ಸೋಮವಾರ, 26 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಹಣ ಅಕ್ರಮ ವರ್ಗಾವಣೆ: ಪಿಎಸಿಎಲ್‌ನ ₹1,986 ಕೋಟಿ ಆಸ್ತಿ ಮುಟ್ಟುಗೋಲು

ED Investigation: ನವದೆಹಲಿ: ಚಂಡೀಗಢದ ಪರ್ಲ್ಸ್‌ ಆಗ್ರೋಟೆಕ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಪಿಎಸಿಎಲ್‌) ಸಂಸ್ಥೆ ವಿರುದ್ಧದ ₹48,000 ಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ₹1,986 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
Last Updated 26 ಜನವರಿ 2026, 16:02 IST
ಹಣ ಅಕ್ರಮ ವರ್ಗಾವಣೆ: ಪಿಎಸಿಎಲ್‌ನ ₹1,986 ಕೋಟಿ ಆಸ್ತಿ ಮುಟ್ಟುಗೋಲು

ಮಣಿಪುರ: ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಉಗ್ರರು

Manipur Unrest: ಇಂಫಾಲ್‌: ಶಂಕಿತ ಉಗ್ರರು ಸೋಮವಾರ ಮಧ್ಯಾಹ್ನ ಇಲ್ಲಿನ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಹಲವು ಮನೆ ಹಾಗೂ ಫಾರ್ಮ್‌ಹೌಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ರಾಜ್ಯದಲ್ಲಿ ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿದೆ.
Last Updated 26 ಜನವರಿ 2026, 16:02 IST
ಮಣಿಪುರ: ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಉಗ್ರರು

ಸಂವಿಧಾನವು ಬಲಿಷ್ಠ ಗಣರಾಜ್ಯವನ್ನು ನಿರ್ದೇಶಿಸಿದೆ: ನಿತಿನ್‌ ನವೀನ್

Indian Constitution: ನವದೆಹಲಿ: ‘ಭಾರತದ ಸಂವಿಧಾನವು ದೇಶದ ಆತ್ಮವಾಗಿದೆ. ಇದು ಸ್ವಾತಂತ್ರ್ಯಾ ನಂತರ ದೇಶವನ್ನು ಬಲಿಷ್ಠವಾದ, ಎಲ್ಲರನ್ನೂ ಒಳಗೊಂಡಂತಹ ಪ್ರಜಾಪ್ರಭುತ್ವ, ಗಣರಾಜ್ಯವಾಗಿ ಮುಂದುವರಿಯಲು ನಿರ್ದೇಶಿಸಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ತಿಳಿಸಿದರು.
Last Updated 26 ಜನವರಿ 2026, 16:00 IST
ಸಂವಿಧಾನವು ಬಲಿಷ್ಠ ಗಣರಾಜ್ಯವನ್ನು ನಿರ್ದೇಶಿಸಿದೆ:  ನಿತಿನ್‌ ನವೀನ್

ಮಹಾರಾಷ್ಟ್ರ: ಗಣರಾಜ್ಯೋತ್ಸವ ಭಾಷಣದಲ್ಲಿ ಅಂಬೇಡ್ಕರ್‌ ಹೆಸರು ಉಲ್ಲೇಖಿಸದ ಸಚಿವ

Ambedkar Name Row: ನಾಶಿಕ್‌: ನಾಶಿಕ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರು ಉಲ್ಲೇಖಿಸದಿರುವುದಕ್ಕೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಕ್ಷಮೆಯಾಚಿಸಿದ್ದಾರೆ.
Last Updated 26 ಜನವರಿ 2026, 16:00 IST
ಮಹಾರಾಷ್ಟ್ರ: ಗಣರಾಜ್ಯೋತ್ಸವ ಭಾಷಣದಲ್ಲಿ ಅಂಬೇಡ್ಕರ್‌ ಹೆಸರು ಉಲ್ಲೇಖಿಸದ ಸಚಿವ

ಯಮುನೆಗೆ ಗಂಗಾ ಮತ್ತು ಮುನಾಕ್‌ ನೀರು ತಿರುಗಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರ

River Pollution: ನವದೆಹಲಿ: ಯಮುನಾ ನದಿ ಸ್ವಚ್ಛತೆಗೆ ಸಂಬಂಧಿಸಿದಂತೆ ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಜತೆಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಸಭೆ ನಡೆಸಿದೆ. ಈ ವೇಳೆ ಕೈಗಾರಿಕಾ ತ್ಯಾಜ್ಯ ಮತ್ತು ಒಳಚರಂಡಿ ನೀರು ಯಮುನಾ ನದಿಯನ್ನು ಸೇರದಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.
Last Updated 26 ಜನವರಿ 2026, 16:00 IST
ಯಮುನೆಗೆ ಗಂಗಾ ಮತ್ತು ಮುನಾಕ್‌ ನೀರು ತಿರುಗಿಸಿ: ರಾಜ್ಯಗಳಿಗೆ ಕೇಂದ್ರ  ಸರ್ಕಾರ

