ಅಹಮದಾಬಾದ್: ನಾಯಕ ಮಯಂಕ್ ಅಗರವಾಲ್ ಪ್ರಸಕ್ತ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದರು. ಆದರೆ ದೇವದತ್ತ ಪಡಿಕ್ಕಲ್ ಕೇವಲ ಐದನೇ ಶತಕ ಹೊಡೆಯುವ ಅವಕಾಶವನ್ನು ಒಂಬತ್ತು ರನ್ಗಳ ಅಂತರದಿಂದ ಕೈತಪ್ಪಿಸಿಕೊಂಡರು. ಅವರಿಬ್ಬರ ಜೊತೆಯಾಟದ ಬಲದಿಂದ ‘ಹಾಲಿ ಚಾಂಪಿಯನ್’ ಕರ್ನಾಟಕವು ರಾಜಸ್ಥಾನ ಎದುರು ಗೆದ್ದು, ಎಂಟರ ಘಟ್ಟ ಪ್ರವೇಶಿಸಿತು.

ಮಂಗಳವಾರ ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕವು 150 ರನ್ಗಳಿಂದ ಗೆದ್ದಿತು. ಸತತ ಆರನೇ ಪಂದ್ಯ ಜಯಿಸಿ, ಒಟ್ಟು 24 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಉಳಿಯಿತು. ಗುಂಪಿನಲ್ಲಿ ಇನ್ನೊಂದು ಪಂದ್ಯ ಬಾಕಿಯಿದ್ದು, ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ. ಆದರೆ ರಾಜಸ್ಥಾನ ತಂಡವು ಐದನೇ ಪಂದ್ಯ ಸೋತಿತು.

ಟಾಸ್ ಗೆದ್ದ ರಾಜಸ್ಥಾನವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಯಂಕ್ (100; 107ಎ, 4X9, 6X3) ಮತ್ತು ಪಡಿಕ್ಕಲ್ (91; 82ಎ, 4X12, 6X2) ಮೊದಲ ವಿಕೆಟ್ ಜೊತೆಯಾಟದಲ್ಲಿ 184 ರನ್ಗಳಿಂದ ಸೇರಿಸಿದರು. ಈ ಅಡಿಪಾಯದ ಮೇಲೆ ತಂಡವು 50 ಓವರ್ಗಳಲ್ಲಿ 7 ವಿಕೆಟ್ಗಳಿಗೆ 324 ರನ್ ಗಳಿಸಿತು. ಅದಕ್ಕುತ್ತರವಾಗಿ ರಾಜಸ್ಥಾನ ತಂಡವು ಕೇವಲ 174 ರನ್ ಹೊಡೆಯಿತು. ವೇಗಿ ಪ್ರಸಿದ್ಧ ಕೃಷ್ಣ (8–0–36–5) ಅಮೋಘ ಬೌಲಿಂಗ್ ಮುಂದೆ ರಾಜಸ್ಥಾನ ಕುಸಿಯಿತು.

ದೇವದತ್ತ ದಾಖಲೆ ಓಟ

ಟೂರ್ನಿಯಲ್ಲಿ ಐದನೇ ಶತಕ ಸಾಧನೆಯನ್ನು ದೇವದತ್ತ ತಪ್ಪಿಸಿಕೊಂಡರು. ಆದರೆ ಮೂರನೇ ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದರು. 2019–20ರಲ್ಲಿ ಅವರು 11 ಇನಿಂಗ್ಸ್ಗಳಿಂದ 609 ರನ್, 2020–21ರಲ್ಲಿ 8 ಇನಿಂಗ್ಸ್ಗಳಲ್ಲಿ 737 ರನ್ ಗಳಿಸಿದ್ದರು. ಅದರಲ್ಲಿ ಅವರು ಸತತ ನಾಲ್ಕು ಶತಕ ಹೊಡೆದಿದ್ದರು. ಈ ಬಾರಿ ಅವರು ಆರು ಇನಿಂಗ್ಸ್ಗಳಿಂದ 605 ರನ್ ಪೇರಿಸಿದ್ದಾರೆ. ಅದರಲ್ಲಿ ನಾಲ್ಕು ಶತಕಗಳಿವೆ.

