ಕೃಷಿ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಿ: ಎಚ್‌.ಎಸ್‌.ದೊರೆಸ್ವಾಮಿ ಸಲಹೆ

7
ದುಂಡು ಮೇಜಿನ ಸಭೆ

ಕೃಷಿ ಕ್ಷೇತ್ರದಲ್ಲೂ ಉದ್ಯೋಗ ಸೃಷ್ಟಿಸಿ: ಎಚ್‌.ಎಸ್‌.ದೊರೆಸ್ವಾಮಿ ಸಲಹೆ

Published:
Updated:
Deccan Herald

ಬೆಂಗಳೂರು: ಕೃಷಿಗೆ ಸಂಬಂಧಪಟ್ಟ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರ ಯೋಜನೆ ರೂಪಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ‌ ಸಲಹೆ ನೀಡಿದರು.

ಇದರಿಂದ ಉದ್ಯೋಗಕ್ಕಾಗಿ ಯುವಕರು ನಗರಗಳತ್ತ ಹೋಗುವುದನ್ನು ತಪ್ಪಿಸಬಹುದು ಎಂದರು.

‘ಉದ್ಯೋಗಕ್ಕಾಗಿ ಯುವ ಜನರು’ ಸಂಘಟನೆಯು ಭಾನುವಾರ ನಗರದಲ್ಲಿ ಆಯೋಜಿಸಿದ್ದ ನಿರುದ್ಯೋಗಿ ಯುವಜನರು, ಗುತ್ತಿಗೆ ನೌಕರರ ಜಂಟಿ ಆಂದೋಲನ ಪುನರಾರಂಭ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು ಬಜೆಟ್‌ನಲ್ಲಿ ವಿಶಿಷ್ಟ ಯೋಜನೆ ರೂಪಿಸುವ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಕೊಟ್ಟಿಲ್ಲ. ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ಭದ್ರತೆ ಕಲ್ಪಿಸುವ ಯೋಜನೆ ರೂಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ದೂರಿದರು.

‘ವಿದ್ಯಾವಂತರಾಗಿರುವ ಅವರೆಲ್ಲರಿಗೂ ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯ. ಸರ್ಕಾರಿ ಕೆಲಸವನ್ನೇ ನೀಡಬೇಕು ಎಂಬುದು ಒತ್ತಾಯವಲ್ಲ. ಆದರೆ, ಎಲ್ಲರಿಗೂ ಉದ್ಯೋಗ ಸಿಗುವಂತಹ ವಾತಾವರಣ ಸೃಷ್ಟಿಸಬೇಕು’ ಎಂದು ಹೇಳಿದರು.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್‌.ಆರ್‌.ಹಿರೇಮಠ, ‘ದುಡಿಯುವ ಸಾಮರ್ಥ್ಯವಿದ್ದರೂ ಕೋಟ್ಯಂತರ ಯುವಜನರಿಗೆ ಉದ್ಯೋಗವಿಲ್ಲ. ಸುಭದ್ರ ಉದ್ಯೋಗ ಹೊಂದುವುದು ಮೂಲಭೂತ ಹಕ್ಕು’ ಎಂದರು.

‘ಗುತ್ತಿಗೆ ನೌಕರರನ್ನು ಕಾಯಂ ಮಾಡಿಕೊಳ್ಳುತ್ತಿಲ್ಲ ಮತ್ತು ಅವರಿಗೆ ತಿಂಗಳುಗಟ್ಟಲೆ ವೇತನ ಪಾವತಿ ಆಗಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಸರ್ಕಾರ ಇವರಿಗೆ ಸೂಕ್ತ ಪರಿಹಾರ ಒದಗಿಸಬೇಕಿದೆ’ ಎಂದರು.

ಸುಸ್ಥಿರ ಉದ್ಯೋಗ ಕೇಂದ್ರದ ನಿರ್ದೇಶಕ ಅಮಿತ್‌ ಭಾಸೋಲೆ, ಅಂಕಣಕಾರ ಕೆ.ಪಿ.ಸುರೇಶ್‌ ಮತ್ತು ಸಂಘಟನೆಯ ಸಂಚಾಲಕ ಎಚ್‌.ವಿ.ವಾಸು ವಿಚಾರ ಮಂಡಿಸಿದರು.

ಯುವಜನರ ಬೇಡಿಕೆಗಳು
*
 ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಸಬೇಕು 
* ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು 
* ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು 
* ಸಮಾನ ಕೆಲಸಕ್ಕೆ ಸಮಾನ ವೇತನ ನೀಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !