ಶುಕ್ರವಾರ, ಆಗಸ್ಟ್ 23, 2019
22 °C

ನೀರಿನಲ್ಲಿ ಮುಳುಗಿ ಯುವಕ ಸಾವು

Published:
Updated:
Prajavani

ಮಹದೇಶ್ವರ ಬೆಟ್ಟ: ಮಾದಪ್ಪನ ದರ್ಶನಕ್ಕಾಗಿ ಗೆಳೆಯರೊಂದಿಗೆ ಬೆಟ್ಟಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಭಾನುವಾರ ಇಲ್ಲಿನ ಅಣೆಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರು ಜಯನಗರದ ನಿವಾಸಿ ಪ್ರಭು (23) ಮೃತಪಟ್ಟವರು. ಪ್ರಭು ಹಾಗೂ ಏಳು ಮಂದಿ ಸ್ನೇಹಿತರು ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು. ಭಾನುವಾರ ಬೆಳಿಗ್ಗೆ ದೇವರ ದರ್ಶನ ಪಡೆಯುವುದಕ್ಕೂ ಮೊದಲೇ ಎಂಟು ಜನರೂ ಬೆಟ್ಟದಲ್ಲಿರುವ ಅಣೆಕಟ್ಟೆ ಬಳಿಗೆ ಹೋಗಿದ್ದರು.

ಸ್ನಾನಕ್ಕಾಗಿ ಪ್ರಭು ನೀರಿಗೆ ಇಳಿದಿದ್ದಾರೆ. ಅಣೆಕಟ್ಟೆಯಲ್ಲಿ ಹೆಚ್ಚು ಕೆಸರು ತುಂಬಿಕೊಂಡಿದ್ದುದರಿಂದ ಸಿಲುಕಿ ಮೇಲೆ ಬರಲು ಸಾಧ್ಯವಾಗದೆ ಗೆಳೆಯರ ಕಣ್ಣೆದುರೇ ಮುಳುಗಿದರು. ಅವರ ಸ್ನೇಹಿತರಿಗೂ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಇನ್‌ಸ್ಪೆಕ್ಟರ್‌ ಮಹೇಶ್‌ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಹೊಗೇನಕಲ್‌ನಿಂದ ನುರಿತ ಈಜುಗಾರರನ್ನು ಕರೆಸಿ ಶವವನ್ನು ಮೇಲಕ್ಕೆತ್ತಲಾಯಿತು.

Post Comments (+)