ವಿಡಿಯೊಗಳು
ಜಿಲ್ಲಾ ಸುದ್ದಿ
ಭವಿಷ್ಯ
ಮೇಷ ಗೃಹ ನವೀಕರಣದಂತಹ ಕೆಲಸಗಳು ಪ್ರಾರಂಭವಾಗುವವು. ಮಠಾಧೀಶರ ದರ್ಶನ ಮಾಡುವ ಸಾಧ್ಯತೆ. ಅನಾಥಾಲಯ ಅಥವಾ ಅನಾಥರಿಗೆ ದಾನ ಮಾಡುವುದರಿಂದ ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ.
ವೃಷಭ ವೈಯಕ್ತಿಕ ವಿಚಾರಗಳತ್ತ ಲಕ್ಷ್ಯ ಕೊಡಬೇಕಾಗುವುದು. ಹೊಸ ಕೆಲಸ ಅಥವಾ ಉದ್ಯಮ ಪ್ರಾರಂಭಿಸುವ ಬಗ್ಗೆ ಮಾತುಕತೆ ನಡೆಸುವಿರಿ. ಮಾತಿನಲ್ಲಿನ ಹಿಡಿತದಿಂದಾಗಿ ಉತ್ತಮ ಫಲ. ಆರೋಗ್ಯದೊಂದಿಗೆ ನೆಮ್ಮದಿ ನೆಲೆಸಲಿದೆ.
ಕಟಕ ವಿಷಯಾಧಾರಿತ ಚರ್ಚೆಗಳಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸುವ ಸಾಧ್ಯತೆಗಳು ಕಂಡುಬರುವುದು. ಅಪರೂಪದ ವಸ್ತುಗಳು ಕೈ ಸೇರುವ ಸಂಭವ. ಸಂಸಾರ ಸಮೇತ ದೂರದ ಪ್ರಯಾಣದಿಂದಾಗಿ ನೆಮ್ಮದಿ.
ಸಿಂಹ ವಕೀಲ ವೃತ್ತಿಯಲ್ಲಿರುವವರಿಗೆ ಸರ್ಕಾರಿ ಹುದ್ದೆ ಅಲಂಕರಿಸುವ ಅವಕಾಶ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಆಕಸ್ಮಿಕ ಧನ ಲಾಭ. ವಿವಾಹ ಸಂಬಂಧದ ಮಾತುಕತೆಗಳು ಮುಂದುವರಿದು ಯಶ ಕಾಣಲಿದೆ.
ತುಲಾ ವ್ಯವಹಾರಗಳು ಸುಗಮವಾಗಿ ನೆರವೇರುವವು. ಬರಬೇಕಾಗಿರುವ ಹಣ ನಿಮ್ಮ ಕೈ ಸೇರುವುದರಲ್ಲಿ ಅನುಮಾನವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ವಿಷಯದಲ್ಲಿ ಹಸಿರು ನಿಶಾನೆ ದೊರಕಲಿದೆ.
ವೃಶ್ಚಿಕ ನ್ಯಾಯಾಲಯದಲ್ಲಿನ ತಗಾದೆಗಳು ನಿಮ್ಮ ಪರವಾಗಿ ಇತ್ಯರ್ಥವಾಗುವುದರಿಂದ ಮಾನಸಿಕ ನೆಮ್ಮದಿ. ದುಂದು ವೆಚ್ಚದಿಂದಾಗಿ ಮಾನಸಿಕ ಕಿರಿಕಿರಿ. ಆರ್ಥಿಕ ವ್ಯವಹಾರದಲ್ಲಿನ ಉನ್ನತಿಗಾಗಿ ಗಣೇಶ ಪ್ರಾರ್ಥನೆ ಮಾಡಿ.
ಮಕರ ರಾಜಕಾರಣಿಯೊಬ್ಬರ ಪ್ರಭಾವದಿಂದಾಗಿ ಅನುಚಿತ ಕಾರ್ಯ ಕೈಗೊಳ್ಳುವ ಸಾಧ್ಯತೆ. ಆಡಳಿತಾಧಿಕಾರಿಗಳಾಗಿ ನೇಮಕ ಹೊಂದಿದವರಿಗೆ ವರ್ಗಾವಣೆ ಸಾಧ್ಯತೆ. ಹಣದ ವಾಪಾಸಾತಿಗಾಗಿ ಕಷ್ಟಪಡಬೇಕಾದೀತು.
ಕುಂಭ ವಾಹನ ದುರಸ್ತಿಗಾಗಿ ಹಣ ವಿನಿಯೋಗಿಸಬೇಕಾದೀತು. ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳಲ್ಲಿ ದುಡಿಯುವವರಿಗೆ ಪದೋನ್ನತಿ. ಗೆಳೆಯರೊಂದಿಗೆ ವಿನೋದದ ಹವ್ಯಾಸದಲ್ಲಿ ತೊಡಗುವಿರಿ.
ಪ್ರಜಾವಾಣಿ ಪಿಕ್ಸ್