ಅಹಮದಾಬಾದ್: ಇಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ಹಾಗೂ ರಾಜಸ್ಥಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಕರ್ನಾಟಕದ ಆರಂಭಿಕ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಮತ್ತೊಂದು ಅದ್ಭುತ ಇನಿಂಗ್ಸ್ ಆಡಿದ್ದು, ಕೇವಲ 9 ರನ್ಗಳಿಂದ ಶತಕ ವಂಚಿತರಾದರು.

ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಲಯದಲ್ಲಿರುವ ಪಡಿಕ್ಕಲ್ ಅವರು, ಕಳೆದ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದಾರೆ. ಮಾತ್ರವಲ್ಲ, 6ನೇ ಪಂದ್ಯದಲ್ಲಿ ಕೂಡ ಸ್ಫೋಟಕ 91 ರನ್ ಕಲೆಹಾಕುವ ಮೂಲಕ ಗಮನಸೆಳೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಂಕ್ ಅಗರವಾಲ್ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 184 ರನ್ಗಳ ಜೊತೆಯಾಟ ಆಡಿದರು. ಈ ಹಂತದಲ್ಲಿ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 91 ರನ್ ಗಳಿಸಿದ್ದ ಪಡಿಕ್ಕಲ್ ಅವರು ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರಿಗೆ ವಿಕೆಟ್ ಒಪ್ಪಿಸಿ ಶತಕದಿಂದ ವಂಚಿತರಾದರು.
.ಮುಂದುವರಿದ ಪಡಿಕ್ಕಲ್ ಬ್ಯಾಟಿಂಗ್ ವೈಭವ: ಕೊನೆಯ 5 ಇನಿಂಗ್ಸ್ಗಳಲ್ಲಿ 4 ಶತಕ.IPL 2026 ರಾಹುಲ್, ಪಡಿಕ್ಕಲ್ ಸೇರಿ 9 ಕನ್ನಡಿಗರು; ಯಾರು, ಯಾವ ತಂಡದಲ್ಲಿದ್ದಾರೆ?.
ಶತಕ ಸಿಡಿಸಿರುವ ನಾಯಕ ಮಯಂಕ್ ಅಗರವಾಲ್ ಅವರು ಇನಿಂಗ್ಸ್ ಮುಂದುವರೆಸಿದ್ದಾರೆ.

ಮೂರು ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್

ದೇವದತ್ತ ಪಡಿಕ್ಕಲ್ ಅವರು 2018ರಲ್ಲಿ ವಿಜಯ್ ಹಜಾರೆ ಟ್ರೋಫಿ ಮೂಲಕ ಲಿಸ್ಟ್ ಎ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಅವರು 2019–20ನೇ ಸಾಲಿನ ತಮ್ಮ ಎರಡನೇ ಆವೃತ್ತಿಯಲ್ಲಿ 11 ಇನಿಂಗ್ಸ್ಗಳಿಂದ 609 ರನ್ ಗಳಿಸಿದರು. ನಂತರ 2020-21 ಆವೃತ್ತಿಯಲ್ಲಿ 8 ಇನಿಂಗ್ಸ್ಗಳಿಂದ ಸತತ 4 ಶತಕ ಸಹಿತ 737 ರನ್ ಕಲೆಹಾಕಿದರು.

ಈ ಬಾರಿಯು ಕೂಡ ಅವರು ಆಡಿರುವ 6 ಇನಿಂಗ್ಸ್ಗಳಿಂದ ಈಗಾಗಲೇ 600ಕ್ಕೂ ಅಧಿಕ ರನ್ ದಾಖಲಿಸಿ ಮುನ್ನುಗ್ಗುತ್ತಿದ್ದಾರೆ. ಆ ಮೂಲಕ ವಿಜಯ್ ಹಜಾರೆ ಟ್ರೋಫಿಯ ಇತಿಹಾಸದಲ್ಲಿ ಮೂರು ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದರು.

ಕಳೆದ 6 ಇನಿಂಗ್ಸ್ಗಳಲ್ಲಿ ಪಡಿಕ್ಕಲ್ ಬ್ಯಾಟಿಂಗ್

ಜಾರ್ಖಂಡ್ ವಿರುದ್ಧ 147 ರನ್

ಕೇರಳ ವಿರುದ್ಧ 124 ರನ್

ತಮಿಳುನಾಡು ವಿರುದ್ಧ 22 ರನ್

ಪಾಂಡಿಚೇರಿ ವಿರುದ್ಧ 113 ರನ್

ತ್ರಿಪುರ ವಿರುದ್ಧ 108 ರನ್

ರಾಜಸ್ಥಾನ ವಿರುದ್ಧ 91 ರನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.