ಶನಿವಾರ, ಏಪ್ರಿಲ್ 17, 2021
30 °C

ಐಎಇಎ ನಿರ್ದೇಶಕ ಯುಕಿಯಾ ಅಮಾನೊ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಯನ್ನಾ (ಎಪಿ): ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಮಹಾ ನಿರ್ದೇಶಕ ಯುಕಿಯಾ ಅಮಾನೊ (72) ಸೋಮವಾರ ನಿಧನರಾದರು.

ಸಾವಿನ ಕಾರಣವನ್ನು ‘ಐಎಇಎ’ ಸ್ಪಷ್ಟಪಡಿಸಿಲ್ಲ. ಆದರೆ, ಹುದ್ದೆಯಿಂದ ಕೆಳಗಿಳಿಯುವ ಕುರಿತು ಆಡಳಿತ ಮಂಡಳಿಗೆ ಈ ಮೊದಲು ಮಾಹಿತಿ ನೀಡಿದ್ದರು. ರಾಜೀನಾಮೆ ಕುರಿತು ಪತ್ರ ಸಿದ್ಧಪಡಿಸಿದ್ದರು ಎಂದು ಸಂಸ್ಥೆ ಹೇಳಿದೆ. 

ಪತ್ರದ ಕೆಲವು ಅಂಶಗಳನ್ನು ಮಾಧ್ಯಮಗಳಿಗೆ ಸಂಸ್ಥೆ ಬಿಡುಗಡೆ ಮಾಡಿದೆ. ಶಾಂತಿ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಬಳಕೆ ಕುರಿತು ಸಂಸ್ಥೆ ತಳೆದ ನಿಲುವುಗಳನ್ನು ಅಮಾನೊ ಶ್ಲಾಘಿಸಿದ್ದಾರೆ ಎಂದು ತಿಳಿಸಿದೆ. 

ಜ‍ಪಾನ್‌ ರಾಜತಾಂತ್ರಿಕ ತಜ್ಞರಾಗಿದ್ದ ಅಮಾನೊ 2009ರಲ್ಲಿ ಐಎಇಎ ಸೇರಿದ್ದರು. ಇದಕ್ಕೂ ಮೊದಲು ಜಪಾನ್‌ನ ವಿದೇಶಾಂಗ ಸಚಿವಾಲಯದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 1995, 2000 ಮತ್ತು 2005ರ  ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಎಸ್‌ಜಿ) ಅವರು ಕೊಡುಗೆ ನೀಡಿದ್ದರು. 2007ರ ಎನ್‌ಎಸ್‌ಜಿ ಒಪ್ಪಂದ ರಚನಾ ಸಭೆ ಮತ್ತು 2010ರ ಒಪ್ಪಂದ ಪರಾಮರ್ಶನಾ ಸಭೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು