ವಧು - Bride

ಮದುಮಗಳಿಗೆ ಬಗೆ ಬಗೆ ಲೆಹೆಂಗಾ

MH-Team

ಇತ್ತೀಚಿನ ಮದುವೆಗಳಲ್ಲಿ ಸೀರೆಗಳ ಜತೆಗೆ ಲೆಹಂಗಾಗಳೂ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಮದುವೆ, ಮದುವೆಯ ಮುನ್ನಾದಿನದ ಕಾರ್ಯಕ್ರಮಗಳು, ರಿಸೆಪ್ಶನ್‌, ಪ್ರಿ ವೆಡ್ಡಿಂಗ್‌ ಹೀಗೆ ಹಲವು ಸಂದರ್ಭಗಳಲ್ಲಿ ಲೆಹೆಂಗಾಗಳು ಬೆಸ್ಟ್ ಆಯ್ಕೆಯಾಗಿವೆ. ಈ ವರ್ಷ ವೈವಿಧ್ಯಮಯ  ಲೆಹಂಗಾಗಳು ಟ್ರೆಂಡಿಂಗ್‌ನಲ್ಲಿವೆ.

ಸೆಲ್ಫ್ ಕಲರ್ ಥ್ರೆಡ್ ವರ್ಕ್ ಬ್ರೈಡಲ್ ಲೆಹೆಂಗಾ

ಸೆಲ್ಫ್ ಕಲರ್ ಥ್ರೆಡ್ ವರ್ಕ್ ಲೆಹೆಂಗಾಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗುತ್ತಿವೆ. ವಿಶೇಷವಾಗಿ ಪ್ರಿಯಾಂಕಾ ಚೋಪ್ರಾ ತಮ್ಮ ಮದುವೆಯಲ್ಲಿ ಸಂಪೂರ್ಣವಾಗಿ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಅಂದಿನಿಂದ, ಹಲವರು ಮದುವೆಯಲ್ಲಿ ಈ ಶೈಲಿಯನ್ನು ಆರಿಸಿಕೊಂಡಿದ್ದಾರೆ.

ವೆಲ್ವೆಟ್‌ ಲೆಹೆಂಗಾ

ವೆಲ್ವೆಟ್‌ ಲೆಹೆಂಗಾ ಮದುವೆಯಲ್ಲಿ ಧರಿಸಬಹುದಾದ ಅತ್ಯಾಕರ್ಷಕ ಉಡುಗೆಯಾಗಿದೆ. ವೆಲ್ವೆಟ್‌ ಬಟ್ಟೆಗಳು ಮೃದುವಾದ, ಧರಿಸಲೂ ಹಿತವಾಗಿರುತ್ತದೆ. ಅಲ್ಲದೆ ಈ ಬಟ್ಟೆ ತುಸು ಭಾರವಾಗಿರುವುದರಿಂದ ಕಾಳಜಿಯಿಂದ ನಿರ್ವಹಿಸಬೇಕಾಗುತ್ತದೆ. ವೆಲ್ವೆಟ್‌ ಬಟ್ಟೆಯ ಮೇಲೆ ಕಸೂತಿ ಮಾಡಿದ್ದರೆ ನಿಮ್ಮ ಉಡುಗೆ ಕ್ಲಾಸಿಯಾಗಿ ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬನಾರಸಿ ಲೆಹೆಂಗಾ

ಬನಾರಸಿ ಲೆಹಂಗಾಗಳನ್ನು ಸುಂದರವಾದ ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ರೇಷ್ಮೆ ಬಟ್ಟೆಯ ಮೇಲೆ ನೇಯಲಾಗುತ್ತದೆ. ಇವು ತುಂಬಾ ಹಗುರವಾಗಿದ್ದು, ಆರಾಮದಾಯಕವಾಗಿರುತ್ತವೆ. ಮದುವೆಯಂತಹ ಅದ್ಧೂರಿ‌ ಸಮಾರಂಭಗಳಲ್ಲಿ ಬನಾರಸಿ ಲೆಹೆಂಗಾಗಳು ಧರಿಸಲು ಹಿತವಾಗಿರುತ್ತದೆ.

ಥ್ರೆಡ್ ವರ್ಕ್ ಬ್ರೈಡಲ್ ಲೆಹೆಂಗಾ

ಥ್ರೆಡ್ ವರ್ಕ್ ಬ್ರೈಡಲ್ ಲೆಹೆಂಗಾಗಳು ಎಲ್ಲಾ ರೀತಿಯ ಮೈಕಟ್ಟಿನವರಿಗೂ ಸೆಟ್‌ ಆಗುತ್ತವೆ. ಭಾರತೀಯ ಸಾಂಪ್ರದಾಯಿಕ ಲೆಹೆಂಗಾಗಳು ಮದುವೆ ಮತ್ತು ಹಬ್ಬದ ಸಂದರ್ಭಗಳಲ್ಲಿ ಪ್ರಾಮುಖ್ಯತೆ ಹೊಂದಿವೆ.

ಕಾಂಟ್ರಾಸ್ಟ್ ಎಂಬ್ರಾಯ್ಡರಿ ಬ್ರೈಡಲ್ ಲೆಹೆಂಗಾ

ಕಾಂಟ್ರಾಸ್ಟ್ ಎಂಬ್ರಾಯ್ಡರಿ ಲೆಹೆಂಗಾಗಳನ್ನು ಸಾಮಾನ್ಯವಾಗಿ ಗ್ರ್ಯಾಂಡ್ ಮೆಹೆಂದಿ ಕಾರ್ಯಕ್ರಮಗಳಲ್ಲಿ ಹೆಚ್ಚಿನವರು ಆಯ್ಕೆ ಮಾಡುತ್ತಾರೆ.

