ಕೃತಕ ಬುದ್ಧಿಮತ್ತೆಯಿಂದ ಉತ್ಪಾದಕತೆ ಸೇವಾ ವಲಯ ಸಂಶೋಧನೆಗಳು ಇನ್ನಷ್ಟು ಉತ್ತಮವಾಗಲಿವೆ. ಮನುಷ್ಯರ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸಮ ಸಮಾಜ ನಿರ್ಮಾಣ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ’
– ವಿವೇಕ್ ತೋಂಟದಾರ್ಯ ನಿರ್ದೇಶಕ ಮೈಂಡ್ ಡೈನಾಮಿಕ್ಸ್ ಇಂಟರ್‌ನ್ಯಾಷನಲ್ ಲಂಡನ್
ಮದನ್ ಶ್ರೀನಿವಾಸನ್
‘ಕೃತಕ ಬುದ್ಧಿಮತ್ತೆ ನೌಕರಿಯನ್ನು ಕಸಿದುಕೊಳ್ಳುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆ ಬಳಸುವ ವ್ಯಕ್ತಿ ನೌಕರಿಯನ್ನು ಕಿತ್ತುಕೊಳ್ಳಬಲ್ಲ. ಕೃತಕ ಬುದ್ಧಿಮತ್ತೆ ಎಂಬುದು ದೇವರಲ್ಲ. ಅದೊಂದು ಮನುಷ್ಯನೇ ನಿರ್ಮಿಸಿದ ವಿನ್ಯಾಸ. ಇದು ಸಮಾಜವನ್ನು ಮೇಲ್ಮಟ್ಟಕ್ಕೆ ಏರಿಸುತ್ತದೆಯೇ ಹೊರತು ವಿಭಜಿಸುವುದಿಲ್ಲ. ಕ್ರಿಯಾತ್ಮಕ ಆಲೋಚನೆಯನ್ನು ಇನ್ನಷ್ಟು ವೃದ್ಧಿಸುತ್ತದೆ. ಬಹುತ್ವವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ –
ಡಾ. ಮದನ ಕುಮಾರ್ ಶ್ರೀನಿವಾಸನ್
ಶಿವರಾಂ
ಕೃತಕ ಬುದ್ಧಿಮತ್ತೆಯಿಂದ ಜನರ ಬದಕು ಇನ್ನಷ್ಟು ಉತ್ತಮವಾಗಲಿದೆ. ಆದರೆ ಇದರ ಬಳಕೆ ಮನುಕುಲಕ್ಕೆ ಪೂರಕವಾಗಿರಬೇಕು. ಉದ್ಯೋಗ ಸೃಜಿಸುವಂತಿರಬೇಕು ಜನರ ಜೀವನ ಮಟ್ಟ ಇನ್ನಷ್ಟು ಉತ್ತಮವಾಗುವಂತಿರಬೇಕು.
– ಕೆ.ಆರ್. ಶಿವರಾಮ್ ಸಿಇಒ ಹಾಗೂ ಸಹ ಸಂಸ್ಥಾಪಕ ಇನ್ನರ್‌ವರ್ಸ್ ಟೆಕ್