂನಂ ಖೇತ್ರಪಾಲ್‌ ಸಿಂಗ್‌, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ವಿಭಾಗದ ನಿರ್ದೇಶಕಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !