Akshaya Tritiya | ಸಣ್ಣ ಉಳಿತಾಯ.. ಸುಭದ್ರ ಜೀವನ

Akshaya Tritiya | ಸಣ್ಣ ಉಳಿತಾಯ.. ಸುಭದ್ರ ಜೀವನ

Published on

ಪವಿತ್ರಾ ಭಟ್

ಆರು ಕಾಸಿದ್ದರೂ ಎರಡು ಕಾಸು ಉಳಿಸಿ ಸಂಸಾರ ಮಾಡುವ ಚಾಲಾಕುತನ ಹೆಣ್ಣುಮಕ್ಕಳದ್ದು. ಇದ್ದ ಹಣದಲ್ಲಿ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿ ಮೊದಲಿನಿಂದಲೂ ಹೆಣ್ಣಿನ ಹೆಗಲಿಗೆ ಇದೇ. ಸಾಸಿವೆ ಡಬ್ಬಿಯಿಂದಲೋ, ಟೀ ಪುಟಿ ಡಬ್ಬಿಯಿಂದಲೂ ತಿಂಗಳ ಖರ್ಚಿನಲ್ಲಿ ಅಷ್ಟೋ ಇಷ್ಟೋ ಉಳಿಸಿ ಬಚ್ಚಿಡುವುದು ರೂಢಿ. ಅದು ಕೆಲವೊಮ್ಮೆ ಆಪತ್‌ ಧನವೂ ಆಗಿ ನೆರವಾಗಿರುತ್ತದೆ. ಈಗ ಕಾಲ ಬದಲಾಗಿದೆ, ಹೆಣ್ಣುಮಕ್ಕಳೂ ತಮ್ಮ ಸ್ವಂತ ದುಡಿಮೆ ಮಾಡುತ್ತಾರೆ, ತಿಂಗಳಿನಲ್ಲಿ ಅಲ್ಲ ಸ್ವಲ್ಪ ಉಳಿಸಿ ಮನೆ, ಸಂಸಾರ ನಿಭಾಯಿಸುತ್ತಾರೆ. ಭವಿಷ್ಯಕ್ಕಾಗಿ ಕೂಡಿಡುತ್ತಾರೆ. ಕಾಲಕ್ಕೆ ತಕ್ಕಂತೆ ಹಣ ಉಳಿತಾಯದ ಹಾದಿ ಕೂಡ ಕೊಂಚ ಭಿನ್ನವಾಗಿದೆ. ಬ್ಯಾಂಕುಗಳಲ್ಲಿ ಡಿಪಾಸಿಟ್‌, ಚೀಟಿ ಕಟ್ಟುವುದು, ಚಿನ್ನ, ಆಸ್ತಿ ಖರೀದಿಸುವುದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೀಗೆ ಉಳಿತಾಯದ ಹಾದಿ ಬೃಹದಾಕಾರವಾಗಿದೆ. ಇವೆಲ್ಲವನ್ನು ಹೊರತುಪಡಿಸಿ ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿ ಉಳಿತಾಯ ಮಾಡಿ ಒಂದು ದೊಡ್ಡ ಮೊತ್ತ ಪಡೆಯುವ ಕೆಲವು ಯೋಜನೆಗಳಿವೆ. ಅವುಗಳ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ ಕಾವ್ಯಾ ಡಿ. ಅವರು ಮಾಹಿತಿ ಹಂಚಿಕೊಂಡಿದ್ದಾರೆ.

1. ರೆಕರಿಂಗ್ ಡೆಪಾಸಿಟ್

*ಬಡ್ಡಿ ದರ: ಶೇ 6.70 (ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ)

*ಕನಿಷ್ಠ ಹೂಡಿಕೆ ಮೊತ್ತ: ₹ 100

*ಗರಿಷ್ಠ ಹೂಡಿಕೆ ಮೊತ್ತ: ಮಿತಿ ಇಲ್ಲ

*ಹೂಡಿಕೆ ಅವಧಿ: 5 ವರ್ಷ

*ಹೂಡಿಕೆ ಎಲ್ಲಿ ಆರಂಭಿಸಬಹುದು: ಅಂಚೆ ಕಚೇರಿ

*ಹೂಡಿಕೆ ರಿಸ್ಕ್: ರಿಸ್ಕ್ ಇಲ್ಲ

*ತೆರಿಗೆ ಅನುಕೂಲ: ಆದಾಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ
ತೆರಿಗೆ ಕಟ್ಟಬೇಕಾಗುತ್ತದೆ.

