ಲಂಡನ್: ಈ ಕಾಲದಲ್ಲಿಯೂ ರಾಜಮನೆತನಕ್ಕೆ ಉನ್ನತ ಗೌರವ ಕೊಡುವ ನೆಲ ಇದು. ಇಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರ ಕಲಾತ್ಮಕ ಆಟವು ರಾಜ ಮತ್ತು ರಾಣಿಯರ ಕಿರೀಟದಲ್ಲಿರುವ ಅಮೂಲ್ಯ ವಜ್ರದಂತೆ ಹೊಳೆಯಿತು.

ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಆತಿಥೇಯ ಇಂಗ್ಲೆಂಡ್ ಬೌಲರ್ಗಳ ಛಲದ ಆಟದ ಮುಂದೆ ರಾಹುಲ್ ಶತಕ ಗಳಿಸಿದರು. 33 ವರ್ಷದ ರಾಹುಲ್ ಅವರಿಗೆ ಈ ಸರಣಿಯಲ್ಲಿ ಇದು ಎರಡನೇ ಶತಕ. ಲೀಡ್ಸ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಮೂರಂಕಿ ಮೊತ್ತ ಗಳಿಸಿದ್ದರು. ಲಾರ್ಡ್ಸ್ನಲ್ಲಿ ಅವರು 177 ಎಸೆತಗಳಲ್ಲಿ 100 ರನ್ ಗಳಿಸಿದರು. ಈ ಐತಿಹಾಸಿಕ ಕ್ರೀಡಾಂಗಣದ ‘ಗೌರವ ಫಲಕ’ದ ಮೇಲೆ ಎರಡನೇ ಬಾರಿ ರಾಹುಲ್ ಹೆಸರು ಅಚ್ಚಾಯಿತು.

ಪರಿವರ್ತನೆ ಘಟ್ಟದಲ್ಲಿರುವ ಭಾರತ ತಂಡದಲ್ಲಿ ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಅನುಭವಿ, ಪರಿಣತ ಬ್ಯಾಟರ್ ಆಗಿರುವ ರಾಹುಲ್ ಈ ಕ್ರೀಡಾಂಗಣದಲ್ಲಿ ಎರಡು ಶತಕ ಹೊಡೆದ ಭಾರತದ ಎರಡನೇ ಆಟಗಾರನಾದರು. ದಿಲೀಪ್ ವೆಂಗಸರ್ಕಾರ್ ಅವರು ಮೂರು ಸಲ ಇಲ್ಲಿ ಶತಕ ಹೊಡೆದಿದ್ದಾರೆ. ಬಿರುಬೇಸಿಗೆಯ ಕಾವಿನಲ್ಲಿ ರಾಹುಲ್ ತಾಳ್ಮೆಯ ಆಟ ಗಮನ ಸೆಳೆಯಿತು. ಅವರ ಮುಖದ ಮೇಲೆ ಒಂದಿನಿತೂ ದಣಿವಿನ ಛಾಯೆ ಸುಳಿಯಲಿಲ್ಲ. ಅವರೊಂದಿಗೆ ಉಪನಾಯಕ ರಿಷಭ್ ಪಂತ್ (74) ಮತ್ತು ರವೀಂದ್ರ ಜಡೇಜ (72) ಉಪಯುಕ್ತ ಕಾಣಿಕೆ ನೀಡಿದರು. ಹೀಗಾಗಿ, ಭಾರತ ತಂಡವು ಇಂಗ್ಲೆಂಡ್ ಗಳಿಸಿದಷ್ಟೇ (387) ರನ್ ಗಳಿಸಲು ಸಾಧ್ಯವಾಯಿತು. ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿದೆ.

