ಕೊಲಂಬೊ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಶಕ್ತಿ ಮತ್ತು ಪಾಕಿಸ್ತಾನದ ಸ್ಪಿನ್ನರ್ಗಳ ಮುಖಾಮುಖಿಗೆ ಆರ್. ಪ್ರೇಮದಾಸ ಕ್ರೀಡಾಂಗಣ ಸಿದ್ಧವಾಗಿದೆ.

ಸೂಪರ್ 8ರ ಹಂತದ ಮೊದಲ ಪಂದ್ಯವು ಶನಿವಾರ ಇಲ್ಲಿ ನಡೆಯಲಿದೆ. ಎರಡೆನೇ ಗುಂಪಿನಲ್ಲಿರುವ ಉಭಯ ತಂಡಗಳು ಹಣಾಹಣಿಯಾಗಲಿವೆ. ಕಿವೀಸ್ ಬಳಗದ ಆರಂಭಿಕ ಜೋಡಿ ಟೀಮ್ ಸೀಫರ್ಟ್ ಮತ್ತು ಫಿನ್ ಅಲೆನ್ ಅವರಿಬ್ಬರೂ ಸೇರಿ ಒಟ್ಟು ಮೂರು ಶತಕ ದಾಖಲಿಸಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಾರ್ಕ್ ಚಾಪ್ಮನ್ ಮತ್ತು ಡ್ಯಾರಿಲ್ ಮಿಚೆಲ್ ಅವರು ಲಯಕ್ಕೆ ಮರಳಬೇಕಿದೆ. ಈ ಟೂರ್ನಿಯಲ್ಲಿ ಫಿಲಿಪ್ಸ್ ಮತ್ತು ರಚಿನ್ ಅವರು ತಲಾ ಒಂದು ಅರ್ಧಶತಕ ಗಳಿಸಿದ್ದಾರೆ. ರಚಿನ್ ಒಟ್ಟು 72 ರನ್ ಗಳಿಸಿದ್ದು, ಅದರಲ್ಲಿ ಕೆನಡಾ ಎದುರಿನ ಪಂದ್ಯದಲ್ಲಿ ಹೊಡೆದ 59 ರನ್ಗಳು ಸೇರಿವೆ.

ಪವರ್ಪ್ಲೇನಲ್ಲಿ ಅಲೆನ್ ಮತ್ತು ಸೀಫರ್ಟ್ ಅವರು ಹಾಕಿಕೊಟ್ಟ ಉತ್ತಮ ಅಡಿಪಾಯದ ಮೇಲೆ ದೊಡ್ಡ ಮೊತ್ತ ಪೇರಿಸುವ ಕಾರ್ಯವನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಮಾಡಬೇಕು. ಆಗ ಎದುರಾಳಿ ತಂಡದ ಮೇಲೆ ಒತ್ತಡ ಹೆಚ್ಚಿಸಲು ಸಾಧ್ಯವಾಗುತ್ತದೆ.

ಕಿವೀಸ್ ತಂಡವು ಕೊಲಂಬೊದಲ್ಲಿ ಮೊದಲ ಪಂದ್ಯ ಆಡಲಿವೆ. ಇದು ಕೂಡ ತಂಡಕ್ಕೆ ಪ್ರಮುಖ ಸವಾಲಾಗಲಿದೆ. ಏಕೆಂದರೆ; ಪಾಕಿಸ್ತಾನ ತಂಡವು ಟೂರ್ನಿಯ ಆರಂಭದಿಂದಲೂ ಇದೇ ನಗರದಲ್ಲಿ ಬೀಡುಬಿಟ್ಟಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಎರಡು ಪಂದ್ಯಗಳನ್ನೂ ಆಡಿದೆ. ಪಾಕ್ ತಂಡದ ಸ್ಪಿನ್ನರ್ಗಳು ಮತ್ತು ಬೌಲರ್ಗಳಿಗೆ ಇಲ್ಲಿಯ ಪಿಚ್ ಸ್ವರೂಪ ಚೆನ್ನಾಗಿ ಗೊತ್ತಿದೆ.