Akshaya Tritiya | ಸಣ್ಣ ಉಳಿತಾಯ.. ಸುಭದ್ರ ಜೀವನ
Akshaya Tritiya: ಅಕ್ಷಯವಾಗಲೆಂದು ಅಕ್ಕಿ ತುಂಬಿಸುವ ಸಂಪ್ರದಾಯ

2. ಸುಕನ್ಯಾ ಸಮೃದ್ಧಿ ಯೋಜನೆ

*ಬಡ್ಡಿ ದರ: ಶೇ 8.20 (ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ)

*ಕನಿಷ್ಠ ಹೂಡಿಕೆ ಮೊತ್ತ ( ವರ್ಷಕ್ಕೆ): ₹ 250

*ಗರಿಷ್ಠ ಹೂಡಿಕೆ ಮೊತ್ತ( ವರ್ಷಕ್ಕೆ): ₹ 1.5 ಲಕ್ಷ

*ಯಾರಿಗೆ ಈ ಹೂಡಿಕೆ ಅನ್ವಯ : 10 ವರ್ಷದ ಒಳಗಿನ ಹೆಣ್ಣು ಮಗುವಿನ ಹೆಸರಲ್ಲಿ ಮಾತ್ರ ಖಾತೆ ಆರಂಭಿಸಬಹುದು

*ಹೂಡಿಕೆ ಅವಧಿ: 15 ವರ್ಷಗಳು

*ಹೂಡಿಕೆ ಎಲ್ಲಿ ಆರಂಭಿಸಬಹುದು: ಅಂಚೆ ಕಚೇರಿ, ಆಯ್ದ ಬ್ಯಾಂಕ್‌ಗಳು

*ಹೂಡಿಕೆ ರಿಸ್ಕ್: ರಿಸ್ಕ್ ಇಲ್ಲ

*ನಗದೀಕರಣ: ಹೆಣ್ಣು ಮಗುವಿಗೆ 21 ತುಂಬಿದ
ಮೇಲೆ ಹಣ ಪಡೆಯಬಹುದು.

*ತೆರಿಗೆ ಅನುಕೂಲ: ಆದಾಯ ತೆರಿಗೆ ಸೆಕ್ಷನ್ 80 ಸಿ ತೆರಿಗೆ ವಿನಾಯಿತಿ ಅನುಕೂಲ ಲಭ್ಯ. ಇದು ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಇರುವ ಉಳಿತಾಯದ ಯೋಜನೆಯಾಗಿದೆ.

3. ಇಕ್ವಿಟಿ ಮ್ಯೂಚುವಲ್ ಫಂಡ್

*ಬಡ್ಡಿ ದರ ನಿರೀಕ್ಷೆ: ಶೇ 12ರಷ್ಟು

*ಕನಿಷ್ಠ ಹೂಡಿಕೆ ಮೊತ್ತ: ₹ 500

*ಗರಿಷ್ಠ ಹೂಡಿಕೆ ಮೊತ್ತ: ಮಿತಿ ಇಲ್ಲ

*ಯಾರಿಗೆ ಈ ಹೂಡಿಕೆ ಅನ್ವಯ: ಷೇರು ಮಾರುಕಟ್ಟೆಯಲ್ಲಿ ಪರೋಕ್ಷವಾಗಿ ಹೂಡಿಕೆ ಮಾಡಬೇಕು ಎನ್ನುವವರಿಗೆ

*ಹೂಡಿಕೆಗೆ ಪರಿಗಣಿಸಬೇಕಿರುವ ಕನಿಷ್ಠ ಅವಧಿ: 5 ವರ್ಷಗಳು

*ಹೂಡಿಕೆ ಎಲ್ಲಿ ಆರಂಭಿಸಬಹುದು: ಸೆಬಿ ನೋಂದಾಯಿತ ಮ್ಯೂಚುವಲ್ ಫಂಡ್ ಆಪ್ ಗಳು , ವಿತರಕರು, ಬ್ಯಾಂಕ್.