ಆತಿಥೇಯ ಇಂಗ್ಲೆಂಡ್ ತಂಡವು ಶುಕ್ರವಾರ 387 ರನ್ಗಳಿಗೆ ಆಲೌಟ್ ಆಗಿತ್ತು. ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು 3 ವಿಕೆಟ್ಗಳಿಗೆ 145 ರನ್ ಗಳಿಸಿತ್ತು. ರಾಹುಲ್ ಮತ್ತು ಉಪನಾಯಕ ರಿಷಭ್ ಪಂತ್ ಕ್ರೀಸ್ನಲ್ಲಿದ್ದರು. ಮೂರನೇ ದಿನದಾಟದಲ್ಲಿ ಜೋಫ್ರಾ ಆರ್ಚರ್ ಹಾಕಿದ ಮೊದಲ ಓವರ್ನ ಎರಡನೇ ಎಸೆತವನ್ನು ಬೌಂಡರಿಗೆರೆ ದಾಟಿಸಿದ ರಿಷಭ್ ಅವರು ಆಕ್ರಮಣಕಾರಿಯಾಗುವ ಸಂದೇಶ ರವಾನಿಸಿದರು. ಆದರೆ ಇದರಿಂದ ಎಚ್ಚೆತ್ತುಕೊಂಡ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಸಂಯೋಜನೆಯಲ್ಲಿ ಕೆಲವು ಅಸಾಂಪ್ರದಾಯಿಕ ಪ್ರಯತ್ನಗಳನ್ನು ಮಾಡಿದರು. ಜಡತ್ವದಿಂದ ಕೂಡಿದ್ದ ಪಿಚ್ನಲ್ಲಿ ಅನಿರೀಕ್ಷಿತ ಪುಟಿತ ಮತ್ತು ವೇಗದ ಎಸೆತಗಳನ್ನು ಎದುರಿಸಲು ರಾಹುಲ್ ಮತ್ತು ಪಂತ್ ಇಬ್ಬರೂ ಅಪಾರ ಎಚ್ಚರಿಕೆ ವಹಿಸಬೇಕಾಯಿತು.

ರಾಹುಲ್ ಅವರು ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರು. ಆಫ್ಸ್ಟಂಪ್ ಮೇಲಿನ ದಾಳಿಯನ್ನೂ ಅವರು ಚಾಣಾಕ್ಷತೆಯಿಂದ ನಿರ್ವಹಿಸಿದರು. ತಪಸ್ವಿಯಂತೆ ಶಾಂತ ಮತ್ತು ಏಕಾಗ್ರಚಿತ್ತದೊಂದಿಗೆ ಬ್ಯಾಟಿಂಗ್ ಮಾಡಿದರು. ಒಂದಿಷ್ಟು ಹೊತ್ತಿನ ನಂತರ ಆಟದ ವೇಗ ಹೆಚ್ಚಿಸುವ ನಿರ್ಧಾರ ಮಾಡಿದರು. ಈ ಹಂತದಲ್ಲಿ ಕೆಲವು ಹೊಡೆತಗಳು ದಿಕ್ಕು ತಪ್ಪಿದವು ಆದರೆ ಸುರಕ್ಷಿತವಾಗಿ ಉಳಿದರು. ನೇರ ಡ್ರೈವ್, ಪುಲ್ ಮತ್ತು ಕವರ್ ಡ್ರೈವ್ಗಳ ಆಕರ್ಷಕ ಆಟ ಅವರಿಂದ ಹೊರಹೊಮ್ಮಿತು.