ಮನಮೋಹಕವಾಗಿ ಕಾಣಲು ಬಯಸಿದರೆ ಕಾಂಟ್ರಾಸ್ಟ್ ಕಸೂತಿ ಲೆಹೆಂಗಾವನ್ನು ಆರಿಸಿಕೊಳ್ಳಿ. ಉದಾಹರಣೆಗೆ, ಬಿಳಿ ಬಣ್ಣದೊಂದಿಗೆ ರಕ್ತ-ಕೆಂಪು ಲೆಹೆಂಗಾ ಅಥವಾ ಚಿನ್ನದ ಬಣ್ಣದೊಂದಿಗೆ ಕೆಂಪು ಲೆಹೆಂಗಾದೊಂದಿಗೆ ಹೊಂದಿಸಬಹುದು. ವಿಭಿನ್ನ ದುಪಟ್ಟಾವನ್ನು ಸಹ ಧರಿಸಬಹುದು.

ಫ್ಲೋರಲ್ ಶೀರ್ ಪ್ರಿಂಟೆಡ್ ಬ್ರೈಡಲ್ ಲೆಹೆಂಗಾ

ಇತ್ತೀಚೆಗೆ ಪ್ರಿಂಟೆಂಡ್‌ ಕಸೂತಿ ಲೆಹೆಂಗಾಗಳು ಹೆಚ್ಚು ಜನಪ್ರಿಯವಾಗಿವೆ. ಗಾಢ ಬಣ್ಣಗಳಲ್ಲಿ ಈ ಲೆಹೆಂಗಾಗಳು ದೊರೆಯುವುದರಿಂದ ಹೆಚ್ಚಿನ ಹೆಣ್ಣುಮಕ್ಕಳು ಮದುವೆಯಲ್ಲಿ ಪ್ರಿಂಟೆಡ್‌ ಲೆಹೆಂಗಾಗಳನ್ನು ಆಯ್ಕೆ ಮಾಡುತ್ತಾರೆ. ಇದು ಅಂದವಾಗಿ ಕಾಣುವಂತೆಯೂ ಮಾಡುತ್ತದೆ.

ನೆಟ್‌ ಲೆಹೆಂಗಾ

ನೆಟ್ ಬ್ರೈಡಲ್ ಲೆಹೆಂಗಾ ಅತ್ಯಂತ ಬೇಡಿಕೆಯಲ್ಲಿರುವ ಲೆಹೆಂಗಾವಾಗಿದೆ. ನೆಟ್ ಫ್ಯಾಬ್ರಿಕ್ ತುಂಬಾ ಹಗುರವಾಗಿರುವುದರಿಂದ ನಿರ್ವಹಿಸಲು ಸುಲಭವಾಗಿರುತ್ತದೆ. ಕಸೂತಿಯಿಂದ ಕೂಡಿರುವ ಲೆಹೆಂಗಾಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಫೋಟೊಗಳಿಲ್ಲೂ ಗ್ಲಾಮರ್‌ ಆಗಿ ಕಾಣಬಹುದು.

ಟಿಶ್ಯೂ ಬ್ರೈಡಲ್ ಲೆಹೆಂಗಾ

ಟಿಶ್ಯೂ ಲೆಹೆಂಗಾಗಳು ಹಿಂದಿನ ಕಾಲವನ್ನು ನೆನಪಿಸುತ್ತವೆ. ಮೊಘಲರು, ರಜಪೂತರು, ರಾಜರು ಮತ್ತು ನವಾಬರ ಅವಧಿಯಲ್ಲಿ ಟಿಶ್ಯೂ ಲೆಹೆಂಗಾಗಳು ಹೆಚ್ಚು ಪ್ರಚಲಿತದಲ್ಲಿತ್ತು. ಈಗ ಅದೇ ಲೆಹೆಂಗಾಗಳು ಜನಪ್ರಿಯವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ಟಿಶ್ಯೂ ಲೆಹೆಂಗಾಗಳು ಅದರ ಸೊಬಗು, ಕಡಿಮೆ ತೂಕದ ಲಕ್ಷಣಗಳಿಂದಾಗಿ ಹೆಚ್ಚು ಹೆಣ್ಣುಮಕ್ಕಳಿಗೆ ಇಷ್ಟವಾಗುತ್ತಿವೆ.

ಕಸೂತಿಯ ಲೆಹೆಂಗಾ

ಲೆಹೆಂಗಾಗಳ ಮೇಲೆ ಜರ್ಡೋಜಿ, ಡಬ್ಕಾ ಮತ್ತು ಥ್ರೆಡ್‌ವರ್ಕ್‌ನಂತಹ ಕಸೂತಿ ಕೆಲಸ ಲೆಹೆಂಗಾದ ಅಂದವನ್ನು ಹೆಚ್ಚಿಸುತ್ತದೆ. ಹೀಗಾಗಿ ಮದುವೆ ಸಂದರ್ಭದಲ್ಲಿ ವಿಶೇಷವಾಗಿ ಕಾಣಲು ಕಸೂತಿ ಇರುವ ಲೆಹೆಂಗಾಗಳನ್ನು ಧರಿಸಬಹುದು.