ಬುಧವಾರ, ನವೆಂಬರ್ 20, 2019
21 °C

ಜಿಂಬಾಬ್ವೆ ಮಾಜಿ ಅಧ್ಯಕ್ಷ ರಾಬರ್ಟ್‌ ಮುಗಾಬೆ ಸಿಂಗಾಪುರದಲ್ಲಿ ನಿಧನ

Published:
Updated:

 ಹರಾರೆ (ಎಎಫ್‌ಪಿ): ಜಿಂಬಾಬ್ವೆ ಮಾಜಿ ಅಧ್ಯಕ್ಷ ರಾಬರ್ಟ್‌ ಮುಗಾಬೆ(95) ಸಿಂಗಪುರದ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಸಿಂಗಪುರದ ಆಸ್ಪತ್ರೆ ಯೊಂದರಲ್ಲಿ ದಾಖಲಿಸಲಾಗಿತ್ತು.

‘ಬ್ರಿಟಿಷರ ಆಳ್ವಿಕೆಯಿಂದ ಜಿಂಬಾಬ್ವೆ ಯನ್ನು ವಿಮೋಚನೆಗೊಳಿಸಲು ಮುಗಾಬೆ ನಡೆಸಿದ ಹೋರಾಟ, ದೇಶದ ಪ್ರಗತಿಗೆ ಅವರ ಕೊಡುಗೆಯನ್ನು ಜನರು ಮರೆಯುವುದಿಲ್ಲ’ ಎಂದು ಅಧ್ಯಕ್ಷ ಎಮರ್ಸನ್‌ ನಂಗಾಗ್ವ ಟ್ವೀಟ್‌ ಮಾಡಿದ್ದಾರೆ.

ಮುಗಾಬೆ ಆಡಳಿತವನ್ನು ರಾಜ ಕೀಯ ಭಿನ್ನಾಭಿಪ್ರಾಯಗಳ ದಮನ ಹಾಗೂ ಆರ್ಥಿಕ ಸಂಕಷ್ಟಕ್ಕೆ ನೂಕಿದ ದಿನಗಳು ಎಂದೇ ಕರೆಯಲಾಗುತ್ತದೆ.

ರಾಜಕೀಯ ಕೈದಿಯಾಗಿ ಅವರು ಜೈಲು ಸೇರಿದ್ದರು. ಹೊರ ಬಂದ ನಂತರ ಆಡಳಿತದ ವಿರುದ್ಧ ದಂಗೆ ಎದ್ದು, ಹೋರಾಟ ಸಂಘಟಿಸುತ್ತಾರೆ. ನಂತರ 1980 ರಲ್ಲಿ ನಡೆದ ಚುನಾ ವಣೆಯಲ್ಲಿ ಭಾರಿ ಬಹುಮತದೊಂದಿಗೆ ಚುನಾಯಿತರಾಗುತ್ತಾರೆ. 1980ರಿಂದ 2017ರವರೆಗೆ ಸುದೀರ್ಘ ಕಾಲ ದೇಶವನ್ನಾಳಿದ ಅವರು, ಅಧಿಕಾರಕ್ಕಾಗಿ ದಬ್ಬಾಳಿಕೆ ಹಾಗೂ ಭೀತಿಯನ್ನುಂಟು ಮಾಡುವ ತಂತ್ರಕ್ಕೆ ಮೊರೆ ಹೋದರು. ಕೊನೆಗೆ ಅವರಿಗೆ ನಿಷ್ಠರಾಗಿದ್ದ ಸೇನಾಧಿ ಕಾರಿಗಳೇ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರು.

ತಮ್ಮ ಆಡಳಿತದ ಪ್ರಾರಂಭದ ದಿನ ಗಳಲ್ಲಿ ಜನಾಂಗೀಯ ಸಾಮರಸ್ಯ ಹಾಗೂ ಕರಿಯರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಿಗುವಂತೆ ಮಾಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದರು. 

ತಮ್ಮ ರಾಜಕೀಯ ವಿರೋಧಿಗಳ ಮೇಲೆ ನಡೆಸಿದ ದೌರ್ಜನ್ಯ ಮುಗಾಬೆ ಅವರ ಜನಪ್ರಿಯತೆಯನ್ನು ಮಸುಕಾಗಿ ಸಿತು. ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ‘ಗುಕುರಾಹುಂಡಿ’ ಎಂಬ ಆಂದೋಲವನ್ನೇ ಆರಂಭಿಸಿದ್ದ  ಅವರು, ಅಂದಾಜು 20 ಸಾವಿರಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿಸಿದ್ದು ಕರಾಳ ಇತಿಹಾಸ.

