ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಕಾನ್‌ ಸಿಟಿಗೆಆನ್‌ಲೈನ್‌ ಡೇಟಿಂಗ್‌ ಮೋಹ

Last Updated 17 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಶೇ 69ರಷ್ಟು ಜನರು ಜೀವನ ಸಂಗಾತಿ ಆಯ್ಕೆಗಾಗಿಡೇಟಿಂಗ್‌ ಆ್ಯಪ್‌ ಅವಲಂಬಿಸಿದ್ದಾರೆ. ಇದಲ್ಲದೇ ಜೀವನ ಸಂಗಾತಿ ಆಯ್ಕೆ, ಸ್ನೇಹ, ಸಂಬಂಧ, ದೈಹಿಕ ಸಾಂಗತ್ಯ ಮತ್ತು ಗಂಭೀರ ಸಂಬಂಧ ಬೆಳೆಸಲು ‘ಡೇಟಿಂಗ್‌ ಆ್ಯಪ್‌’ ಬಳಕೆಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಸೈಬರ್‌ ಭದ್ರತೆ ಒದಗಿಸುವ ನೋರ್ಟನ್‌ ಲೈಫ್‌ಲಾಕ್ (ನ್ಯಾಸ್‌ ಡಾಕ್‌) ಕಂಪನಿ ಈಚೆಗೆ ಬಿಡುಗಡೆ ಮಾಡಿರುವ ‘ಇಂಡಿಯಾ ಡಿಜಿಟಲ್ ವೆಲ್‌ನೆಸ್‌’ ವರದಿಯಲ್ಲಿ ಡೇಟಿಂಗ್ ಆ್ಯಪ್‌, ಆನ್‌ಲೈನ್‌ ಸ್ನೇಹ ಮತ್ತು ದೋಖಾಗಳಿಗೆ ಸಂಬಂಧಿಸಿದಂತೆ ಇಂತಹ ಅನೇಕ ಕುತೂಹಲಕಾರಿ ಸಂಗತಿಗಳಿವೆ.

ಜೀವನ ಸಂಗಾತಿ ಹುಡುಕಲು ಡೇಟಿಂಗ್‌ ಆ್ಯಪ್‌ ಬಳಕೆಯಲ್ಲಿ ಕೋಲ್ಕತ್ತ ಮೊದಲ ಸ್ಥಾನದಲ್ಲಿದೆ. ಶೇ 83ರಷ್ಟು ಬಂಗಾಳಿಗಳು ಡೇಟಿಂಗ್‌ ಆ್ಯಪ್‌ ಬಳಸುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಕನ್ನಡಿಗರಿದ್ದಾರೆ. ಭುವನೇಶ್ವರದ ಶೇ 80ರಷ್ಟು ಜನರು ಸಂಬಂಧ ಕುದುರಿಸಲು ಈ ಆ್ಯಪ್‌ ಮೊರೆ ಹೋಗುತ್ತಿದ್ದಾರೆ.

ಶೇ 72ರಷ್ಟು ಜನರು ಕೇವಲ ಸ್ನೇಹ ಅಥವಾ ಸಾಂಗತ್ಯಕ್ಕಾಗಿ, ಶೇ 35ರಷ್ಟು ಜನರು ಸಮಯ ಕಳೆಯಲು ಮತ್ತು ಶೇ 63ರಷ್ಟು ಜನರು ಗಂಭೀರ ಸಂಬಂಧಗಳಿಗೆ ಡೇಟಿಂಗ್‌ ಆ್ಯಪ್‌ ಬಳಸುತ್ತಿದ್ದಾರೆ. ಶೇ 49ರಷ್ಟು ಜನರು ಜೀವನಶೈಲಿಗೆ ಹೊಂದಾಣಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಈ ಆ್ಯಪ್‌ ಬಳಸುತ್ತಿಲ್ಲ. ಶೇ 27ರಷ್ಟು ಜನರು ನಕಾರಾತ್ಮಕ ಮಾಹಿತಿ ನಂಬಿ ಈ ಆ್ಯಪ್‌ ಸಹವಾಸದಿಂದ ದೂರ ಉಳಿದಿದ್ದಾರೆ ಎಂಬ ಅಂಶಗಳನ್ನು ವರದಿ ಹೇಳಿದೆ.