*ಹೂಡಿಕೆ ರಿಸ್ಕ್: ಷೇರು ಮಾರುಕಟ್ಟೆಯಲ್ಲಿ ಉಂಟಾಗುವ ಏರಿಳಿತದ ರಿಸ್ಕ್ ಇರುತ್ತದೆ

*ತೆರಿಗೆ ಅನುಕೂಲ: ಹೂಡಿಕೆ ಮಾಡಿದ 1 ವರ್ಷದ ನಂತರ ಗಳಿಕೆ ಮೊತ್ತ ₹ 1.25 ಲಕ್ಷದೊಳಗಿದ್ದರೆ ತೆರಿಗೆ ಇಲ್ಲ. ಇಲ್ಲದಿದ್ದರೆ ಎಸ್ ಟಿಸಿಜಿ ಅಥವಾ ಎಲ್ ಟಿಸಿಜಿ ತೆರಿಗೆ ಅನ್ವಯಿಸುತ್ತದೆ.

Akshaya Tritiya | ಸಣ್ಣ ಉಳಿತಾಯ.. ಸುಭದ್ರ ಜೀವನ
Akshaya Tritiya: ಅಕ್ಷಯ ತದಿಗೆಗೆ ರುಚಿರುಚಿ ಪಾಯಸ

4. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)

*ಪ್ರಸ್ತುತ ಬಡ್ಡಿ ದರ: ಶೇ 7.10 (ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ)

*ಕನಿಷ್ಠ ಹೂಡಿಕೆ ಮೊತ್ತ (1 ವರ್ಷಕ್ಕೆ) : ₹ 500

*ಗರಿಷ್ಠ ಹೂಡಿಕೆ ಮೊತ್ತ (1 ವರ್ಷಕ್ಕೆ): ₹ 1.5 ಲಕ್ಷ

*ಹೂಡಿಕೆ ಅವಧಿ: 15 ವರ್ಷಗಳು

*ಹೂಡಿಕೆ ಎಲ್ಲಿ ಆರಂಭಿಸಬಹುದು: ಅಂಚೆ ಕಚೇರಿ, ಆಯ್ದ ಪ್ರಮುಖ ಬ್ಯಾಂಕ್‌ಗಳು

*ಹೂಡಿಕೆ ರಿಸ್ಕ್: ರಿಸ್ಕ್ ಇಲ್ಲ

*ತೆರಿಗೆ ಅನುಕೂಲ: ಸೆಕ್ಷನ್ 80 ಸಿ ಅಡಿ ವಿನಾಯಿತಿ, ಹೂಡಿಕೆ ಮೇಲಿನ ಬಡ್ಡಿ ಗಳಿಕೆ ಮತ್ತು ನಗದೀಕರಣದ ವೇಳೆ ತೆರಿಗೆ ಕಟ್ಟಬೇಕಿಲ್ಲ.

5. ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್ ಸಿ)

*ಪ್ರಸ್ತುತ ಬಡ್ಡಿ ದರ: ಶೇ 7.70 (ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ)

*ಕನಿಷ್ಠ ಹೂಡಿಕೆ ಮೊತ್ತ: ₹ 1000

*ಗರಿಷ್ಠ ಹೂಡಿಕೆ ಮೊತ್ತ: ಮಿತಿ ಇಲ್ಲ

*ಹೂಡಿಕೆ ಅವಧಿ: 5 ವರ್ಷ

*ಹೂಡಿಕೆ ಎಲ್ಲಿ ಆರಂಭಿಸಬಹುದು: ಅಂಚೆ ಕಚೇರಿ

*ಹೂಡಿಕೆ ರಿಸ್ಕ್ : ರಿಸ್ಕ್ ಇಲ್ಲ

*ತೆರಿಗೆ ಅನುಕೂಲ: ಟಿಡಿಎಸ್ ಕಡಿತವಾಗುವುದಿಲ್ಲ, ಸೆಕ್ಷನ್ 80 ಸಿ. ಅಡಿ ತೆರಿಗೆ ವಿನಾಯಿತಿ

6. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪೋಸ್ಟ್ ಆಫೀಸ್ ಮಂತ್ಲಿ ಇನ್ ಕಂ ಸ್ಕೀಂ)

*ಪ್ರಸ್ತುತ ಬಡ್ಡಿ ದರ: ಶೇ 7.40 (ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ)
ಕನಿಷ್ಠ ಹೂಡಿಕೆ ಮೊತ್ತ: ₹ 1000