ಪದ್ಮವಿಭೂಷಣ ಪ್ರಶಸ್ತಿ: ವಿ.ಎಸ್‌ ಅಚ್ಯುತಾನಂದನ್ ಕುಟುಂಬಕ್ಕೆ ಸಿಪಿಎಂ ಅನುಮತಿ

VS Achuthanandan: ತಿರುವನಂತಪುರ: ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ವಿ.ಎಸ್‌. ಅಚ್ಯುತಾನಂದನ್ ಅವರ ಕುಟುಂಬವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿಪಿಎಂನ ಕೇರಳ ರಾಜ್ಯ ಘಟಕ ಹೇಳಿದೆ. ಅಚ್ಯುತಾನಂದನ್ ಅವರನ್ನು ಮರಣೋತ್ತರವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 26 ಜನವರಿ 2026, 16:00 IST
ಪದ್ಮವಿಭೂಷಣ ಪ್ರಶಸ್ತಿ: ವಿ.ಎಸ್‌ ಅಚ್ಯುತಾನಂದನ್ ಕುಟುಂಬಕ್ಕೆ ಸಿಪಿಎಂ ಅನುಮತಿ

ಮುಂಬೈ: ₹55 ಕೋಟಿ ಮೌಲ್ಯದ ಡ್ರಗ್‌ ವಶಕ್ಕೆ

Mumbai Drug Bust: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮೊಬೈಲ್‌ ಮೆಫೆಡ್ರೋನ್‌ ಉತ್ಪಾದನಾ ಘಟಕವನ್ನು ಪತ್ತೆ ಮಾಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ₹55 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದೆ.
Last Updated 26 ಜನವರಿ 2026, 15:54 IST
ಮುಂಬೈ: ₹55 ಕೋಟಿ ಮೌಲ್ಯದ ಡ್ರಗ್‌ ವಶಕ್ಕೆ
ADVERTISEMENT

ಸಹಜೀವನಕ್ಕೆ ಪಾಶ್ಚಿಮಾತ್ಯ ವಿಚಾರಗಳ ಪ್ರೇರಣೆ: ಅಲಹಾಬಾದ್‌ ಹೈಕೋರ್ಟ್‌

‘ಪಾಶ್ಚಿಮಾತ್ಯ ವಿಚಾರಗಳಿಂದ ಪ್ರೇರಣೆಗೊಂಡು ಯುವಕರು ಸಹಜೀವನ ನಡೆಸಲು ಮುಂದಾಗುತ್ತಿದ್ದಾರೆ. ಇಂಥ ಯುವಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೊನೆಯಲ್ಲಿ ಸಂಬಂಧ ಸರಿಬರಲಿಲ್ಲ ಎಂದಾದರೆ, ಅತ್ಯಾಚಾರದ ಪ್ರಕರಣ ದಾಖಲಿಸುವುದು ಸರ್ವೇಸಾಮಾನ್ಯವಾಗಿದೆ’ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 26 ಜನವರಿ 2026, 15:54 IST
ಸಹಜೀವನಕ್ಕೆ ಪಾಶ್ಚಿಮಾತ್ಯ ವಿಚಾರಗಳ ಪ್ರೇರಣೆ: ಅಲಹಾಬಾದ್‌ ಹೈಕೋರ್ಟ್‌

ಸ್ವಂತ ರಾಜಧಾನಿ ಚಂಡೀಗಢಕ್ಕಾಗಿ ಸರ್ವ ಪ್ರಯತ್ನ: ಪಂಜಾಬ್‌ ಸಿಎಂ ಭಗವಂತ ಮಾನ್‌

Bhagwant Mann: ‘ಪಂಜಾಬ್‌ನ ನಿಜವಾದ ರಾಜಧಾನಿ ಚಂಡೀಗಢ. ಆದರೆ, ಅದನ್ನು ಅನ್ಯಾಯವಾಗಿ ನಿರಾಕರಿಸಲಾಗಿದೆ. ಅದನ್ನು ಪಡೆಯಲು ರಾಜ್ಯ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡಲಿದೆ’ ಎಂದು ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಹೇಳಿದ್ದಾರೆ.
Last Updated 26 ಜನವರಿ 2026, 15:54 IST
ಸ್ವಂತ ರಾಜಧಾನಿ ಚಂಡೀಗಢಕ್ಕಾಗಿ ಸರ್ವ ಪ್ರಯತ್ನ: ಪಂಜಾಬ್‌ ಸಿಎಂ ಭಗವಂತ ಮಾನ್‌

ಜನರು ತಮ್ಮ ಕರ್ತವ್ಯ ಪಾಲಿಸಬೇಕು: ಮೋಹನ್‌ ಭಾಗವತ್‌ಭಾಗವತ್‌

RSS Chief Mohan Bhagwat: ‘ಭಾರತವನ್ನು ವಿಶ್ವದ ಮುಂಚೂಣಿ ಗಣರಾಜ್ಯವನ್ನಾಗಿ ಮಾಡಲು ದೇಶದ ನಾಗರಿಕರು ಸಂವಿಧಾನದಲ್ಲಿ ಅಡಕವಾಗಿರುವ ಪವಿತ್ರ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು. ಸಂತೋಷ, ಶಾಂತಿ ಮತ್ತು ಧರ್ಮದ ಸಂದೇಶವನ್ನು ಜಗತ್ತಿಗೆ ಸಾರಬೇಕು’ ಎಂದು ಕರೆ ನೀಡಿದ್ದಾರೆ.
Last Updated 26 ಜನವರಿ 2026, 15:53 IST
ಜನರು ತಮ್ಮ ಕರ್ತವ್ಯ ಪಾಲಿಸಬೇಕು: ಮೋಹನ್‌ ಭಾಗವತ್‌ಭಾಗವತ್‌
ADVERTISEMENT
ADVERTISEMENT
ADVERTISEMENT