‘ಭಾರತದ ನೈಜ ಗೆಳೆಯ’: ಮುಗಾಬೆ ಅವರ ನಿಧನಕ್ಕೆ ಭಾರತ ತೀವ್ರ ಶೋಕ ವ್ಯಕ್ತಪಡಿಸಿದೆ. ಅವರು ಭಾರತದ ನೈಜ ಮಿತ್ರರಾಗಿದ್ದರು ಮತ್ತು ವಿಮೋಚನೆಯ ಪ್ರತೀಕವಾಗಿದ್ದರು. ಭಾರತ– ಜಿಂಬಾಬ್ವೆಯ ಬಾಂಧವ್ಯಕ್ಕೆ ಅವರು ಅಪಾರ ಕೊಡುಗೆ ನೀಡಿದ್ದರು ಎಂ

1980ರಲ್ಲಿ ದೇಶ ಸ್ವಾತಂತ್ರ್ಯವಾದ ನಂತರದಿಂದ ಅಧಿಕಾರ ನಡೆಸಿದ ಮುಗಾಬೆ 2018ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ದೇಶದಲ್ಲಿ 1987ರಲ್ಲಿ ಅಧ್ಯಕ್ಷೀಯ ಪದ್ಧತಿ ಜಾರಿಯಾಗುವವರೆಗೆ ಪ್ರಧಾನಿಯಾಗಿದ್ದ ಇವರು, 2017ರ ನವೆಂಬರ್‌ನಲ್ಲಿ ಪದಚ್ಯುತರಾಗುವವರೆಗೂ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: ಮುಗಾಬೆ ಯುಗಕ್ಕೆ ಅಂತ್ಯ ಹಾಡಿದರೇ ಗ್ರೇಸ್‌?

2017ರ ಅಕ್ಟೋಬರ್‌ನಲ್ಲಿ ಮುಗಾಬೆ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಸೌಹಾರ್ದ ರಾಯಭಾರಿಯಾಗಿ ನೇಮಿಸಲಾಗಿತ್ತು. ಅವರ ನೇಮಕ ಜಾಗತಿಕ ಚರ್ಚೆಗೂ ಕಾರಣವಾಗಿತ್ತು. 

ಇದನ್ನೂ ಓದಿ: ಜಿಂಬಾಬ್ವೆ: ಮುಗಾಬೆ ನಂತರದ ಮೊದಲ ಸಾರ್ವತ್ರಿಕ ಚುನಾವಣೆ

37 ವರ್ಷಗಳ ಅಂತ್ಯ!

ಝನು–ಪಿಎಫ್‌ ಪಕ್ಷದಲ್ಲಿ ತಲೆದೋರಿದ ಉತ್ತರಾಧಿಕಾರಿ ಆಯ್ಕೆಯ ವಿಚಾರದಲ್ಲಿ 2015ರಿಂದ ಹಲವು ಬೆಳವಣಿಗೆಗಳು ಘಟಿಸಿದ್ದವು. ಮುಗಾಬೆ ತನ್ನ ಆಪ್ತನಾಗಿದ್ದ ಎಮರ್‌ಸನ್‌ ನನ್‌ಗಾಗ್ವ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದರು. 2015ರಲ್ಲಿ ಮುಗಾಬೆ ಪತ್ನಿ ಗ್ರೇಸ್‌ ಅವರನ್ನು ಝನು ಪಿಎಫ್‌ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆಯನ್ನಾಗಿ ನೇಮಿಸಲಾಗಿತ್ತು. ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಇರಾದೆ ಮುಗಾಬೆ ಅವರದ್ದಾಗಿತ್ತು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಸೇನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ನನ್‌ಗಾಗ್ವ ಅವರಿಗೆ ಸೇನೆ ಬೆಂಬಲ ನೀಡಿತು. ಮುಗಾಬೆ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. 

ಇದನ್ನೂ ಓದಿ: ಹೊಸ ಅರುಣೋದಯದತ್ತ ಜಿಂಬಾಬ್ವೆ

ಆಡಳಿತಾರೂಢ ’ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯ‌ನ್–ಪೆಟ್ರಿಯಾಟಿಕ್ ಫ್ರಂಟ್' (ಝನು–ಪಿಎಫ್‌) ಪಕ್ಷದ ಮುಖ್ಯಸ್ಥ ಸ್ಥಾನದಿಂದ ಪದಚ್ಯುತಿ ಮಾಡಲಾಯಿತು. ನನ್‌ಗುವಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಯಿತು. 

ಪ್ರತಿಕ್ರಿಯಿಸಿ (+)