

ಬೇಡ್ತಿ ನದಿಯ ಭಾಗವಾಗಿರುವ ಶಾಲ್ಮಲಾ ನದಿಯಲ್ಲಿರುವ ಶಿರಸಿ ತಾಲ್ಲೂಕಿನ ಐತಿಹಾಸಿಕ ಸಹಸ್ರಲಿಂಗ ತಾಣ.

ಹಾವೇರಿ ತಾಲ್ಲೂಕಿನ ದೇವಗಿರಿ ಬಳಿ ಹರಿಯುತ್ತಿರುವ ವರದಾ ನದಿಯ ನೋಟ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಎತ್ತಿನಹೊಳೆ ಯೋಜನೆ ಕಾಲುವೆ ಕಾಮಗಾರಿ.

ಅಂಕೋಲಾದ ಕೇಣಿಯಲ್ಲಿ ನಿರ್ಮಿಸಲಿರುವ ಗ್ರೀನ್‌ಫೀಲ್ಡ್ ಬಂದರು ಯೋಜನೆ ವಿರುದ್ಧ ಬೇಲೆಕೇರಿ ಸಮೀಪ ಸಮುದ್ರದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಮೀನುಗಾರರನ್ನು ನಿಯಂತ್ರಿಸಲು ಕರಾವಳಿ ಕಾವಲು ಪಡೆ ಪೊಲೀಸರು ಪ್ರಯತ್ನಿಸಿದ್ದರು.

ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆ ಸಲುವಾಗಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದ ಪರಿಣಾಮ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿರುವುದು.

ಅರಣ್ಯ ನಾಶದಿಂದ ವನ್ಯಪ್ರಾಣಿಗಳ ಆವಾಸ ಸ್ಥಾನ ಛಿದ್ರವಾಗಿ ಊರು-ಕೇರಿ ಮತ್ತು ಕೃಷಿಭೂಮಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರುತ್ತದೆ. ಬೇಡ್ತಿ-ಅಘನಾಶಿನಿ ನದಿ ತಪ್ಪಲಿನ ಲಕ್ಷಾಂತರ ಜನರ ಜೀವನೋಪಾಯಕ್ಕೆ ತೊಂದರೆ ಆಗುತ್ತದೆ.- ಕೇಶವ ಕೊರ್ಸೆ, ಜೀವ ಸಂರಕ್ಷಣಾ ಶಾಸ್ತ್ರಜ್ಞ
ನದಿತಿರುವು ಯೋಜನೆಗಳಿಂದ ನದಿಯ ಸಹಜಪ್ರವಾಹ ಕಡಿಮೆಯಾಗುತ್ತದೆ. ಕರಾವಳಿ ಪ್ರದೇಶಕ್ಕೆ ಸಾಗುವ ಸಹಜ ನೀರು ಹಾಗೂ ಪೋಶಕಾಂಶದ ಪ್ರಮಾಣ ಕುಗ್ಗಿ ಮೀನುಗಾರಿಕೆ ಹಾಗೂ ಕೃಷಿಯ ಫಲವತ್ತತೆ ಕುಸಿಯುತ್ತದೆ.- ವಿ.ಎನ್.ನಾಯಕ, ಕಡಲಜೀವಶಾಸ್ತ್ರಜ್ಞ
ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ 40ಕ್ಕೂ ಹೆಚ್ಚು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಅರಣ್ಯ ಮತ್ತು ಜೀವವಿರೋಧಿ ಯೋಜನೆಗಳನ್ನು ಜಾರಿಗೊಳಿಸದೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು- ಅನಂತ ಹೆಗಡೆ ಅಶೀಸರ, ಅಧ್ಯಕ್ಷ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ
ಅರಣ್ಯ ಸಂಪತ್ತಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯವಿದೆ. ಒಂದು ವೇಳೆ ಪ್ರಾಕೃತಿಕ ಸಂರಕ್ಷಣೆಗೆ ಆದ್ಯತೆ ನೀಡದಿದ್ದಲ್ಲಿ ಒಟ್ಟಾರೆ ಜೀವ ಸಂಕುಲಕ್ಕೆ ಅಪಾಯ ಆಗಲಿದೆ. ಹಲವು ಸಮಸ್ಯೆ ಕಾಡುತ್ತವೆ.- ಬಾಲಚಂದ್ರ ಸಾಯಿಮನೆ, ಪರಿಸರವಾದಿ
ಪಶ್ಚಿಮ ಘಟ್ಟಗಳ ಮಹತ್ವವನ್ನು ಅರಿಯುವ ಕೆಲಸ ಸರ್ಕಾರದಿಂದ ಆಗಬೇಕು. ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ಅದರ ಸಾಧಕ–ಬಾಧಕಗಳನ್ನು ಅರಿಯಬೇಕು. ಇಲ್ಲದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ.- ಮಹಾಬಲೇಶ್ವರ ಸಾಯಿಮನೆ, ಪರಿಸರವಾದಿ
ಬೇಡ್ತಿ– ವರದಾ ನದಿಗಳ ಜೋಡಣೆ ಹಾವೇರಿ ಮತ್ತು ಗದಗ ಜಿಲ್ಲೆ ಜನರ ಕನಸು. ಇದರಿಂದ ಕುಡಿಯಲು ಮತ್ತು ಕೃಷಿಗೂ ನೀರು ಸಿಗುತ್ತದೆ. ಯೋಜನೆ ಜಾರಿಗೆ ಎಲ್ಲರೂ ಸಹಕರಿಸಬೇಕು. ಯೋಜನೆ ವಿರೋಧಿಸುವುದು ಸರಿಯಲ್ಲ.– ಬಸವರಾಜ ಬೊಮ್ಮಾಯಿ, ಸಂಸದ
ಬೃಹತ್ ಯೋಜನೆಗಳ ಅನುಷ್ಠಾನದಿಂದ ಪಶ್ಚಿಮ ಘಟ್ಟಕ್ಕೆ ಅಪಾಯವಾಗಲಿದೆ. ಪರಿಸರ ಅಲ್ಲದೇ ಒಟ್ಟಾರೆ ಜೀವ ಸಂಕುಲ ರಕ್ಷಣೆಗೆ ಹೋರಾಟ ಅನಿವಾರ್ಯ ಆಗಿದೆ- ಗಿರಿಧರ ಕುಲಕರ್ಣಿ, ಪರಿಸರವಾದಿ
ಪರಿಕಲ್ಪನೆ: ಜಿ.ಡಿ.ಯತೀಶ್‌ಕುಮಾರ್ | ಪೂರಕ ಮಾಹಿತಿ: ಸಂತೋಷ ಜಿಗಳಿಕೊಪ್ಪ, ಚಿದಂಬರಪ್ರಸಾದ, ಜಿ.ಎಚ್.ವೆಂಕಟೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.