ಶಿವಮೊಗ್ಗದ ಶ್ರೀಗಂಧ ಕೋಠಿಯಲ್ಲಿ ದಾಸ್ತಾನು ಮಾಡಿರುವ ಶ್ರೀಗಂಧದ ಕೊರಡುಗಳು
ಪ್ರೊ.ಮಾದೇವ ಭರಣಿ ಅವರ ಚಾಮರಾಜನಗರದ ಗುಂಡ್ಲುಪೇಟೆಯ ಅಂಚಿನಲ್ಲಿರುವ ತೋಟದಲ್ಲಿ ಕೆಲ ದಿನದ ಹಿಂದೆ ಕಳ್ಳರು ಶ್ರೀಗಂಧದ ಮರವನ್ನು ಕತ್ತರಿಸಿರುವುದು
ಶ್ರೀಗಂಧದ ಮರ ಬೆಳೆಯುತ್ತಾ ಹೋದಂತೆ ಚೇಗಿನ / ಕೊರಡಿನ (ಹಾರ್ಟ್‌ವುಡ್) ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಸಣ್ಣ ವಯಸ್ಸಿನ ಮರಗಳಲ್ಲಿ ಕೊರಡಿನ ಪ್ರಮಾಣ ಕಡಿಮೆ ಇರುತ್ತದೆ ಮತ್ತು ತೊಗಟೆ ಮತ್ತು ಕೊರಡಿನ ಮಧ್ಯದ ಬಿಳಿಯ ಮರದ ಭಾಗ (ಸ್ಯಾಪ್‌ವುಡ್) ಹೆಚ್ಚು ಇರುತ್ತದೆ. ಮಾರುಕಟ್ಟೆಯಲ್ಲಿ ಸ್ಯಾಪ್‌ವುಡ್ ಬೆಲೆ ಕಡಿಮೆ. ಇಂಥ ಕಡಿಮೆ ವಯಸ್ಸಿನ ಮರಗಳನ್ನು ಕಟಾವು ಮಾಡಿ ಮಾರಿದಾಗ ಹೆಚ್ಚಿನ ಆದಾಯ ದೊರೆಯುವುದಿಲ್ಲ. ಹಾಗಾಗಿ ಗಂಧದ ಗಿಡ ನೆಟ್ಟು 15 ರಿಂದ 20 ವರ್ಷಗಳ ನಂತರವೇ ಕಟಾವು ಮಾಡಿ ಮಾರಬೇಕು.
– ಡಾ. ಎ.ಎನ್. ಅರುಣ್ ಕುಮಾರ್, ಹಿರಿಯ ವಿಜ್ಞಾನಿ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು
ಐದಾರು ವರ್ಷಗಳ ಶ್ರೀಗಂಧದ ಮರ
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಬೇರು ಸಹಿತ ಶ್ರೀಗಂಧದ ಮರ ಕಳವಿಗೆ ಯತ್ನಿಸಿರುವುದು
ಶ್ರೀಗಂಧದ ಮರ ರಕ್ಷಣೆಗೆ ತಂತಿ ಬೇಲಿ ಹಾಕಿರುವುದು ಬಿದಿರು ಮೆಳೆ ಬೆಳೆಸಿರುವುದು