ಜಿ.ಪಂ. ಉಪ ಚುನಾವಣೆ ಮೂರು ನಾಮಪತ್ರ ಸಲ್ಲಿಕೆ

7

ಜಿ.ಪಂ. ಉಪ ಚುನಾವಣೆ ಮೂರು ನಾಮಪತ್ರ ಸಲ್ಲಿಕೆ

Published:
Updated:

ಬೆಂಗಳೂರು: ನಗರ ಜಿಲ್ಲೆಯ ಮಹದೇವಪುರ ಕ್ಷೇತ್ರದ ಆವಲಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಗೆ ಮಂಗಳವಾರ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಈ ಕ್ಷೇತ್ರದ ಸದಸ್ಯ ಜಯರಾಮ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅ. 28ರಂದು ಚುನಾವಣೆ ನಡೆಯಲಿದೆ.

ಕೆ.ಆರ್.ಪುರದ ತಾಲ್ಲೂಕು ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥ ಕೆ., ಕಾಂಗ್ರೆಸ್ ಅಭ್ಯರ್ಥಿ ಮಹಾಲಕ್ಷ್ಮೀ ಜಯರಾಮ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ರಾಜು ಅವರು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಪರಿಶೀಲಿಸಲು ಬುಧವಾರ ಕೊನೆಯ ದಿನ. 20ರಂದು ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಬಹುದು. 31ರಂದು ಫಲಿತಾಂಶ ಹೊರಬೀಳಲಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !