ದಿನ ಭವಿಷ್ಯ: ಜನವರಿ 7 ಬುಧವಾರ 2026– ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ
Published 6 ಜನವರಿ 2026, 19:06 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸತ್ಯದ ಹಾದಿಗೆ ಯಾವಾಗಲೂ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ. ಆದರೆ ಜಯವೂ ಇರುವುದು ಎಂಬುದನ್ನು ಅರಿಯಿರಿ. ನಿಮ್ಮ ನೆಚ್ಚಿನ ಕಲಾವಿದರನ್ನು ಭೇಟಿಯಾಗಲು ಸ್ನೇಹಿತರು ಸಹಾಯ ಮಾಡಲಿದ್ದಾರೆ.
ವೃಷಭ
ಬಹು ದಿನಗಳ ಕಠಿಣ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕವಾಗಿ ಅನುಕೂಲ ಮತ್ತು ಮನಸ್ಸಿಗೆ ಸಂತೋಷ ಉಂಟಾಗುವುದು. ಮನೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗುವುದು.
ಮಿಥುನ
ನಿರ್ಮಾಣ ಕಾರ್ಯದಂಥ ಯೋಜನೆಗಳು ನಿರಾತಂಕವಾಗಿ ಮುಂದುವರಿಯಲಿದೆ. ಬದಲಾವಣೆ ಬಯಸಿದಲ್ಲಿ ಕಾಯುವುದು ಆವಶ್ಯ. ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಕಂಡು ಬರುವುದು.
ಕರ್ಕಾಟಕ
ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಿ ಇರುವುದು. ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯು ಇರಲಿದೆ.
ಸಿಂಹ
ವಿಶೇಷ ಕಾರಣದಿಂದಾಗಿ ಮನೆಗೆ ಬರುತ್ತಿರುವ ಮಗಳಿಗೆ ಪ್ರಿಯವಾಗುವ ಖಾದ್ಯಗಳನ್ನು ತಯಾರು ಮಾಡುವಿರಿ. ಮಗಳ ಮಾತಿಗೆ ಬೆಲೆ ಕೊಡಿ. ಗುತ್ತಿಗೆ ವ್ಯವಹಾರಗಳಲ್ಲಿ ಎಡವಬಹುದು, ಜಾಗೃತರಾಗಿರಿ.
ಕನ್ಯಾ
ಕೆಲಸದ ಮೇಲೆ ಗಮನ ಕಡಿಮೆಯಾದಲ್ಲಿ ಸಿಗಬೇಕಾದ ಅವಕಾಶಗಳು ಬೇರೆಯವರ ಪಾಲಾಗಲಿವೆ. ಆದ್ದರಿಂದ ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ. ಎಲ್ಲಾ ಕಾರ್ಯಗಳು ಶುಭವಾಗುವುದು.
ತುಲಾ
ನೀವು ಅಂದುಕೊಂಡಂತೆ ಪ್ರಯಾಣ ಸುಗಮವಾಗಿರುವುದಿಲ್ಲ. ಆದ್ದರಿಂದ ರಾಹುಕಾಲದ ಬಳಿಕ ಸಂಚಾರ ಮಾಡಿ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ.
ವೃಶ್ಚಿಕ
ಉಪಾಹಾರ ಮಂದಿರ, ಐಸ್‌ಕ್ರೀಮ್, ತಂಪು ಪಾನೀಯದ ಅಂಗಡಿಯವರಿಗೆ ಈ ದಿನವು ಸುಗ್ಗಿ ಹಬ್ಬದಂತಾಗುವುದು. ಆಯುರ್ವೇದ ಔಷಧಿ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
ಧನು
ಈ ದಿನ ಗ್ರಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯುವುದು. ಈ ಫಲವನ್ನು ಸದುಪಯೋಗಪಡಿಸಿಕೊಳ್ಳಿರಿ. ಮಕ್ಕಳು ಮಳೆಯಲ್ಲಿ ನೆನೆಯದಂತೆ ನೋಡಿಕೊಳ್ಳುವುದೇ ಸವಾಲಾಗುವುದು.
ಮಕರ
ವಿವಾಹ ಸಂಬಂಧ ನಿಮ್ಮ ಮನೋಸಂಕಲ್ಪವನ್ನು ಈಡೇರಿಸಿಕೊಳ್ಳಲು ತಾಯಿಯ ಮತ್ತು ಅಣ್ಣಂದಿರ ಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುವಿರಿ. ಕುಟುಂಬದಲ್ಲಿ ನಡೆದ ದುರ್ಘಟನೆಗಳಿಂದ ಮನಸ್ಸು ದುರ್ಬಲವಾಗಬಹುದು.
ಕುಂಭ
ಬಹುಜನರಲ್ಲಿ ಮಾಡಿದ ಸಾಲಗಳು ತೀರಿದ್ದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ವ್ಯವಸಾಯಗಾರರಿಗೆ ಹೆಚ್ಚಿನ ಬೆಳೆ ಕೈ ಸೇರುವ ನಿರೀಕ್ಷೆ ಇರುವುದು. ಗುರುವಿನ ಮಾರ್ಗದರ್ಶನ ಪಡೆಯುವಿರಿ.
ಮೀನ
ಉದ್ಯೋಗ ಬದಲಾವಣೆ ವಿಚಾರದಲ್ಲಿದ್ದ ಗೊಂದಲವನ್ನು ಮಾರ್ಗದರ್ಶಕರ ಸೂಚನೆಯಂತೆ ನಿವಾರಿಸಿಕೊಳ್ಳಿರಿ. ಅಪರಿಚಿತರೊಬ್ಬರ ಅನವಶ್ಯಕವಾದ ಮಾತುಗಳು ನಿಮ್ಮ ತಾಳ್ಮೆಯನ್ನು ಕೆಡಿಸುತ್ತವೆ.