*ಗರಿಷ್ಠ ಹೂಡಿಕೆ ಮೊತ್ತ: ಒಬ್ಬರೇ ಹೂಡಿದರೆ ಮಿತಿ 9 ಲಕ್ಷ, ಜಂಟಿ ಹೂಡಿಕೆಗೆ ಮಿತಿ 15 ಲಕ್ಷ

*ಹೂಡಿಕೆ ಅವಧಿ: 5 ವರ್ಷ (ಪ್ರತಿ ತಿಂಗಳು ಬಡ್ಡಿ ಆದಾಯ ಸಿಗುತ್ತದೆ)

*ಹೂಡಿಕೆ ಎಲ್ಲಿ ಆರಂಭಿಸಬಹುದು: ಅಂಚೆ ಕಚೇರಿ

*ಹೂಡಿಕೆ ರಿಸ್ಕ್: ರಿಸ್ಕ್ ಇಲ್ಲ

*ತೆರಿಗೆ ಅನುಕೂಲ: ಆದಾಯ ತೆರಿಗೆ ಸ್ಲ್ಯಾಬ್ ಗೆ ಅನುಗುಣವಾಗಿ ತೆರಿಗೆ ಕಟ್ಟಬೇಕಾಗುತ್ತದೆ.

7. ಅಂಚೆ ಕಚೇರಿ ಅವಧಿ ಠೇವಣಿ ( ಟೈಂ ಡೆಪಾಸಿಟ್)

*ಬಡ್ಡಿ ದರ: ಶೇ 6.9 ರಿಂದ ಶೇ 7.50 (ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ)

*ಕನಿಷ್ಠ ಹೂಡಿಕೆ ಮೊತ್ತ: ₹ 1000

*ಗರಿಷ್ಠ ಹೂಡಿಕೆ ಮೊತ್ತ: ಮಿತಿ ಇಲ್ಲ

*ಹೂಡಿಕೆ ಅವಧಿ: 1 ವರ್ಷ, 2 ವರ್ಷ , 3 ವರ್ಷ , 5 ವರ್ಷ

*ಹೂಡಿಕೆ ಎಲ್ಲಿ ಆರಂಭಿಸಬಹುದು: ಅಂಚೆ ಕಚೇರಿ

*ಹೂಡಿಕೆ ರಿಸ್ಕ್: ರಿಸ್ಕ್ ಇಲ್ಲ

*ತೆರಿಗೆ ಅನುಕೂಲ: 5 ವರ್ಷದ ಅವಧಿ ಠೇವಣಿಗೆ ಮಾತ್ರ ಆದಾಯ ತೆರಿಗೆ ಸೆಕ್ಷನ್ 80 ಸಿ ಅನುಕೂಲ ಲಭ್ಯ

8. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)

*ಬಡ್ಡಿ ದರ: ಶೇ 8.20

*ಕನಿಷ್ಠ ಹೂಡಿಕೆ ಮೊತ್ತ: ₹ 1000

*ಗರಿಷ್ಠ ಹೂಡಿಕೆ ಮೊತ್ತ: ₹ 30 ಲಕ್ಷ

*ಯಾರಿಗೆ ಈ ಹೂಡಿಕೆ ಅನ್ವಯ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ

*ಹೂಡಿಕೆ ಅವಧಿ: 5 ವರ್ಷಗಳು

*ಹೂಡಿಕೆ ಎಲ್ಲಿ ಆರಂಭಿಸಬಹುದು: ಅಂಚೆ ಕಚೇರಿ, ಆಯ್ದ ಬ್ಯಾಂಕ್ ಗಳು

*ಹೂಡಿಕೆ ರಿಸ್ಕ್: ರಿಸ್ಕ್ ಇಲ್ಲ

*ತೆರಿಗೆ ಅನುಕೂಲ: ಆದಾಯ ತೆರಿಗೆ ಸೆಕ್ಷನ್ 80 ಸಿ ತೆರಿಗೆ ವಿನಾಯಿತಿ ಅನುಕೂಲ ಲಭ್ಯ.

(ಮಾಹಿತಿ ಆಧಾರ: ಅಂಚೆ ಕಚೇರಿ ಮತ್ತು ವಿವಿಧ ಬ್ಯಾಂಕ್‌ಗಳ ವೆಬ್‌ಸೈಟ್‌)

Advertisement
Festivals in Karnataka – A Prajavani Special Feature | ಕರ್ನಾಟಕದ ಹಬ್ಬಗಳು – ಪ್ರಜಾವಾಣಿಯ ವಿಶೇಷ ವೈಶಿಷ್ಟ್ಯ | Karnatakada Habbagalu – Prajavaniya Vishesha Vaishishtya
www.prajavani.net