ಎಡಗೈ ಬ್ಯಾಟರ್ ದೇವದತ್ತ, ಈ ಪಂದ್ಯದಲ್ಲಿ 110.98ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದರು.
.ರಾಜಸ್ಥಾನ ವಿರುದ್ಧವೂ ಪಡಿಕ್ಕಲ್ ಅಮೋಘ ಬ್ಯಾಟಿಂಗ್: ಹೊಸ ದಾಖಲೆ ಬರೆದ ಕನ್ನಡಿಗ.ವಿಜಯ್ ಹಜಾರೆ ಟ್ರೋಫಿ| ಮಯಂಕ್, ಪಡಿಕ್ಕಲ್ ಶತಕ: ಕರ್ನಾಟಕ ತಂಡದ ಯಶಸ್ಸಿನ ಓಟ.
ಇನ್ನೊಂದು ಬದಿಯಲ್ಲಿ ಮಯಂಕ್ ಅವರು ಏಕಾಗ್ರತೆ ಮತ್ತು ತಾಳ್ಮೆ ಮೇಳೈಸಿದ ಆಟವಾಡಿದರು. 29ನೇ ಓವರ್ನಲ್ಲಿ ದೇವದತ್ತ ಅವರನ್ನು ಕ್ಲೀನ್ಬೌಲ್ಡ್ ಮಾಡಿದ ಮಾನವ್ ಸುತಾರ್ ಸಂಭ್ರಮಿಸಿದರು. ಜೊತೆಯಾಟವೂ ಮುರಿದು ಬಿತ್ತು. ನಂತರದ ಆಟದಲ್ಲಿ ಮಯಂಕ್ ಅವರು ಇನಿಂಗ್ಸ್ ಕಟ್ಟುವ ಹೊಣೆ ನಿಭಾಯಿಸಿದರು. ಅವರು ಕುಕ್ನಾ ಅಜಯ್ ಸಿಂಗ್ ಬೌಲಿಂಗ್ನಲ್ಲಿ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ಆಡಿದ ಕೆ.ಎಲ್. ರಾಹುಲ್ (25; 28ಎ, 4X4) ಮತ್ತು ಅಭಿನವ್ ಮನೋಹರ್ (35; 27ಎ, 4X3, 6X2) ತಂಡದ ಮೊತ್ತವು 300ರ ಗಡಿ ದಾಟಲು ನೆರವಾದರು.

ರಾಜಸ್ಥಾನ ಇನಿಂಗ್ಸ್ನಲ್ಲಿ ಕರಣ್ ಲಂಬಾ (55; 66ಎ, 4X1, 6X2) ಅರ್ಧಶತಕ ಹೊಡೆದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್ಗಳಲ್ಲಿ 7ಕ್ಕೆ324 (ಮಯಂಕ್ ಅಗರವಾಲ್ 100, ದೇವದತ್ತ ಪಡಿಕ್ಕಲ್ 91, ಕೆ.ಎಲ್. ರಾಹುಲ್ 25, ಅಭಿನವ್ ಮನೋಹರ್ 35, ಶ್ರೇಯಸ್ ಗೋಪಾಲ್ ಔಟಾಗದೇ 19, ಕುಕ್ನಾ ಅಜಯ್ ಸಿಂಗ್ 66ಕ್ಕೆ2, ಮಾನವ್ ಸುತಾರ್ 51ಕ್ಕೆ2)

ರಾಜಸ್ಥಾನ: 38 ಓವರ್ಗಳಲ್ಲಿ 174 (ದೀಪಕ್ ಹೂಡಾ 29, ಕರಣ್ ಲಂಬಾ 55, ಕುಕ್ನಾ ಅಜಯ್ ಸಿಂಗ್ 25, ಪ್ರಸಿದ್ಧಕೃಷ್ಣ 36ಕ್ಕೆ5, ಶ್ರೀಷಾ ಆಚಾರ್ 35ಕ್ಕೆ2, ಶ್ರೇಯಸ್ ಗೋಪಾಲ್ 45ಕ್ಕೆ2)

ಫಲಿತಾಂಶ: ಕರ್ನಾಟಕ ತಂಡಕ್ಕೆ 150 ರನ್ ಜಯ.

ಪಂದ್ಯದ ಆಟಗಾರ: ಮಯಂಕ್ ಅಗರವಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.