ರಾಯಪುರ: ರನ್ ಮೆಶಿನ್ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 53ನೇ ಶತಕ ಗಳಿಸಿದ್ದಾರೆ.

ರಾಯಪುರದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿ ಸ್ಮರಣೀಯ ಶತಕ ಗಳಿಸಿದ್ದಾರೆ.

ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲೂ ಕೊಹ್ಲಿ ಅಮೋಘ ಶತಕ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ 90 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದರು. ಅಂತಿಮವಾಗಿ 93 ಎಸೆತಗಳಲ್ಲಿ 102 ರನ್ ಗಳಿಸಿ ಔಟ್ ಆದರು. ಕೊಹ್ಲಿ ಇನಿಂಗ್ಸ್ನಲ್ಲಿ ಎರಡು ಸಿಕ್ಸರ್ ಹಾಗೂ ಏಳು ಬೌಂಡರಿಗಳು ಸೇರಿದ್ದವು.

37 ವರ್ಷದ ಕೊಹ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 84 ಶತಕಗಳ ಸಾಧನೆ ಮಾಡಿದ್ದಾರೆ.

ಒಂದೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಹೆಗ್ಗಳಿಕೆಯೂ ಕೊಹ್ಲಿ ಹೆಸರಲ್ಲಿದೆ. ಮೂರನೇ ಕ್ರಮಾಂಕದಲ್ಲಿ ಈವರೆಗೆ 46 ಶತಕಗಳನ್ನು ಸಿಡಿಸಿದ್ದಾರೆ.

ಒಟ್ಟಾರೆಯಾಗಿ 12ನೇ ಸಲ ಸತತ ಎರಡು ಶತಕ ಗಳಿಸಿದ ದಾಖಲೆಗೂ ಕೊಹ್ಲಿ ಭಾಜನರಾಗಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಗಳಿಸಿದ 135 ರನ್ ನೆರವಿನಿಂದ ಭಾರತ ತಂಡವು 17 ರನ್ ಅಂತರದ ಗೆಲುವು ದಾಖಲಿಸಿತ್ತು.
.IND vs SA: ಏಕದಿನದಲ್ಲಿ ಕಿಂಗ್ ಕೊಹ್ಲಿ 52ನೇ ಶತಕ ಸಾಧನೆ.ಎರಡನೇ ಪಂದ್ಯದಲ್ಲೂ ಟಾಸ್ ಸೋತ ಭಾರತ:ಕೊನೆಯ ಬಾರಿ ಟಾಸ್ ಗೆದ್ದಿದ್ದು ಆ ಪಂದ್ಯದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.