ಸಮುದಾಯದ ಅಭಿವೃದ್ಧಿ ಬಯಸುವವರೆ ನಿಜವಾದ ಸಂತರು

ಬುಧವಾರ, ಮಾರ್ಚ್ 27, 2019
26 °C

ಸಮುದಾಯದ ಅಭಿವೃದ್ಧಿ ಬಯಸುವವರೆ ನಿಜವಾದ ಸಂತರು

Published:
Updated:
Prajavani

ಬೆಂಗಳೂರು: ‘ಸಮುದಾಯದ ಕಲ್ಯಾಣ ಬಯಸುವವರೇ ನಿಜವಾದ ಸಂತರು’ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ವರ್ತೂರಿನ ಸರ್ಕಾರಿ ಕಾಲೇಜು ಆವರಣದಲ್ಲಿ ಕೈವಾರ ಯೋಗಿನಾರೇಯಣ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರ್ಮ ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾವು ಕಂಡುಕೊಂಡ ಸತ್ಯವನ್ನು ತಾವೊಬ್ಬರೇ ಅನುಭವಿಸುತ್ತಾ ಆತ್ಮಾನಂದವನ್ನು ಹೊಂದಿ ಅದನ್ನು ಹಂಚಿಕೊಳ್ಳುವ ಕಾಯಕವನ್ನು ಸಂತರು ಮಾಡಿಕೊಂಡು ಬಂದಿದ್ದಾರೆ. ಸಮಾಜದ ಕಳಕಳಿಯಿಂದ ಸಂತರು ಬದುಕಿನ ನಿಜಸತ್ಯವನ್ನು ಸಾಹಿತ್ಯ, ಕಾವ್ಯ, ತತ್ವದ ಮೂಲಕ ರಚಿಸಿ ಮಹದುಪಕಾರವನ್ನು ಮಾಡಿದ್ದಾರೆ ಎಂದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಮಾತನಾಡಿ, ‘ಅಜ್ಞಾನದಲ್ಲಿರುವವನಿಗೆ ಜ್ಞಾನದ ಮಾರ್ಗ ತೋರಿ ನಿಶ್ಚಲವಾದ ಮನಸ್ಸನ್ನು ನೀಡಿ, ಅಂತರಂಗದ ಕಲ್ಮಶಗಳನ್ನು ತೆಗೆದುಹಾಕಿ, ಮುಕ್ತಿಯ ದಾರಿಯನ್ನು ತೋರಿಸುವವನೇ ಗುರು. ಹಲವಾರು ವರ್ಷಗಳ ಹಿಂದಿನಿಂದಲೂ ಅನೇಕ ಗುರು ಮಹನೀಯರು ಕಾಲಾನುಸಾರವಾಗಿ ಮಾನವರಿಗೆ ಬೋಧನೆಗಳನ್ನು ನೀಡುತ್ತಾ ಬಂದಿದ್ದಾರೆ’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಯೋಗಿನಾರೇಯಣ ತಾತಯ್ಯನವರ ವಿಗ್ರಹವನ್ನು ವರ್ತೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !