ಮಾವು ತಳಿಗೆ ಯೋಗಿ ಹೆಸರು!

7

ಮಾವು ತಳಿಗೆ ಯೋಗಿ ಹೆಸರು!

Published:
Updated:

ಲಖನೌ: ಉತ್ತರ ಪ್ರದೇಶದ ತೋಟಗಾರಿಕಾ ಇಲಾಖೆ ಲಖನೌದಲ್ಲಿ ಎರಡು ದಿನಗಳ ಮಾವು ಮೇಳ ಆಯೋಜಿಸಿದ್ದು ದೇಶದಲ್ಲಿನ 700 ವಿಧದ ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ‘ಯೋಗಿ ಮಾವು’ ಮೇಳದ ಪ್ರಮುಖ ಆಕರ್ಷಣೆಯಾಗಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೇಳವನ್ನು ಉದ್ಘಾಟಿಸಿದರು. ‘ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೋಟಗರಿಕೆ ಇಲಾಖೆ ಆಯೋಜಿಸಿರುವ ಈ ಮೇಳ ಹೆಚ್ಚಿನ ಕೊಡುಗೆ ನೀಡಲಿದೆ’ ಎಂದರು. 

‘ಉತ್ತರಪ್ರದೇಶ ಅತಿ ಹೆಚ್ಚು ಮಾವು ಬೆಳೆಯುವ ರಾಜ್ಯವಾಗಿದೆಯಲ್ಲದೆ, ಹೆಚ್ಚು ತಳಿಗಳನ್ನು ಬೆಳೆಯುವ ರಾಜ್ಯವಾಗಿಯೂ ಗುರುತಿಸಿಕೊಂಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. 

ಸಹರಾನ್‌ಪುರದಿಂದ ತಂದಿದ್ದ ತಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೆಸರಿಡಲಾಗಿತ್ತು. ಉತ್ತರಾಖಂಡ, ಗುಜರಾತ್‌ ಮತ್ತು ಮಧ್ಯಪ್ರದೇಶದ ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸಿದ್ದರು. 

 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !