ಬ್ಯಾಂಕಾಕ್: ನಾಯಕಿ ರಾಧಾ ಯಾದವ್ ಅವರ ಆಲ್ರೌಂಡ್ ಆಟದ ನೆರವಿನಿಂದ ಭಾರತ ಎ ತಂಡವು ಮಹಿಳಾ ರೈಸಿಂಗ್ ಸ್ಟಾರ್ಸ್ ಟಿ20 ಏಷ್ಯಾ ಕಪ್ ಟೂರ್ನಿಯಲ್ಲಿ ಶುಕ್ರವಾರ ಶ್ರೀಲಂಕಾ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿ ಫೈನಲ್ಗೆ ಮುನ್ನಡೆಯಿತು.

ಭಾರತ ತಂಡ ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಬಾಂಗ್ಲಾದೇಶ ವನಿತೆಯರು ಮತ್ತೊಂದು ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು 54 ರನ್ಗಳಿಂದ ಸೋಲಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ಶ್ರೀಲಂಕಾ ನಿರ್ಧಾರ ಆ ತಂಡಕ್ಕೆ ತಿರುಗುಬಾಣವಾಯಿತು. ಎಡಗೈ ಸ್ಪಿನ್ನರ್ ರಾಧಾ (19ಕ್ಕೆ4) ನೇತೃತ್ವದಲ್ಲಿ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು ಎರಡು ಎಸೆತಗಳು ಉಳಿದಿರುವಂತೆ 118 ರನ್ಗಳಿಗೆ ಉರುಳಿಸಿದರು. ಎಡಗೈ ಸ್ಪಿನ್ನರ್ ತನುಜಾ ಕನ್ವರ್ (20ಕ್ಕೆ2), ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (9ಕ್ಕೆ2) ಅವರು ನಾಯಕಿಗೆ ಬೆಂಬಲ ನೀಡಿದರು. ದ್ವೀಪ ರಾಷ್ಟ್ರದ ಪರ ಆರಂಭ ಆಟಗಾರ್ತಿ ಸಂಜನಾ ಕವಿಂದಿ (31 ರನ್, 35 ಎಸೆತ) ಸ್ವಲ್ಪ ಪ್ರತಿರೋಧ ತೋರಿದರಷ್ಟೇ.

ಶ್ರೀಲಂಕಾ ಆರಂಭ ಉತ್ತಮವಾಗಿತ್ತು. 10 ಓವರುಗಳ ಬಳಿಕ 2 ವಿಕೆಟ್ಗೆ 71 ರನ್ ಗಳಿಸಿ ಸವಾಲಿನ ಮೊತ್ತ ಗಳಿಸುವಂತೆ ಕಂಡಿತು. ಆದರೆ ಸ್ಪಿನ್ನರ್ಗಳು ದಾಳಿಗೆ ಕುಸಿಯತೊಡಗಿತು.

ಭಾರತ ತಂಡ 13.3 ಓವರುಗಳಲ್ಲೇ 5 ವಿಕೆಟ್ ಕಳೆದುಕೊಂಡು ಗುರಿತಲುಪಿತು. ಆರಂಭ ಆಟಗಾರ್ತಿ ವೃಂದಾ ದಿನೇಶ್ 20 ಎಸೆತಗಳಲ್ಲಿ 42 ರನ್ ಗಳಿಸಿ ಬಿರುಸಿನ ಆರಂಭಕ್ಕೆ ನೆರವಾದರು. ವೃಂದಾ ಸೇರಿ ಮೂವರು 21 ರನ್ ಅಂತರದಲ್ಲಿ ನಿರ್ಗಮಿಸಿದ್ದಾಗ ಲಂಕಾ ಹೋರಾಟ ನೀಡುವಂತೆ ಕಂಡಿತು. ಆದರೆ ರಾಧಾ ಯಾದವ್ ಬ್ಯಾಟಿಂಗ್ನಲ್ಲೂ ಮಿಂಚಿ 18 ಎಸೆತಗಳಲ್ಲಿ ಅಜೇಯ 31 ರನ್ ಸಿಡಿಸಿದರು.

ಸಂಕ್ಷಿಪ್ತ ಸ್ಕೋರು

ಲಂಕಾ ‘ಎ’ ಮಹಿಳಾ ತಂಡ: 19.4 ಓವರುಗಳಲ್ಲಿ 118 (ಸಂಜನಾ ಕವಿಂದಿ 31; ತನುಜಾ ಕನ್ವರ್ 20ಕ್ಕೆ2, ರಾಧಾ ಯಾದವ್ 19ಕ್ಕೆ4, ಪ್ರೇಮಾ ರಾವತ್ 9ಕ್ಕೆ2)

ಭಾರತ ‘ಎ’ ಮಹಿಳಾ ತಂಡ: 13.3 ಓವರುಗಳಲ್ಲಿ 5 ವಿಕೆಟ್ಗೆ 119 (ವೃಂದಾ ದಿನೇಶ್ 42, ರಾಧಾ ಯಾದವ್ ಔಟಾಗದೇ 31; ಶಶಿನಿ ಗಿಮ್ಹನಿ 33ಕ್ಕೆ2).

ಪಂದ್ಯದ ಆಟಗಾರ್ತಿ: ರಾಧಾ ಯಾದವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.