ಸ್ಪಿನ್ನರ್ಗಳಾದ ಉಸ್ಮಾನ್ ತಾರೀಖ್, ಅಬ್ರಾರ್ ಅಹಮದ್, ಸೈಮ್ ಅಯೂಬ್, ಮೊಹಮ್ಮದ್ ನವಾಜ್ ಮತ್ತು ಶಾದಾಬ್ ಖಾನ್ ಅವರು ಪಾಕ್ ತಂಡಕ್ಕೆ ಬಲ ತುಂಬುವ ಪ್ರಮುಖರಾಗಿದ್ದಾರೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಕೊರತೆಗಳು ಇವೆ. ಸಾಹೀಬ್ಝಾದಾ ಫರ್ಹಾನ್ (220 ರನ್) ಹಾಗೂ ಶಾದಾಬ್ ಖಾನ್ (88 ರನ್) ಅವರು ಪಾಕ್ ಪರ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್ಗಳು. ಅನುಭವಿ ಬ್ಯಾಟರ್ ಬಾಬರ್ ಆಜಂ (4 ಪಂದ್ಯಗಳಿಂದ 66) ಅವರು 115.78ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. ಇದರಿಂದಾಗಿ ಮಧ್ಯಮ ಕ್ರಮಾಂಕವು ದುರ್ಬಲವಾಗಿದೆ. ಕಳೆದ ಪಂದ್ಯಗಳಲ್ಲಿ ಬೆಂಚ್ನಲ್ಲಿದ್ದ ಫಕಾರ್ ಜಮಾನ್ ಅವರಿಗೆ ಅವಕಾಶ ಕೊಟ್ಟು ಬಾಬರ್ ಅವರಿಗೆ ವಿಶ್ರಾಂತಿ ಕೊಡುವ ಸಾಧ್ಯತೆ ಇದೆ.

ಗುಂಪು ಹಂತದಲ್ಲಿ ನಮೀಬಿಯಾ ಎದುರಿನ ಪಂದ್ಯದಲ್ಲಿ ಜಯಿಸುವುದು ತಂಡಕ್ಕೆ ಮುಖ್ಯವಾಗಿತ್ತು. ಆದರೆ ಶಹೀನ್ ಶಾ ಅಫ್ರಿದಿ ಅವರನ್ನು ಆ ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಅವರು ಮೂರು ಪಂದ್ಯಗಳಿಂದ ಪಡೆದಿರುವುದು ಕೇವಲ 3 ವಿಕೆಟ್ ಮಾತ್ರ. ನಿಧಾನಗತಿಯಲ್ಲಿ ಚೆಂಡಿನ ಚಲನೆ ಮತ್ತು ಪುಟಿತ ಇರುವ ಪಿಚ್ನಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ತೋರುವಲ್ಲಿ ವಿಫಲರಾಗಿದ್ದಾರೆ.

ಕಿವೀಸ್ ತಂಡವೂ ತಮ್ಮ ವೇಗದ ಬೌಲರ್ಗಳಾದ ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ, ಜೇಕಬ್ ಡಫಿ ಮತ್ತು ಜೇಮ್ಸ್ ನಿಶಾಮ್ ಅವರು ಇದುವರೆಗೂ ದುಬಾರಿಯಾಗಿದ್ದಾರೆ. ಆದ್ದರಿಂದ ಸ್ಪಿನ್ನರ್ಗಳಾದ ಮಿಚೆಲ್ ಸ್ಯಾಂಟನರ್, ಈಶ್ ಸೋಧಿ, ಸಾಂದರ್ಭಿಕ ಬೌಲರ್ಗಳಾದ ರಚಿನ್ ಮತ್ತು ಫಿಲಿಪ್ಸ್ ಅವರ ಮೇಲೆ ತಂಡವು ಹೆಚ್ಚು ಅವಲಂಬಿತವಾಗುವುದು ಬಹುತೇಕ ಖಚಿತವಾಗಿದೆ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.