ಡೇಟಿಂಗ್‌ ಆ್ಯಪ್‌ ವ್ಯಾಮೋಹ

ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾಗುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡದೆಯೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಶೇ 40ರಷ್ಟು ಜನರು ಹಿಂಜರಿಯುವುದಿಲ್ಲ

ಆನ್‌ಲೈನ್‌ ಮೂಲಕ ಸಂಬಂಧ ಬೆಳೆಸುವ ಜನರು ವಿಶ್ವಾಸಾರ್ಹರಾಗಿದ್ದಾರೆ ಎಂದುಶೇ 66ರಷ್ಟು ಮಹಿಳೆಯರು ಮತ್ತು ಶೇ 63ರಷ್ಟು ಪುರುಷರು ನಂಬುತ್ತಾರೆ

ಭಾರತೀಯ ಪುರುಷ ಮತ್ತು ಮಹಿಳೆಯರು ಆನ್‌ಲೈನ್‌ ಡೇಟಿಂಗ್‌ ಬಗ್ಗೆ ಮುಕ್ತ ಮನಸ್ಸು ಹೊಂದಿದ್ದಾರೆ.

ಪ್ರತಿ ಹತ್ತು ಜನರಲ್ಲಿ ನಾಲ್ವರು ಗಂಭೀರ ಸಂಬಂಧಗಳಿಗಾಗಿಯೇ ಆನ್‌ಲೈನ್‌ ಡೇಟಿಂಗ್‌ ಆ್ಯಪ್‌ ಅವಲಂಬಿಸಿದ್ದಾರೆ.

ಮೆಟ್ರೊ ನಗರಗಳ ಶೇ 55ರಷ್ಟು ಜನರು ಗಂಭೀರ ಸಂಬಂಧಕ್ಕಾಗಿಯೇ ಹುಡುಕುತ್ತಿದ್ದಾರೆ

ಎರಡನೇ ಹಂತದ ನಗರಗಳಲ್ಲಿ ಶೇ 68 ಮತ್ತು ಮೂರನೇ ಹಂತದ ನಗರಗಳಲ್ಲಿ ಶೇ 21ರಷ್ಟು ಜನರು ಸಾಮಾನ್ಯ ಡೇಟಿಂಗ್‌ ಮತ್ತು ದೈಹಿಕ ವಾಂಛೆಗಾಗಿ ಈ ಆ್ಯಪ್‌ ಅವಲಂಬಿಸಿದ್ದಾರೆ

ಸುಲಭವಾಗಿ ಕೈಗೆಟಕುವ ಸ್ಮಾರ್ಟ್ ಫೋನ್‌ ಎರಡನೇ ಹಂತದ ನಗರಗಳಲ್ಲಿ ಪ್ರಮುಖ ಮನರಂಜನೆಯ ಮೂಲವಾಗಿಸಿದೆ

ಆನ್‌ಲೈನ್‌ ಮೂಲಕ ಭೇಟಿಯಾದ ಜನರು ವಿಶ್ವಾಸಾರ್ಹರು ಎಂದುಶೇ 68 ರಷ್ಟು ಜನರು ನಂಬುತ್ತಾರೆ

ಸ್ಮಾರ್ಟ್ ಫೋನ್‌ ಇಲ್ಲದೆ ಬದುಕಿಲ್ಲ

ಎರಡನೇ ಹಂತದ ನಗರಗಳಲ್ಲಿ ಸ್ಮಾರ್ಟ್ ಫೋನ್‌ಗಳು ಜೀವನದ ಅವಿಭಾಜ್ಯ ಅಂಗಗಳಾಗಿವೆ.
ಮನೆಯಿಂದ ಹೊರ ಹೋಗುವಾಗ ಸ್ಮಾರ್ಟ್ ಫೋನ್‌ ಮರೆತು ಹೋದರೆ ಶೇಕಡ 72 ಮಹಿಳೆಯರು ಮತ್ತು
ಶೇಕಡ 60ರಷ್ಟು ಪುರುಷರು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಸ್ಮಾರ್ಟ್ ಫೋನ್‌ ಇಲ್ಲದೆ ತಮಗೆ ಬದುಕುವುದು ಸಾಧ್ಯವೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ ಎಂಬ ಸಂಗತಿ ಸಮೀಕ್ಷೆ ವೇಳೆ ಬಹಿರಂಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT