‘ಕೋಗಿಲು ಕಾಡಿದೆ ಕೇಳಿದೆಯಾ, ಹೊಸ ಫ್ಲಾಟನು ಕೇಳಿದೆ ನೋಡಿದೆಯಾ?’ ತಿಪ್ಪಣ್ಣ ಹಾಡಿಕ್ಯಂದು ನನ್ನ ಮೂತಿಗೆ ತಿವೀತಿದ್ದ.

‘ಸುಮ್ಮಗಿರ್ಲಾ ಅಣ್ತಮ್ಮ. ಯಾವುದನ್ನ ದೊಂಬಿ ಯಾಟದ ಹಾಡು ಹೇಳದು ಬುಟ್ಟು ಇದೇನಿದು’ ಅಂತಂದೆ.

‘ಕಂಗ್ರಾಜುಲೇಸನ್ ಡಾನು, ಇದೇ ನೋಡು ನನ್ನ ಪ್ಲಾನು. ಬ್ಯಾನರು ಬಳ್ಳಾರಿ ಬ್ಯಾನರು ಬಳ್ಳಾರಿ’ ಅಂತ ಹಾಡಿಕ್ಯಂದು ಮಗ್ಗುಲಗೆ ಕೂಕಂದ.

‘ಜಮೀರಣ್ಣ ಏನೋ ಮಾಡ್ತೀನಿ ಅಂತ ಕಡೆದೋಗಿದ್ನಲ್ಲಾ ಏನಾತ್ರೋ?’ ಯಂಟಪ್ಪಣ್ಣ ವಿಚಾರಿಸಿತು.

‘ಜಮೀರಣ್ಣ ಸ್ಯಾನೆ ದಿಲ್ದಾರ್ ಕನಣೈ. ಕೋಗಿಲುಗಳಿಗೂ ಗೂಡು ಮಾಡಿಕೊಡ್ತೀವಿ ಅಂದದೆ. ಬಳ್ಳಾರಿ ಉಸ್ತುವಾರಿ ಜಮೀರಣ್ಣನೇ ಅಲ್ಲುವೇ? ದೊಂಬೀಲಿ ಜೀವ ಬುಟ್ಟ ಪಾಪದ ಕಾರ್ಯಕರ್ತನಿಗೆ ಇಸ್ಲಾಂ ಬೋರ್ಡಿಂದ ಮನೆ ಕಟ್ಟಿಸಿಕೊಡ್ತೀನಿ ಅಂದವ್ನೆ’ ತಿಪ್ಪಣ್ಣ ಸುದ್ದಿ ಕೊಟ್ಟ.

‘ತಿಪ್ಪಣ್ಣ ವಸಿ ಸುಮ್ಮಗಿರು. ನೀನು ಯಾವ್ಯಾವುದನ್ನೋ ಎಲ್ಲೆಲ್ಲಿಗೋ ಸಿಗೇ ಹಾಕಬ್ಯಾಡ. ಅದು ಇಸ್ಲಾಂ ಬೋರ್ಡಲ್ಲ. ಸ್ಲಂ ಬೋರ್ಡು’ ತುರೇಮಣೆ ತಿದ್ದಿದರು.

‘ಏನೋ ಆಗದು ಅಗೋತು. ಈಗ ದಿಟವಾದ ಕೋಗಿಲೆಗಳು ಯಾರು? ಬಳ್ಳಾರೀಲಿ ಸತ್ತೋನಿಗೆ ಗುಂಡಾಕಿದ್ದು ಯಾರು? ಯಾರಿಗೆ ಯಾರು ಗುರಿ ಇಟ್ಟವರೆ ಅಂತ ತಿಳಕಣದು ಹ್ಯಂಗೆ?’ ನನ್ನ ಪ್ರಶ್ನೆ ಮುಂದಿಟ್ಟೆ.

‘ದುಡ್ಡಸ್ತರು ಏನೇನೋ ಹುನ್ನಾರು ಮಾಡಿಕ್ಯತ್ತರೆ ನಮಗ್ಯಾಕೆ ಬುಡ್ಲಾ. ಐನಾತಿ ಪಾರಿನ್ ಕುಳಗಳು ಬೆಂಗಳೂರಿಗೆ ಬಂದು ಪೆಡ್ಲು ಹೊಡಕಂದು ಡ್ರಗ್ ಹಂಚ್ತಾ ನಮ್ಮ ಹುಡ್ಲುಗೆಲ್ಲಾ ಡ್ರಗ್ಗು ಪಾಟಾಗಿಸಿ ಬಾಳಗೆಡಸ್ತಾವೆ. ಈ ಡ್ರಗ್ಗಿಸ್ಟುಗಳುನ್ನೆಲ್ಲಾ ಯಂಗೆ ಬಲಿ ಹಾಕದು?’ ತುರೇಮಣೆ ವಿಚಾರ ಮಂಡಿಸಿದರು.

‘ಜಂಬರ ಇಲ್ದಿರೋ ಇಂತೇ ಮನಿಯಾಳರನೆಲ್ಲಾ ವಾಪಸ್ ಅವರ ದೇಸಕ್ಕೆ ಕಳುಗಿಸಕ್ಕೆ ಮುಂಚೆ ಜೈಲಗಿಟ್ರೆ ಕಾಣದಂಗೆ ಕದ್ದು ಹೋತವಂತೆ. ಇವುಕ್ಕೆ ಕುತ್ತಿಗೆ ಮ್ಯಾಲೆ ಮಿದ್ದು ವಾಪಾಸ್ ಗದುಮಬೇಕು’ ನಾನು ಸಿಟ್ಟಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.