ಇನ್ನೊಂದು ಬದಿಯಲ್ಲಿ ಪಂತ್ ಎಂದಿನಂತೆ ತಮ್ಮ ನೈಜ ಶೈಲಿ ಆಟದಲ್ಲಿ ಮಗ್ನರಾಗಿದ್ದರು. ಕ್ರೀಸ್ನಲ್ಲಿ ಎದ್ದು, ಬಿದ್ದು, ಹೊರಳಾಡಿ ಹೊಡೆತಗಳನ್ನು ಪ್ರಯೋಗಿಸುವ ಧೈರ್ಯವನ್ನು ಇಲ್ಲಿಯೂ ಪ್ರದರ್ಶಿಸಿದರು. ಬೌನ್ಸರ್ ಒಂದನ್ನು ಸಿಕ್ಸರ್ಗೆ ಎತ್ತಿ ಅರ್ಧಶತಕದ ಗಡಿ ದಾಟಿದರು. ಆದರೆ ಊಟದ ವಿರಾಮಕ್ಕೆ ಮುನ್ನ ಒಂದು ಓವರ್ ಬಾಕಿಯಿದ್ದಾಗ ಪಂತ್ ರನೌಟ್ ಆದರು. ಸ್ಟೋಕ್ಸ್ ನಿಖರ ಥ್ರೋಗೆ ಅವರ ವಿಕೆಟ್ ಪತನವಾಯಿತು. 141 ರನ್ಗಳ ನಾಲ್ಕನೇ ವಿಕೆಟ್ ಜೊತೆಯಾಟ ಮುರಿಯಿತು.

ವಿರಾಮದ ನಂತರ ರಾಹುಲ್ ಶಕತ ಪೂರೈಸಿದರು. ಇದಾಗಿ ಕೆಲವು ನಿಮಿಷಗಳ ನಂತರ ಶೋಯಬ್ ಬಶೀರ್ ಎಸೆತವನ್ನು ತುಸು ‘ಆಲಸ್ಯ’ದಿಂದ ಆಡಿದ ರಾಹುಲ್ ಸ್ಲಿಪ್ನಲ್ಲಿದ್ದ ಹ್ಯಾರಿ ಬ್ರೂಕ್ಗೆ ಕ್ಯಾಚಿತ್ತರು. ಈ ಹಂತದಲ್ಲಿ ಮತ್ತೆ ಜೋಫ್ರಾರನ್ನು ಸ್ಟೋಕ್ಸ್ ಅವರು ಬೌಲಿಂಗ್ಗೆ ಇಳಿಸಿದರು. ರವೀಂದ್ರ ಜಡೇಜ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆರ್ಚರ್ ಕಾಡಿದರು. ಆದರೂ ಅವರಿಬ್ಬರು ಆರನೇ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು. ನಂತರದಲ್ಲಿ ಜಡೇಜ ಅವರನ್ನು ಸೇರಿಕೊಂಡ ವಾಷಿಂಗ್ಟನ್ ಸುಂದರ್ (23) ಏಳನೇ ವಿಕೆಟ್ಗೆ 50 ರನ್ ಜೊತೆಯಾಟದಲ್ಲಿ ಭಾಗಿಯಾದರು. ಕೊನೆಯ ನಾಲ್ಕು ವಿಕೆಟ್ಗಳು 11 ರನ್ ಅಂತರದಲ್ಲಿ ಉರುಳಿದವು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 112.3 ಓವರ್ಗಳಲ್ಲಿ 387. ಭಾರತ: 91 ಓವರ್ಗಳಲ್ಲಿ 5ಕ್ಕೆ316 (ಕೆ.ಎಲ್ ರಾಹುಲ್ 100, ರಿಷಭ್ ಪಂತ್ 74, ರವೀಂದ್ರ ಜಡೇಜ 72, ನಿತೀಶಕುಮಾರ್ ರೆಡ್ಡಿ 30, ವಾಷಿಂಗ್ಟನ್ ಸುಂದರ್ 23; ಕ್ರಿಸ್ ವೋಕ್ಸ್ 84ಕ್ಕೆ 3, ಜೋಫ್ರಾ ಆರ್ಚರ್ 52ಕ್ಕೆ 2, ಬೆನ್ ಸ್ಟೋಕ್ಸ್ 63ಕ್ಕೆ 2). ಎರಡನೇ ಇನಿಂಗ್ಸ್: ಇಂಗ್ಲೆಂಡ್ 1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 2 ರನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.