ಈ ಬಾಲಕ ಸಾಫ್ಟ್‌ವೇರ್‌ ಕಂಪನಿ ಮಾಲೀಕ!

7
ಭಾರತದ ಆದಿತ್ಯನ್‌ ರಾಜೇಶ್‌ ಸಾಧನೆ

ಈ ಬಾಲಕ ಸಾಫ್ಟ್‌ವೇರ್‌ ಕಂಪನಿ ಮಾಲೀಕ!

Published:
Updated:
Deccan Herald

ದುಬೈ:  ಭಾರತದ 13 ವರ್ಷದ ಬಾಲಕ ಆದಿತ್ಯನ್‌ ರಾಜೇಶ್‌, ದುಬೈನಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕಂಪನಿಯೊಂದರ ಮಾಲೀಕನಾಗಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಈತ ತನ್ನ ಮೊದಲ ಮೊಬೈಲ್ ಅ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದ.

ಕೇರಳ ಮೂಲದವನಾದ ಆದಿತ್ಯನ್‌ ಒಂಬತ್ತು ವರ್ಷದವನಿದ್ದಾಗ ಬೇಸರ ಕಳೆಯಲು ಆರಂಭಿಸಿದ ಹವ್ಯಾಸ, ಆತ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವಂತೆ ಮಾಡಿತ್ತು. ಅಲ್ಲದೆ, ಲೋಗೊ ಹಾಗೂ ವೆಬ್‌ಸೈಟ್‌ಗಳನ್ನೂ ವಿನ್ಯಾಸ ಮಾಡುತ್ತಿದ್ದ ಆತ ಇದೀಗ ‘ಟ್ರಿನೆಟ್‌ ಸಲ್ಯೂಷನ್‌’ ಎಂಬ ಕಂಪೆನಿಯನ್ನು ಆರಂಭಿಸಿರುವುದಾಗಿ ‘ಖಲೀಜ್‌ ಟೈಮ್ಸ್‌’ ವರದಿ ಮಾಡಿದೆ.

‘ನಾನು ಕೇರಳದ ತಿರುವಲ್ಲಾದಲ್ಲಿ ಹುಟ್ಟಿದೆ. ಐದು ವರ್ಷದವನಿದ್ದಾಗ ನನ್ನ ಕುಟುಂಬ ಇಲ್ಲಿಗೆ ಬಂದಿತು. ನನ್ನ ತಂದೆ ಮೊದಲ ಬಾರಿ ನನಗೆ ಬಿಬಿಸಿ ಟೈಪಿಂಗ್‌ ವೆಬ್‌ಸೈಟ್‌ ಅನ್ನು ತೋರಿಸಿದ್ದರು. ಇದು ಮಕ್ಕಳು ಟೈಪಿಂಗ್ ಕಲಿಯಲು ನೆರವಾಗುವ ವೆಬ್‌ಸೈಟ್‌’ ಎಂದು ಆದಿತ್ಯನ್‌ ಪತ್ರಿಕೆಗೆ ತಿಳಿಸಿದ್ದಾನೆ.‘18 ವರ್ಷದ ನಂತರವೇ ನಾನು ಕಂಪನಿಯ ನಿಜವಾದ ಮಾಲೀಕನಾಗಲು ಸಾಧ್ಯ. ಆದರೂ ಕಂಪನಿ ರೀತಿಯಲ್ಲೇ 12ಕ್ಕೂ ಹೆಚ್ಚು ಗ್ರಾಹಕರ ಜತೆ ನಾವು ಕೆಲಸ ಮಾಡಿದ್ದೇವೆ. ಅವರಿಗೆ ನಮ್ಮ ವಿನ್ಯಾಸ ಮತ್ತು ಕೋಡಿಂಗ್ ಸೇವೆ ಉಚಿತವಾಗಿ ನೀಡಿದ್ದೇವೆ’ ಎಂದು ಆತ ಹೇಳಿದ್ದಾನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !